ಅಂತೂ ಇಂತೂ ಬಸ್‌ ನಿಲ್ದಾಣ ರೆಡಿ

ಶೀಘ್ರದಲ್ಲಿ ನೂತನ ನಿಲ್ದಾಣ ಲೋಕಾರ್ಪಣೆ,2018ರಲ್ಲಿ ಪ್ರಾರಂಭಗೊಂಡಿದ್ದ ಕಾಮಗಾರಿ

Team Udayavani, Jan 6, 2021, 4:58 PM IST

ಅಂತೂ ಇಂತೂ ಬಸ್‌ ನಿಲ್ದಾಣ ರೆಡಿ

ಸಿರಗುಪ್ಪ: ನಗರದ ಹೃದಯಭಾಗದಲ್ಲಿ ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಬಸ್‌ ನಿಲ್ದಾಣದಕಾಮಗಾರಿ ಅಂತೂ ಇಂತೂ ಮುಗಿಯುತ್ತಾ ಬಂದಿದ್ದು ಇನ್ನೊಂದು ತಿಂಗಳೊಳಗೆ ಬಸ್‌ನಿಲ್ದಾಣ ಸಾರ್ವಜನಿಕರ ಸೇವೆಗೆ ಸಿಗಲಿದೆ.

ರೂ. 2.50 ಕೋಟಿ ವೆಚ್ಚದಲ್ಲಿ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿಗೆ ಅಂದಿನ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಾ. 13, 2018ರಂದು ಭೂಮಿಪೂಜೆನೆರವೇರಿಸಿದ್ದರು. ಆದರೆ ನಿಲ್ದಾಣದ ಕಾಮಗಾರಿ ಕೆಲಸಮಾತ್ರ ಆಮೆಗತಿಯಲ್ಲಿ ಸಾಗುತ್ತಿದ್ದರಿಂದ ಮೂರುವರ್ಷಕ್ಕೆ ಮುಗಿಯುವ ಹಂತ ತಲುಪಿದೆ.ನಗರದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಶಾಸಕ ಬಿ.ಎಂ. ನಾಗರಾಜ ಶಥಪ್ರಯತ್ನ ಮಾಡಿ ಸರ್ಕಾರದ ಮಟ್ಟದಲ್ಲಅಧಿಕಾರಿಗಳೊಂದಿಗೆ ಚರ್ಚಿಸಿ ರೂ. 2.50 ಕೋಟಿ ವೆಚ್ಚದಲ್ಲಿ ಬಸ್‌ನಿಲ್ದಾಣ ಯೋಜನೆ ಕಾಮಗಾರಿಗೆ ಅನುಮೋದನೆ ಕೊಡಿಸಿ ನಿರ್ಮಾಣ ಕಾಮಗಾರಿಗೆ ಅಂದಿನ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಹೆಚ್‌. ಎಂ.ರೇವಣ್ಣರನ್ನು ಕರೆಸಿ ಭೂಮಿಪೂಜೆ ನೆರವೇರಿಸಿ 18 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದ್ದರು.

ಭೂಮಿಪೂಜೆ ನಂತರ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನಿರ್ಮಾಣಕಾಮಗಾರಿ ತಡವಾಗಿ ಪ್ರಾರಂಭವಾಯಿತು. ನೂತನಶಾಸಕರಾಗಿ ಆಯ್ಕೆಯಾದ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಬಸ್‌ನಿಲ್ದಾಣದ ಕಾಮಗಾರಿಯನ್ನುತ್ವರಿತವಾಗಿ ಮುಗಿಸಿಕೊಡಬೇಕೆಂದು ಗುತ್ತಿಗೆದಾರರಿಗೆತಾಕೀತು ಮಾಡಿದರು. ಆದರೂ ಮೊದಲ ಹಂತದಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಸಕಾಲಕ್ಕೆ ಬಿಲ್‌ ಪಾವತಿಯಾಗದ ಕಾರಣ ಬಸ್‌ನಿಲ್ದಾಣದ ಕಾಮಗಾರಿಯು ಕೆಲವು ತಿಂಗಳು ಸ್ಥಗಿತಗೊಂಡಿತ್ತು.

ಬಸ್‌ನಿಲ್ದಾಣದ ಕಾಮಗಾರಿ ತ್ವರಿತವಾಗಿ ಮುಗಿಯದೇ ಇರುವುದರಿಂದ ಬಸ್‌ಗಾಗಿ ಕಾಯುವ ಪ್ರಯಾಣಿಕರು ರಸ್ತೆಯಲ್ಲಿಯೇ ನಿಂತು ಬಸ್‌ ಹತ್ತಬೇಕಾಗಿದ್ದರಿಂದ ಬಸ್‌ನಿಲ್ದಾಣದ ಸಮೀಪ ನಿರಂತರವಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುವುದನ್ನು ಗಮನಿಸಿದ ಶಾಸಕರು ಶೀಘ್ರವಾಗಿ ಕಾಮಗಾರಿಯನ್ನುಮುಗಿಸಬೇಕೆಂದು ತಾಕೀತು ಮಾಡಿದ್ದರೂ ಮೂರುವರ್ಷ ಕಾಲಾವ ಧಿಯಲ್ಲಿ ನಿಲ್ದಾಣದ ಕಾಮಗಾರಿ ಮುಗಿದಿದ್ದು ಉದ್ಘಾಟನೆಗೆ ಸಿದ್ಧವಾಗುತ್ತಿದೆ.

