ಲೋಕೋಪಯೋಗಿ ಖಾತೆ ಮೇಲೆ ಕಣ್ಣು

ಡಿಸಿಎಂ ಹುದ್ದೆ ಕೈತಪ್ಪುವ ಸಂಭವ ; ಖಾತೆ ಬದಲಾವಣೆಗೆ ಸಿಎಂಗೆ ಶ್ರೀರಾಮುಲು ಬೇಡಿಕೆ

Team Udayavani, Dec 13, 2019, 5:26 AM IST

ಬಳ್ಳಾರಿ: ಉಪಚುನಾವಣೆ ನಂತರ ಆದ ರಾಜಕೀಯ ಬದಲಾವಣೆಯಿಂದ ಉಪಮುಖ್ಯಮಂತ್ರಿ ಸ್ಥಾನ ಕೈ ತಪ್ಪುವುದನ್ನು ಮನಗಂಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈಗ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದ್ದಾರೆ.

ಕೊನೆಗೂ ಡಿಸಿಎಂ ಸ್ಥಾನ ಸಿಗುವ ಬಗ್ಗೆ ಖಾತ್ರಿ ಇಲ್ಲದ ಕಾರಣ ಸಿಎಂ ಯಡಿಯೂರಪ್ಪ ಬಳಿ ಹೊಸ ಬೇಡಿಕೆಗಳನ್ನಿಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಲೋಕೋಪಯೋಗಿ ಇಲಾಖೆ ಖಾತೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ ರಮೇಶ್‌ ಜಾರಕಿಹೊಳಿ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.
ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಲಭಿಸೋದು ಸುಲಭವಲ್ಲ. ಅಲ್ಲದೆ ಈ ಹುದ್ದೆ ರಮೇಶ್‌ ಜಾರಕಿಹೊಳಿ ಪಾಲಾಗಲಿದೆ ಎಂಬ ಮಾತು ಸಹ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಹೀಗಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಸಿಎಂ ಯಡಿಯೂರಪ್ಪ ಬಳಿ ಹೊಸ ಬೇಡಿಕೆ ಮುಂದಿಡಲು ಸಜ್ಜಾಗಿದ್ದಾರೆ. ಈ ಮೊದಲು ಹೇಳಿದಂತೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು. ಇಲ್ಲದಿದ್ದರೆ ಖಾತೆ ಬದಲಾಯಿಸಿ ಲೋಕೋಪಯೋಗಿ ಖಾತೆ ನೀಡುವಂತೆ ಬೇಡಿಕೆ ಇಡಲು ಸಿದ್ಧರಾಗಿದ್ದಾರೆ. ಒಂದು ವೇಳೆ
ತಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೆ ವರಿಷ್ಠರಿಂದಲೂ ಒತ್ತಡ ಹೇರಲು ರಾಮುಲು ಮುಂದಾಗಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.

ಕುಗ್ಗಿದ ರಾಮುಲು ಬಲ: ಒಂದು ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನೇ ರಚನೆ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದ ರೆಡ್ಡಿ ಸಹೋದರರ ಪರಮಾಪ್ತ ರಾಮುಲು ಇಂದು ಖಾತೆ ಬದಲಾವಣೆಗಾಗಿ
ಮುಖ್ಯಮಂತ್ರಿ ಬಳಿ ದುಂಬಾಲು ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2008ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಬೇಕಾಗಿದ್ದ ಪಕ್ಷೇತರ ಶಾಸಕರ ಬೆಂಬಲ ಕೊಡಿಸುವಲ್ಲಿ ರೆಡ್ಡಿ, ರಾಮುಲು ಯಶಸ್ವಿಯಾಗಿದ್ದರು. ರಾಮುಲು ಸೇರಿ ರೆಡ್ಡಿ ಸಹೋದರರು ಕಂದಾಯ,
ಪ್ರವಾಸೋದ್ಯಮ, ಆರೋಗ್ಯ ಖಾತೆ ಸೇರಿ ಕೆಎಂಎಫ್‌ ಅಧ್ಯಕ್ಷ ಸ್ಥಾನವನ್ನೂ ತಮ್ಮದಾಗಿಸಿಕೊಂಡಿದ್ದರು. ಪಕ್ಷ ಸೇರಿದಂತೆ ರಾಜ್ಯದಲ್ಲೂ ತಮ್ಮದೇ ವರ್ಚಸ್ಸು ಸೃಷ್ಟಿಸಿಕೊಂಡಿದ್ದ ಶ್ರೀರಾಮುಲು ಅವರಿಗೆ
ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆದ್ದಿರುವುದರಿಂದ ಪಕ್ಷದಲ್ಲಿ ಅರ್ಹತೆಯ ಪ್ರಶ್ನೆ ಎದುರಾಗಿದೆ. ಕೇಳಿದ ಹುದ್ದೆ, ಖಾತೆ ಪಡೆಯಲಾಗದೆ ನೀಡಿದ ಖಾತೆಗೆ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ
ನಿರ್ಮಾಣವಾಗಿದೆ.

ಸಿಎಂ ಮೇಲೆ ಒತ್ತಡ
2018ರ ವಿಧಾನಸಭೆ ಚುನಾವಣೆ ವೇಳೆಯಿಂದಲೂ ಉಪಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿದ್ದ ಶ್ರೀರಾಮುಲು ಇಂದಲ್ಲ ನಾಳೆ ಹುದ್ದೆ ಸಿಗಲಿದೆ ಎಂದು ತಮಗೆ ನೀಡಿದ್ದ ಆರೋಗ್ಯ ಖಾತೆಯನ್ನೇ ನಿಭಾಯಿಸುತ್ತಿದ್ದರು. ಆದರೆ ಈಗ ಲೋಕೋಪಯೋಗಿ ಖಾತೆ ನೀಡುವಂತೆ ಸಿಎಂ ಮೇಲೆ ಒತ್ತಡ
ಹೇರುವ ಮೂಲಕ ನಿಧಾನವಾಗಿ ವೈಲೆಂಟ್‌ ಆಗುತ್ತಿದ್ದಾರೆ ಎನ್ನಲಾಗಿದೆ. ಇವರ ಒತ್ತಡಕ್ಕೆ ಸಿಎಂ ಮಣಿದು ಖಾತೆ ಬದಲಾಯಿಸುವರೋ ಅಥವಾ ಇರುವ ಖಾತೆಯಲ್ಲೇ ಮುಂದುವರಿಸುವರೋ ಕಾದು ನೋಡಬೇಕಾಗಿದೆ.

ವೆಂಕೋಬಿ ಸಂಗನಕಲ್ಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