ಅಕ್ಕಿ ಗಿರಣಿ ಆರಂಭಕ್ಕೆ ಅನುಮತಿ

ಬಿಹಾರ ಮೂಲದ ಕಾರ್ಮಿಕರು ಬಾರದ ಸ್ಥಿತಿ ಅಕ್ಕಿ ಸಾಗಾಣಿಕೆಗೂ ಸಮಸ್ಯೆ

Team Udayavani, Apr 11, 2020, 1:20 PM IST

11-April-11

ಸಿರುಗುಪ್ಪ: ನಗರದ ಅಕ್ಕಿ ಗಿರಣಿ ಆವರಣದಲ್ಲಿರುವ ಭತ್ತದ ಮೂಟೆಗಳು.

ಸಿರುಗುಪ್ಪ: ರೈತರ ಹಿತದೃಷ್ಟಿಯಿಂದ ಹಾಗೂ ನಿರ್ಬಂಧದ ಸಮಯದಲ್ಲಿ ಅಕ್ಕಿ ಕೊರತೆಯಾಗಬಾರದೆಂಬ ಕಾರಣಕ್ಕೆ ಜಿಲ್ಲಾಡಳಿತ ಅಕ್ಕಿಗಿರಣಿಗಳ ಆರಂಭಕ್ಕೆ ಅನುಮತಿ ನೀಡಿದೆ. ಆದರೆ ಹಲವು ಸಮಸ್ಯೆಗಳ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲೂಕಿನಲ್ಲಿ ಒಟ್ಟು 77 ಅಕ್ಕಿಗಿರಣಿಗಳಿದ್ದು, 60 ಅಕ್ಕಿಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ನಿರ್ಬಂಧದ ನಂತರ ಭತ್ತ ನುರಿಸುವ ಕಾರ್ಯ ಸ್ಥಗಿತವಾಗಿತ್ತು. ಜಿಲ್ಲಾಡಳಿತದ ಆದೇಶದ ನಂತರ ಅಕ್ಕಿ ಗಿರಣಿಗಳು ಕೆಲಸ ಆರಂಭಿಸಿವೆ. ಆದರೆ ಕಾರ್ಮಿಕರ ಕೊರತೆ, ಸಾಗಣೆ ಸಮಸ್ಯೆಯ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಭತ್ತ ನುರಿಸುವ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕೆಲವು ಗಿರಣಿಗಳಲ್ಲಿ ಭತ್ತ ಮತ್ತು ಅಕ್ಕಿ ಸಂಗ್ರಹವಿದ್ದು, ನಿರ್ಬಂಧದ ತೆರವಿನ ನಂತರ ಅಕ್ಕಿ ಮಾರಾಟವಾಗುತ್ತಿದ್ದು, ಭತ್ತ ನುರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇಲ್ಲಿನ ಅಕ್ಕಿ ಗಿರಣಿಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ನೆರೆಯ ಬಿಹಾರ ರಾಜ್ಯದವರು. ಆದರೆ ಜನೆವರಿಯಿಂದ ಮಾರ್ಚ್‌ವರೆಗೆ ಯಾವುದೇ ಗಿರಣಿಗಳು ಕಾರ್ಯನಿರ್ವಹಿಸದ ಕಾರಣ ಬಿಹಾರದ ಸ್ವಗ್ರಾಮಗಳಿಗೆ ತೆರಳಿದ್ದರು. ಅವರಿಗೆ ಗಿರಣಿ ಆರಂಭವಾಗಿರುವ ಕುರಿತು ಮಾಹಿತಿ ನೀಡಲಾಗಿದ್ದರೂ ಮರಳಿ ಬರಲು ರೈಲು ಮತ್ತು ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದ ಸ್ಥಳಿಯರನ್ನೇ ಬಳಸಿಕೊಂಡು ಅಕ್ಕಿಗಿರಣಿಗಳನ್ನು ನಿರ್ವಹಿಸಲಾಗುತ್ತಿದೆ.

ತಾಲೂಕಿನ ಬಹುತೇಕ ಮಿಲ್‌ಗ‌ಳು ಭತ್ತ ಬೇಯಿಸಿ ಒಣಗಿಸಿದ ನಂತರ ನುರಿಸುತ್ತವೆ. ಈ ಅಕ್ಕಿಯನ್ನು ಬೆಂಗಳೂರು, ಮುಂಬೈ, ಸೀಮಾಂಧ್ರ, ತೆಲಂಗಾಣ, ಗೋವಾ, ಅಹಮದ್‌ನಗರ ಮುಂತಾದ ಕಡೆಗಳಿಗೆ ಸಾಗಿಸುತ್ತಿವೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಅಲ್ಲಿಗೆ ಅಕ್ಕಿ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅಕ್ಕಿ ತೌಡು, ಭತ್ತದ ಬೂದಿ ಬೇರೆಕಡೆ ಸಾಗಿಸಲು ಹಮಾಲರು ಬರುತ್ತಿಲ್ಲ. ಭತ್ತ ನುರಿಸಿದ ನಂತರ ದೊರೆಯುವ ಅಕ್ಕಿ ತೌಡು ಎಣ್ಣೆ ತಯಾರಿಕೆಗೆ ಬಳಸಲಾಗುತ್ತದೆ. ಈ ತೌಡು ಬೇರೆ ಜಿಲ್ಲೆಗಳಿಗೆ ಕಳುಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ. ಎಣ್ಣೆ ತಯಾರಿಸುವ ಕಾರ್ಖಾನೆಗಳು ಸ್ಥಗಿತಗೊಂಡಿವೆ.

