ಶಿಕ್ಷಕರ ನೇಮಕಕ್ಕೆ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳ ಪ್ರತಿಭಟನೆ!

Team Udayavani, Sep 29, 2018, 12:31 PM IST

bell-1.jpg

ಕೂಡ್ಲಿಗಿ: ಸಹ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ಮತ್ತು ಮುಖ್ಯಶಿಕ್ಷಕರ ವರ್ಗವಣೆ ವಿರೋಧಿಸಿ ವಿದ್ಯಾರ್ಥಿಗಳು ಶಾಲೆಗೆ
ಬೀಗ ಜಡಿದು ದಿಢೀರ್‌ ಪ್ರತಿಭಟಿಸಿದ ಘಟನೆ ತಾಲೂಕಿನ ಹೊಸಹಳ್ಳಿ ಸಮೀಪದ ಗಡಿ ಗ್ರಾಮ ಕೆಂಚಮಲ್ಲನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಎಸ್‌ಡಿಎಂಸಿ ಅಧ್ಯಕ್ಷ ಜಯಣ್ಣ ಮಾತನಾಡಿ ಕಳೆದ 6 ವರ್ಷಗಳಿಂದ ನಮ್ಮ ಶಾಲೆಗೆ ಸರಿಯಾಗಿ ಶಿಕ್ಷಕರನ್ನು ನೇಮಿಸುತ್ತಿಲ್ಲ. ಕನ್ನಡ, ಮತ್ತು ಗಣಿತ ಶಿಕ್ಷಕರನ್ನು ಹೊರತುಪಡಿಸಿ, ಇಂಗ್ಲಿಷ್‌, ಹಿಂದಿ, ವಿಜ್ಞಾನ, ಸಮಾಜ ಶಿಕ್ಷಕರನ್ನು ಕೂಡಲೇ ನೇಮಿಸಬೇಕು. ಗಡಿ ಗ್ರಾಮವಾದ್ದರಿಂದ ನಮ್ಮ ಊರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೂ ಮುಖ್ಯ ಶಿಕ್ಷಕರ ವರ್ಗಾವಣೆ ತಡೆಯಬೇಕೆಂದರು.

ಗ್ರಾಪಂ ಸದಸ್ಯ ಕೆ.ಜೆ. ಬಸವರಾಜ್‌ ಮಾತನಾಡಿ ಶಿಕ್ಷಕರನ್ನು ನೇಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದೇವೆ.
ಇದರ ಸಂಬಂಧವಾಗಿ ತಾಲೂಕು ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ದೂರವಾಣಿ ಮಾಡಿ
ಬೇಡಿಕೊಂಡರೂ ಅಧಿಕಾರಿಗಳು ಹಾರಿಕೆ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದು, ನಮ್ಮ ಕೆಂಚಮ್ಮನಹಳ್ಳಿ ಶಾಲೆಗೆ ಯಂಬಳಿ
ವಡ್ಡರಹಟ್ಟಿ, ಪಿಚ್ಚಾರಹಟ್ಟಿ, ಮಾಲೂರು ಸೇರಿದಂತೆ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀಳಲಿದೆ ಎಂದರು. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಹೋದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು. 

ಪಾಲಕರ ಮನವೊಲಿಕೆ: ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವದನ್ನು ತಿಳಿದ ಶಾಲೆಗೆ ಅಗಮಿಸಿದ ಪಾಲಕರು ನಿಮ್ಮ ಜತೆ ನಾವಿದ್ದೇವೆ. ಆದರೆ, ಶಾಲೆ ಬೀಗ ಹಾಕುವುದು ಬೇಡ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್‌ ಪಡೆದುಕೊಂಡರು.

