ಸರ್ಕಾರದ ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹ

ಉತ್ತಮ ಇಳುವರಿ ಬಂದರೂ ಬೆಳೆಗಾರರಿಗೆ ಸಿಗುತ್ತಿಲ್ಲ ಬೆಂಬಲ ಬೆಲೆ

Team Udayavani, Apr 13, 2020, 7:04 PM IST

13-April-11

ಸಿರುಗುಪ್ಪ: ಕರೂರು ಎಪಿಎಂಸಿಯಲ್ಲಿ ಭತ್ತವನ್ನು ಚೀಲಕ್ಕೆ ತುಂಬಿ ಮಾರಾಟಕ್ಕೆ ಸಿದ್ಧಪಡಿಸಿರುವುದು.

ಸಿರುಗುಪ್ಪ: ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತ ಕಟಾವು ಪ್ರಾರಂಭವಾಗಿದ್ದರೂ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿಲ್ಲ. ಇದರಿಂದಾಗಿ ಉತ್ತಮ ಇಳುವರಿ ಬಂದರೂ ಬೆಂಬಲ ಬೆಲೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಕಡಿಮೆ ದರಕ್ಕೆ ಭತ್ತ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಸುಮಾರು 18 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಕಟಾವು ಪ್ರಾರಂಭವಾಗಿದ್ದು, ಶೇ.40 ರಷ್ಟು ಕೊಯ್ಲು ಮುಗಿದಿದ್ದು, ಶೇ.60ರಷ್ಟು ಕೊಯ್ಲು ನಡೆಯುತ್ತಿದೆ. ರೈತರಿಗೆ ಈ ಬಾರಿ ಒಂದು ಎಕರೆಗೆ ಸರಾಸರಿ 40 ರಿಂದ 50 ಚೀಲ ಇಳುವರಿ ಬರುತ್ತಿದ್ದರೂ ಉತ್ತಮ ಬೆಲೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಪ್ರಾರಂಭಿಸಬೇಕಾಗಿತ್ತು. ಆದರೆ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಈವರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಖರೀದಿ ಕೇಂದ್ರವನ್ನು ತೆರೆಯಲು ಅನುಮತಿ ನೀಡಿಲ್ಲ. ಇದರಿಂದಾಗಿ ರೈತರು ವ್ಯಾಪಾರಿಗಳು ನಿಗದಿಪಡಿಸಿದ ಬೆಲೆಗೆ ಭತ್ತ ಮಾರುತ್ತಿದ್ದಾರೆ.

ತಾಲೂಕಿನಲ್ಲಿ ಅತಿಹೆಚ್ಚಾಗಿ ಕಾವೇರಿ ತಳಿಯ ಭತ್ತವನ್ನೇ ಬೆಳೆದಿದ್ದು, ಈ ಭತ್ತವು ಒಂದು ಕ್ವಿಂಟಾಲ್‌ಗೆ ರೂ.1600 ರಿಂದ 1650ರ ವರೆಗೆ ಮಾರಾಟವಾಗುತ್ತದೆ. ಸಿರುಗುಪ್ಪ, ತುಮಕೂರು, ಬಳ್ಳಾರಿ ಮುಂತಾದ ಕಡೆಗಳಿಂದ ವ್ಯಾಪಾರಿಗಳು ಬಂದು ಭತ್ತ ಖರೀದಿ ಮಾಡುತ್ತಿದ್ಧಾರೆ. ಇದರಿಂದಾಗಿ ಹೊಲದಲ್ಲಿಯೇ ಕೊಯ್ಲು ಮಾಡುತ್ತಿದ್ದಂತೆ ಭತ್ತ ಮಾರಾಟ ಆಗುತ್ತಿರುವುದು, ರೈತರು ನಿರಾತಂಕವಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದ್ದರಿಂದ ರೂ.1700 ರಿಂದ 1775ರ ವರೆಗೆ ಭತ್ತವು ಮಾರಾಟವಾಗಿತ್ತು. ಆದರೆ ಸದ್ಯ ಮಾರಾಟ ಕೇಂದ್ರ ಆರಂಭವಾಗದೇ ಇರುವುದರಿಂದ ರೈತರು ಉತ್ತಮ ಇಳುವರಿ ಬಂದಿದ್ದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

ರಾಜ್ಯ ಮತ್ತು ಕೇಂದ್ರ ಸರ್ಕಾರ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದರೆ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ಪ್ರೊ| ನಂಜುಂಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್‌.ಮಾಧವರೆಡ್ಡಿ ಒತ್ತಾಯಿಸಿದ್ದಾರೆ.

ಇಳುವರಿ ಉತ್ತಮವಾಗಿದ್ದರೂ ಉತ್ತಮ ಬೆಲೆ ಸಿಗದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಕೂರಿಗನೂರು ರೈತ ಗಾದಿಲಿಂಗಪ್ಪ ಒತ್ತಾಯಿಸಿದ್ದಾರೆ. ರೈತರಿಗೆ ಉತ್ತಮ ಬೆಲೆ ದೊರಕಿಸುವ ಉದ್ದೇಶದಿಂದ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರದೊಂದಿಗೆ ಚರ್ಚಿಸಲಾಗಿದೆ.
ಎಂ.ಎಸ್‌. ಸೋಮಲಿಂಗಪ್ಪ,
ಶಾಸಕ, ಸಿರುಗುಪ್ಪ.

ಆರ್‌.ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5sugarcane

ಶಾರ್ಟ್ ಸರ್ಕ್ಯೂಟ್ ನಿಂದಾಗಿ 4 ಎಕರೆ ಕಬ್ಬು ಬೆಂಕಿಗಾಹುತಿ

ದ್ಗಹಜಕಲ;ಲಕಜಹಗ್ದಸಅ

ಬನಶಂಕರಿದೇವಿಗೆ ಸೀರೆ ಅರ್ಪಣೆ

ದ್ಗತಯುಇಉಕಜಹ

ಪಿಎಸ್‌ಐ ನಾಗಪ್ಪ ಸೇರಿ 13 ಜನರ ವಿರುದ್ಧ ಪ್ರಕರಣ

್ಗಹಜರಯತಕಹ್ಗವಚ

ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದ ಸಂತ

ದರತಯುಜಹಬವಚಷಱ

ಹಂಪಿಯಲ್ಲಿಲ್ಲ ಮಕರ ಸಂಕ್ರಾಂತಿ ಸಂಭ್ರಮ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಅಭಿವೃದ್ಧಿಯ ಆಲೋಚಕ ಸಾಮಾಜಿಕ ದ್ರಷ್ಟಾರ; ಗ್ರಾಮಾಭಿವೃದ್ಧಿಯ ಹರಿಕಾರ

ಅಭಿವೃದ್ಧಿಯ ಆಲೋಚಕ ಸಾಮಾಜಿಕ ದ್ರಷ್ಟಾರ; ಗ್ರಾಮಾಭಿವೃದ್ಧಿಯ ಹರಿಕಾರ

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.