Udayavni Special

ರೈಲ್ವೆ ಖಾಸಗೀಕರಣ ನಿರ್ಧಾರ ಹಿಂಪಡೆಯಿರಿ


Team Udayavani, Sep 16, 2020, 7:02 PM IST

ರೈಲ್ವೆ  ಖಾಸಗೀಕರಣ ನಿರ್ಧಾರ ಹಿಂಪಡೆಯಿರಿ

ಬಳ್ಳಾರಿ: ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ರೈಲ್ವೆ ಇಲಾಖೆಯನ್ನು ಖಾಸಗೀಕಣಗೊಳಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರಕೈಬಿಡಬೇಕು ಎಂದು ಆಗ್ರಹಿಸಿ ನಗರದ ರೈಲು  ನಿಲ್ದಾಣದ ಆವರಣದಲ್ಲಿ ಸೋಷಲಿಸ್ಟ್‌ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ-ಕಮ್ಯುನಿಸ್ಟ್‌) ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಭಾರತೀಯ ರೈಲ್ವೆ ಪ್ರಪಂಚದಲ್ಲಿಯೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ದೇಶದ ಆರ್ಥಿಕತೆಯ ಬಹುದೊಡ್ಡ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಪ್ರತಿದಿನ ಸುಮಾರು ಎರಡೂವರೆ ಕೋಟಿಯಷ್ಟು ಜನರನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಸರ್ಕಾರದ ಅಧಿಧೀನದ ಬಹು ದೊಡ್ಡ ಸಾರ್ವಜನಿಕ ಉದ್ಯಮ ರೈಲ್ವೆ ವಲಯವಾಗಿದೆ. ಜನಸಾಮಾನ್ಯರಿಗೆ ಸುಲಭ ದರದಲ್ಲಿ ಪ್ರಯಾಣ ಸೌಕರ್ಯ ಕಲ್ಪಿಸುವ ಈ “ಹೆಮ್ಮೆಯ ಬಹು ದೊಡ್ಡ ಉದ್ಯಮ’ವನ್ನು ಇದೀಗ ಕೇಂದ್ರ ಸರ್ಕಾರ ಖಾಸಗೀಕರಣ ನೀತಿಗಳಿಗೆ ಹೆಚ್ಚು ಆದ್ಯತೆ ನೀಡಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವ ಉದ್ದೇಶದಿಂದ 2014ರಲ್ಲಿ “ವಿವೇಕ್‌ ದೇವರಾಯ ಸಮಿತಿ’ಯನ್ನು ರಚಿಸಿ, ಇಡೀ ಇಲಾಖೆಯನ್ನು ತುಂಡು ತುಂಡಾಗಿಸಲು ಯೋಜನೆ ರೂಪಿಸಿಕೊಂಡಿತು. ರೈಲ್ವೆ ನಿರ್ಮಾಣ, ಕಾರ್ಯಾಚರಣೆಗಳು, ನಿರ್ವಹಣೆ, ರೈಲ್ವೆ ಕೋಚ್‌, ಮೀಸಲು ಮಾರ್ಗಗಳು, ಟ್ರೇನ್‌ ಸೆಟ್‌ಗಳು ಸೇರಿದಂತೆ ಭಾರತೀಯ ರೈಲ್ವೆ ಇಲಾಖೆ ನಿರ್ವಹಿಸುವ ಎಲ್ಲ ವಿಭಾಗಗಳನ್ನು ವಿಭಜಿಸಿ, ಖಾಸಗೀಕರಣಗೊಳಿಸುವ ನಿರ್ಧಾರ ಕೈಗೊಂಡಿತು. ಇದಕ್ಕೆ ಶೇ. 100ರಷ್ಟು ನೇರ ವಿದೇಶಿ ಬಂಡವಾಳ ಹೂಡಲು ಅನುಮತಿ ನೀಡಿತು. ಈ ನಿರ್ಧಾರದಿಂದ ರೈಲ್ವೆ ಸಾರಿಗೆಯನ್ನು ಆಶ್ರಯಿಸಿರುವ ದೇಶದ ಕೋಟ್ಯಂತರ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಬದಲಿಗೆ ದೊಡ್ಡ ದೊಡ್ಡಬಂಡವಾಳಗಾರರಿಗೆ ಹೆಚ್ಚಿನ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಒತ್ತಾಯಿಸಿದರು. ಬಳಿಕ ಬಳ್ಳಾರಿಯ ರೈಲ್ವೆ ವ್ಯವಸ್ಥಾಪಕ ಶೇಷಾದ್ರಿಯವರಿಗೆ ಮನವಿ ಸಲ್ಲಿಸುವ ಮೂಲಕ ಮೂಲಕ ಪ್ರಧಾನಮಂತ್ರಿಗೆ ಕಳುಹಿಸಿಕೊಟ್ಟರು.

ಪ್ರತಿಭಟನೆಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಆರ್‌.ಸೋಮೇಖರಗೌಡ,ಎ.ದೇವದಾಸ್‌, ಇ.ಹನುಮಂತಪ್ಪ, ಶರ್ಮಾಸ್‌,ಪಂಪಾಪತಿ, ಎಚ್‌. ಎರ್ರಿಸ್ವಾಮಿ, ಜಗದೀಶ್‌ನೇಮಕಲ್‌, ಜಿ. ಸುರೇಶ್‌, ಜೆ.ಪಿ. ರವಿಕಿರಣ್‌, ಡಾ|ಎನ್‌. ಪ್ರಮೋದ್‌ ಹಾಗೂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

fghtry5rt

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ  

Untitled-1

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

sfsdfer4e

ಮತ್ತೆ ಬಣ್ಣ ಹಚ್ಚುವ ಸುಳಿವು ನೀಡಿದ ಮೋಹಕ ತಾರೆ ರಮ್ಯಾ

navnita gautam

ಆರ್ ಸಿಬಿ ಕ್ಯಾಂಪ್ ನಲ್ಲಿ ಮಿಂಚುತ್ತಿರುವ ಯುವತಿ: ಯಾರಿದು? ಆರ್ ಸಿಬಿಯಲ್ಲಿ ಈಕೆಯ ಕೆಲಸವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid vaccination

ಇಂದು ಲಸಿಕಾ ಆಂದೋಲನ

ವಿಮ್ಸ್‌ ಅರವಳಿಕೆ ವಿಭಾಗ ಉನ್ನತೀಕರಣ

ವಿಮ್ಸ್‌ ಅರವಳಿಕೆ ವಿಭಾಗ ಉನ್ನತೀಕರಣ

hosapete news

ಹೊಸ ಜಿಲ್ಲೆ ಉದ್ಘಾಟನೆಗೆ ಭವ್ಯ ವೇದಿಕೆ

covid news

ಲಸಿಕಾ ಕರಣ: ಸಾಧನೆ ಪಟ್ಟಿಯಲ್ಲಿ ಸಿಕ್ತು ಸ್ಥಾನ

ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ : ಶಾಸಕ ಸೋಮಲಿಂಗಪ್ಪ

ಬೊಮ್ಮಾಯಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ : ಶಾಸಕ ಸೋಮಲಿಂಗಪ್ಪ

MUST WATCH

udayavani youtube

ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ

udayavani youtube

ಮುಸಲ್ಮಾನರೊಬ್ಬರು ಹಾಡಿದ ‘ಮಹಾಭಾರತ ಕಥಾ’..!

udayavani youtube

ಆಯುರ್ವೇದ – ಅಲೋಪತಿ ಒಂದು ಸಂಕ್ಷಿಪ್ತ ಮಾಹಿತಿ

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

ಹೊಸ ಸೇರ್ಪಡೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

ಅರ್ಚಕರಿಗೆ, ದೇಗುಲ ನೌಕಕರಿಗೆ ಆರೋಗ್ಯ ವಿಮೆ ಜಾರಿಗೆ ಶೀಘ್ರ ಕ್ರಮ: ಶಶಿಕಲಾ ಜೊಲ್ಲೆ

fghtry5rt

ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ  

Untitled-1

ಕಾಫಿಗೂ ಬಂತು ಸ್ನಾತಕೋತ್ತರ ಪದವಿ!

Corona

ಸ್ಥಾನಿಕ ವೈದ್ಯರಿಗೆ ಕೊರೊನಾ ಅಪಾಯ ಭತ್ಯೆಗೆ ಆಗ್ರಹ

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.