ಬೇರೆ ಪ್ರದೇಶದಿಂದ ತಾಲೂಕಿಗೆ ಲಾರಿಗಳು ಬರಲು ತುಂಬ ಸಮಸ್ಯೆ ಎದುರಿಸಬೇಕಾಗಿದೆ. ಲಾರಿ ಮಾಲೀಕರು ಎರಡೂ ಕಡೆಯ ಬಾಡಿಗೆ ಕೇಳುತ್ತಿದ್ದಾರೆ. ಖಾಲಿ ವಾಹನಗಳು ಬಂದರೆ ಪೊಲೀಸರು ರಸ್ತೆ ಪಕ್ಕ ನಿಲ್ಲಿಸುವಂತೆ ಹೇಳುತ್ತಿದ್ಧಾರೆ. ಇದರಿಂದ ಸರಕು ತುಂಬಿದ ವಾಹನಗಳ ಓಡಾಟಕ್ಕೆ ಸಮಸ್ಯೆಯಿಲ್ಲ. ಆದರೆ ಖಾಲಿ ವಾಹನಗಳಿಗೆ ಬಾಡಿಗೆ ನೀಡುವುದು ದೊಡ್ಡ ತಲೆನೋವಾಗಿದೆ ಎನ್ನುತ್ತಾರೆ ಮಾಲೀಕರು.

ನಗರದಲ್ಲಿರುವ ಅಕ್ಕಿಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಕೊರತೆ, ಪೊಲೀಸರ ಅನುಮತಿ ಸಮಸ್ಯೆ ಬಿಟ್ಟರೆ ಅಕ್ಕಿ ಸಾಗಿಸಲು ಯಾವುದೇ ತೊಂದರೆ ಇಲ್ಲವೆಂದು ಅಕ್ಕಿಗಿರಣಿಗಳ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಎನ್‌.ಜಿ. ಬಸವರಾಜಪ್ಪ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

astrology today

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌

3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್‌

ಐಎನ್‌ಎಸ್‌ ವಿಕ್ರಾಂತ್‌ ; ಭಾರತಕ್ಕೆ ದೇಶೀಯ ಯುದ್ಧನೌಕೆಯ ಶಕ್ತಿ

ಐಎನ್‌ಎಸ್‌ ವಿಕ್ರಾಂತ್‌ ; ಭಾರತಕ್ಕೆ ದೇಶೀಯ ಯುದ್ಧನೌಕೆಯ ಶಕ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡು ಬಡವರನ್ನು ಗುರುತಿಸಿ ಮನೆ ಹಂಚಿಕೆ ಮಾಡಿ : ಶಾಸಕ ಸೋಮಲಿಂಗಪ್ಪ ಸೂಚನೆ

ಕಡು ಬಡವರನ್ನು ಗುರುತಿಸಿ ಮನೆ ಹಂಚಿಕೆ ಮಾಡಿ : ಶಾಸಕ ಸೋಮಲಿಂಗಪ್ಪ ಸೂಚನೆ

ಪರೀಕ್ಷೆ ಬರೆಯಲು ಬಂದವರಿಗೆ ಕೋವಿಡ್ ಪರೀಕ್ಷೆ: 68 ಮಂದಿಗೆ ಪಾಸಿಟಿವ್

ಪರೀಕ್ಷೆ ಬರೆಯಲು ಬಂದವರಿಗೆ ಕೋವಿಡ್ ಪರೀಕ್ಷೆ: 68 ಮಂದಿಗೆ ಪಾಸಿಟಿವ್

ಶಾಲೆ ವಿದ್ಯಾರ್ಥಿನಿ ಸೇರಿ ಕುರುಗೋಡು ತಾಲೂಕಿನಲ್ಲಿ 17 ಕೋವಿಡ್ ಪ್ರಕರಣಗಳು ಪತ್ತೆ

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

ಬಸ್‌ಗಾಗಿ ವಸತಿ ನಿಲಯ ವಿದ್ಯಾರ್ಥಿಗಳ ಪರದಾಟ

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಪಚ್ಚನಾಡಿ ಭೂ ಭರ್ತಿ ಘಟಕದ ತ್ಯಾಜ್ಯ ವಿಲೇವಾರಿ: ಶೀಘ್ರ ಪೂರ್ಣಗೊಳಿಸಲು ಆದೇಶ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ಸೋಂಕು ಪರೀಕ್ಷೆ ಹೆಚ್ಚಿಸಿ: ಕೇಂದ್ರದ ಸೂಚನೆ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ತಂತ್ರಗಾರಿಕೆ ಬದಲಿಸಿದ ಬಿಜೆಪಿ! ಉತ್ತರ ಪ್ರದೇಶ ಚುನಾವಣೆಗೆ ಹೊಸ ಕಾರ್ಯತಂತ್ರ

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

ಹೊಸ ಇತಿಹಾಸ ಬರೆದಿದ ಭಾರತದ ಅಂಡರ್‌-19 ವಿಶ್ವಕಪ್‌ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್‌

astrology today

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.