Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

33/11 ಕೆ.ವಿ. ಸಿಬ್ಬಂದಿ ನಿರ್ಲಕ್ಷ್ಯ

Team Udayavani, Jun 24, 2024, 8:54 PM IST

Siruguppa ಜೆಸ್ಕಾಂ ಸಿಬ್ಬಂದಿ ಎಡವಟ್ಟು; ಗ್ರಾಮಸ್ಥರಿಂದ ತರಾಟೆ

ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯ ಜೆಸ್ಕಾಂ ಕಚೇರಿ ವ್ಯಾಪ್ತಿಗೆ ಬರುವ 33/11 ಕೆ.ವಿ. ವಿದ್ಯುತ್‌ ವಿತರಣ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಮತ್ತು ಜೆಸ್ಕಾಂ ಸಿಬ್ಬಂದಿ ತರಾಟೆಗೆ ತೆಗೆದುಕೊಂಡು ಹೊಡೆಯಲು ಹೋದ ಘಟನೆ ಸೋಮವಾರ ನಡೆಯಿತು.

ತೆಕ್ಕಲಕೋಟೆ ಜೆಸ್ಕಾಂ ಕಚೇರಿಯ ಜೆ.ಇ. ಯಲ್ಲಪ್ಪ ಎನ್ನುವವರು, ಉಡೇಗೋಳ ಗ್ರಾಮದಲ್ಲಿ ವಿದ್ಯುತ್‌ ಕಂಬಗಳ ದುರಸ್ಥಿ ಕಾರ್ಯಮಾಡಲಾಗುತ್ತಿದೆ, ಆದ್ದರಿಂದ ನಮ್ಮ ಕಚೇರಿ ವ್ಯಾಪ್ತಿಗೆ ಬರುವ ಉಡೇಗೋಳ ಎಫ್‌-2 ಪೀಡರ್‌ಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬೇಕೆಂದು 33/11 ಕೆ.ವಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನಾಗರಾಜ ಎನ್ನುವವರಿಗೆ ತಿಳಿಸಿದ್ದರು.

ಆದರೆ ವಿದ್ಯುತ್‌ ಕಂಬದಲ್ಲಿ ಇನ್ನೂ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿಯೇ 33/11 ಕೆ.ವಿ. ಕೇಂದ್ರದ ಸಿಬ್ಬಂದಿ ಎಫ್‌-2 ಉಡೇಗೋಳ ಫೀಡರ್‌ಗೆ ವಿದ್ಯುತ್‌ ಸಂಪರ್ಕವನ್ನು ಚಾರ್ಜ್‌ ಮಾಡಿದ್ದರು. ಆದರೆ ಕಂಬದ ಮೇಲೆ ನಿಂತು ಕಾರ್ಯನಿರ್ವಹಿಸುತ್ತಿದ್ದ ಲೈನ್‌ಮ್ಯಾನ್‌ ತಕ್ಷಣವೇ ಕಂಬದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಜೆ.ಇ. ಯಲ್ಲಪ್ಪ ಅವರು 33/11 ಕೆ.ವಿ. ಕೇಂದ್ರದ ಸಿಬ್ಬಂದಿಗೆ ಉಡೇಗೋಳ ಎಫ್‌-2 ಫೀಡರ್‌ಗೆ ವಿದ್ಯುತ್‌ ಚಾರ್ಜ್‌ ಮಾಡುವಂತೆ ತಿಳಿಸಿರಲಿಲ್ಲ ಎನ್ನಲಾಗಿದ್ದು, ಆದರೂ ಸಿಬ್ಬಂದಿ ನಿರ್ಲಕ್ಷ್ಯದ ಪರಿಣಾಮ ಎಫ್‌-2 ಫೀಡರ್‌ಗೆ ವಿದ್ಯುತ್‌ ಚಾರ್ಜ್‌ ಮಾಡಲಾಗಿದ್ದು, ಕಂಬದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅನಾಹುತ ನಡೆದಿಲ್ಲ.

ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಮತ್ತು ಸಾರ್ವಜನಿಕರು 33/11 ಕೆ.ವಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ನಾಗರಾಜನಿಗೆ ಏಟು ಕೊಡಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಆಗಬಹುದಾದ ಗಲಾಟೆಯನ್ನು ತಪ್ಪಿಸಿದ್ದಾರೆ.