ಕಾಸಿಂ, ಶಿವಣ್ಣ, ಮಹದೇವಮ್ಮ ಶಿವಣ್ಣ, ಚಂದ್ರಪ್ಪ, ಎಸ್‌ಡಿಎಂಸಿ ಸದಸ್ಯರಾದ ಚನ್ನಬಸಪ್ಪ ದುರುಗೇಶ್‌, ಪುಷ್ಪಾವತಿ ಹಾಗೂ ಗ್ರಾಮಸ್ಥರಾದ ಶರಣಪ್ಪ, ಸತ್ಯಪ್ಪ, ಗುಡ್ಡಪ್ಪ, ರಫಿ ಹಾಗೂ ಅಜ್ಜಣ್ಣ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕೆಂಚಮ್ಮಲ್ಲನಹಳ್ಳಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿರುವ ಮಾಹಿತಿ ಗೊತ್ತಿಲ್ಲ. ಗಡಿಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಕಾಯಂ ಶಿಕ್ಷಕರ ನೇಮಕವಾಗುವತನಕ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳಲಾಗುವುದು. 
ಎ.ಶ್ರೀಧರನ್‌, ಡಿಡಿಪಿಐ

ಟಾಪ್ ನ್ಯೂಸ್

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ

4

ಹುಮನಾಬಾದ: ಘಾಟಬೋರಳ ಗ್ರಾಮದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಳಸಂತೆಯಲ್ಲಿ ಅಕ್ಕಿಮಾರಾಟ ಜಾಲ ಸಕ್ರಿಯ

ಕಾಳಸಂತೆಯಲ್ಲಿ ಅಕ್ಕಿಮಾರಾಟ ಜಾಲ ಸಕ್ರಿಯ

ನೀಲಗುಂದ ಶ್ರೀಗಳಿಂದ ಐಕ್ಯಮಂಟಪಕ್ಕೆ ಶಿಲಾನ್ಯಾಸ

ನೀಲಗುಂದ ಶ್ರೀಗಳಿಂದ ಐಕ್ಯಮಂಟಪಕ್ಕೆ ಶಿಲಾನ್ಯಾಸ

9

ಚುನಾವಣೆ ಸಲುವಾಗಿ ರೈತರನ್ನು ತಮ್ಮತ್ತ ಸೆಳೆಯುವ ಯತ್ನ: ಬಿ.ನಾರಾಯಣಪ್ಪ

ಹಂಪಿ ಯುವಕನ ಜೊತೆ ಸಪ್ತಪದಿ ತುಳಿದ ಬೆಲ್ಜಿಯಂ ಕನ್ಯೆ: 3 ವರ್ಷದ ಹಿಂದೆ ಪ್ರೀತಿ, ವಿದೇಶ ಪ್ರವಾಸ

ಹಂಪಿ ಯುವಕನ ಜೊತೆ ಸಪ್ತಪದಿ ತುಳಿದ ಬೆಲ್ಜಿಯಂ ಕನ್ಯೆ: 3 ವರ್ಷದ ಹಿಂದೆ ಪ್ರೀತಿ, ವಿದೇಶ ಪ್ರವಾಸ

ಪ್ರಧಾನಿಯನ್ನು ನಿಂದಿಸಿ ಕ್ಷಮೆ ಕೇಳಿದ ಪರಮೇಶ್ವರ ನಾಯ್ಕ

ಪ್ರಧಾನಿಯನ್ನು ನಿಂದಿಸಿ ಕ್ಷಮೆ ಕೇಳಿದ ಪರಮೇಶ್ವರ ನಾಯ್ಕ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಕೊನೆಯ ಸುತ್ತಿನ ಪ್ರಚಾರ

6

ರಾಜಕೀಯ ದ್ವೇಶ: ಕೆರೆಗೆ ವಿಷ ಹಾಕಿದ ದುಷ್ಕರ್ಮಿಗಳು: ಲಕ್ಷಾಂತರ ಮೀನು ಮಾರಣ ಹೋಮ

5

ಮಾದಕ ವಸ್ತುಗಳ ಬಗ್ಗೆ ತಪ್ಪು ನಂಬಿಕೆಗಳು

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

ಗಾವಳಿ ಸೇತುವೆ ಬಳಿ ಲಾರಿಗಳ ಮುಖಾಮುಖಿ ಢಿಕ್ಕಿ: ಪ್ರಯಾಣಿಕ ಗಂಭೀರ, 12 ಗಂಟೆ ರಸ್ತೆ ಸಂಚಾರ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.