ಬಸ್‌ನಿಲ್ದಾಣದ ಕಾಮಗಾರಿ ಮುಗಿಯುತ್ತಿದ್ದರೂ ಅಧಿಕಾರಿಗಳು ನಿಲ್ದಾಣವನ್ನು ಲೋಕಾರ್ಪಣೆ ಮಾಡಲುಇನ್ನೂ ತಡಮಾಡುತ್ತಿರುವುದು ಸರಿಯಾದಕ್ರಮವಲ್ಲ. ಶೀಘ್ರವಾಗಿ ಬಸ್‌ನಿಲ್ದಾಣ ಲೋಕಾರ್ಪಣೆ ಮಾಡಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. – ಪ್ರಯಾಣಿಕರು

ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇದ್ದು, ವಿಭಾಗೀಯ ಅಧಿಕಾರಿಗಳು ಬಂದುತಪಾಸಣೆ ನಡೆಸಿದ ನಂತರ ಬಸ್‌ನಿಲ್ದಾಣ ಲೋಕಾರ್ಪಣೆ ಮಾಡಲು ನಮ್ಮ ಇಲಾಖೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. – ವಸಂತ್‌, ಎಇಇ, ಕೆಎಸ್‌ಆರ್‌ಟಿಸಿ ಕಾಮಗಾರಿ ವಿಭಾಗ

-ಆರ್‌. ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಮುಖ್ಯಮಂತ್ರಿ ಮುಂದೆ ಆರು ಪ್ರಶ್ನೆ ಇಟ್ಟ ಕಾಂಗ್ರೆಸ್‌

ಮುಖ್ಯಮಂತ್ರಿ ಮುಂದೆ ಆರು ಪ್ರಶ್ನೆ ಇಟ್ಟ ಕಾಂಗ್ರೆಸ್‌

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ಇವಿ ಕ್ಷೇತ್ರ: ಜಿಎಸ್‌ಟಿ ಇಳಿಕೆ, ರಫ್ತಿನಲ್ಲಿ ವಿನಾಯ್ತಿ?

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ದೇವಾಸ್‌ ಹೂಡಿದ್ದ ದಾವೆ ರದ್ದುಗೊಳಿಸಲು ಏರ್‌ಇಂಡಿಯಾ ಅರಿಕೆ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲ

ಪ್ರಜಾಪ್ರಭುತ್ವದ ಬಗ್ಗೆ ಪ್ರಮಾಣ ಪತ್ರ ಬೇಕಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ballari news

ಎಸ್ಸಿ-ಎಸ್ಟಿ ಕಾಲೋನಿ ಅಭಿವೃದ್ದಿಗೆ ಆದ್ಯತೆ ನೀಡಿ

ballari news

ಶ್ರೀರಾಮುಲುಗೆ ಉಸುವಾರಿ-ಸಿಂಗ್‌ಗೆ ಕೊಪ್ಪಳ ಜವಾಬ್ದಾರಿ

್ಗಹಹಗಹಗದಗ

ಶಿವಕುಮಾರ ಶ್ರೀಗಳ ಬದುಕೇ ಶಿವಮಯ

ಚ್ಗೆಹಮನಬವಚಸಗಹದಗಹಗ್ದಸ

ಸೆಕ್ಯೂರಿಟಿ ಗಾರ್ಡ್‌ ಕುಟುಂಬಕ್ಕೆ ಪರಿಹಾರಕ್ಕಾಗಿ ಪ್ರತಿಭಟನೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

ಅಂಗನವಾಡಿ ಕೇಂದ್ರದಲ್ಲಿ ಎಸ್ಸಿ, ಎಸ್ಟಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ನಂ.1 ಆಸ್ತಿವಂತ ಪಕ್ಷ ಬಿಜೆಪಿ! ಇತರೆ ಎಲ್ಲ ಪಕ್ಷಗಳ ಒಟ್ಟು ಆಸ್ತಿಗಿಂತಲೂ ಹೆಚ್ಚು

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಹೋಮ್‌ ಐಸೋಲೇಶನ್‌ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್‌

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಉತ್ತರ ಪ್ರದೇಶದಲ್ಲಿ ವಾಕ್‌ಸಮರ; ಅಖಿಲೇಶ್ ಜಿನ್ನಾ ಆರಾಧಕರು ಎಂದ ಯೋಗಿ

ಮುಖ್ಯಮಂತ್ರಿ ಮುಂದೆ ಆರು ಪ್ರಶ್ನೆ ಇಟ್ಟ ಕಾಂಗ್ರೆಸ್‌

ಮುಖ್ಯಮಂತ್ರಿ ಮುಂದೆ ಆರು ಪ್ರಶ್ನೆ ಇಟ್ಟ ಕಾಂಗ್ರೆಸ್‌

ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!

ಜಯಂತಿಗಷ್ಟೇ ಸೀಮಿತವಾದ ಅಧ್ಯಯನ ಪೀಠಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.