33/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನಾಗರಾಜ ಎನ್ನುವ ಸಿಬ್ಬಂದಿ ನಿರ್ಲಕ್ಷéದಿಂದ ಜೆ.ಇ. ಹೇಳದಿದ್ದರೂ ಉಡೇಗೋಳ ಎಫ್‌-2 ಪೀಡರ್‌ ಲೈನ್‌ ಚಾರ್ಜ್‌ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಆಗಬಹುದಾದ ಜೀವಹಾನಿ ತಪ್ಪಿದೆ. ಆದ್ದರಿಂದ ಈ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಳ್ಳುವಂತೆ ನಮ್ಮ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರ ಗಮನಕ್ಕೆ ತರಲಾಗಿದೆ.
– ನವೀನ್‌ ಕುಮಾರ್‌, ಎಇಇ ಜೆಸ್ಕಾಂ

ನಾವು ಚಾರ್ಜ್‌ ಮಾಡಿ ಎಂದು ಹೇಳುವ ಮೊದಲೇ ಚಾರ್ಜ್‌ ಮಾಡಿದ್ದರಿಂದ ಉಡೇಗೋಳ ಗ್ರಾಮದಲ್ಲಿ ಕಂಬಗಳ ಮೇಲೆ ರಿಪೇರಿ ಮಾಡುತ್ತಿದ್ದ ಸಿಬ್ಬಂದಿ ಎಚ್ಚೆತ್ತುಕೊಂಡು ಅಪಾಯದಿಂದ ಪಾರಾಗಿದ್ದಾರೆ.
-ಯಲ್ಲಪ್ಪ, ಜೆ.ಇ. ತೆಕ್ಕಲಕೋಟೆ

ಟಾಪ್ ನ್ಯೂಸ್

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Jammu: ಸೇನಾ ನೆಲೆ ಮೇಲೆ ಉಗ್ರರ ದಾಳಿ, ಯೋಧರಿಂದ ಪ್ರತಿದಾಳಿ ದಾಳಿ, ಕಾರ್ಯಾಚರಣೆ ಮುಂದುವರಿಕೆ

Jammu: ಬೆಳ್ಳಂಬೆಳಗ್ಗೆ ಸೇನಾ ನೆಲೆ ಮೇಲೆ ಉಗ್ರರ ದಾಳಿ… ಭದ್ರತಾ ಪಡೆಗಳಿಂದ ಪ್ರತಿದಾಳಿ

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Paris-olympics

Olympics 2024 ಆತಿಥ್ಯಕ್ಕೆ ಪ್ಯಾರಿಸ್‌ ಸಜ್ಜು

Basrur: ಇಂಡಿಯನ್‌ ಪೈಂಟೆಡ್‌ ಫ್ರಾಗ್‌ ಪತ್ತೆ; ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ

Basrur: ಇಂಡಿಯನ್‌ ಪೈಂಟೆಡ್‌ ಫ್ರಾಗ್‌ ಪತ್ತೆ; ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayendara-Ballri

Congress Government; ಕಾಂಗ್ರೆಸ್‌ ಹೈಕಮಾಂಡ್‌ಗೂ ವಾಲ್ಮೀಕಿ ನಿಗಮದ ಹಣ: ವಿಜಯೇಂದ್ರ

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ

suicide (2)

Ballari: ಕಾರ್ಖಾನೆಯಲ್ಲಿ ಸಿಲಿಂಡರ್ ಸ್ಫೋಟ; ಒಬ್ಬ ಸಾವು, ನಾಲ್ವರಿಗೆ ಗಾಯ

ಮೊಹರಂ ಆಚರಣೆ ವೇಳೆ ಅವಘಡ; ಜನರ ಭಾರದಿಂದ ಕುಸಿದ ರೂಫ್ ಶೀಟ್

Bellary; ಮೊಹರಂ ಆಚರಣೆ ವೇಳೆ ಅವಘಡ; ಜನರ ಭಾರದಿಂದ ಕುಸಿದ ರೂಫ್ ಶೀಟ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Election: ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದ ಬೈಡನ್, ರೇಸ್ ನಲ್ಲಿ ಹಾಲಿ ಉಪಾಧ್ಯಕ್ಷೆ

Jammu: ಸೇನಾ ನೆಲೆ ಮೇಲೆ ಉಗ್ರರ ದಾಳಿ, ಯೋಧರಿಂದ ಪ್ರತಿದಾಳಿ ದಾಳಿ, ಕಾರ್ಯಾಚರಣೆ ಮುಂದುವರಿಕೆ

Jammu: ಬೆಳ್ಳಂಬೆಳಗ್ಗೆ ಸೇನಾ ನೆಲೆ ಮೇಲೆ ಉಗ್ರರ ದಾಳಿ… ಭದ್ರತಾ ಪಡೆಗಳಿಂದ ಪ್ರತಿದಾಳಿ

3-bng

Bengaluru: ನೀರು ಹಾರಿದ್ದಕ್ಕೆ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿದ ಆಟೋ ಚಾಲಕ

2-bng

Bengaluru: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್‌: ಸವಾರ ಸಾವು‌

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Fake Stock Market: ಫೇಸ್‌ಬುಕ್‌ನಲ್ಲೇ ಗಾಳ; ಕೋಟ್ಯಂತರ ರೂ. ದೋಖಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.