Udayavni Special

ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ


Team Udayavani, Dec 28, 2020, 4:57 PM IST

ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಿ

ಬಳ್ಳಾರಿ: ಕೋವಿಡ್‌ ಮಹಾಮಾರಿಯಿಂದಾಗಿ ಕಳೆದ ಮಾರ್ಚ್‌ನಿಂದ ಶಾಲಾ ಮಕ್ಕಳುಓದು ಬರಹದಿಂದ ದೂರವಿದ್ದು,ಅವರನ್ನು ಮತ್ತೇ ಶಾಲೆಯತ್ತಅತ್ಯಂತ ಸಂಭ್ರಮದಿಂದಬರಮಾಡಿಕೊಳ್ಳಲು ಶಿಕ್ಷಣ ಇಲಾಖೆಉದ್ದೇಶಿಸಿದೆ. ಜ.1ರಂದು ಅತ್ಯಂತ ಸಂಭ್ರಮಮತ್ತು ವೈಭವೋಪೇತವಾಗಿ ಶಾಲೆಗಳನ್ನುಪುನರಾರಂಭಿಸಲು ತೀರ್ಮಾನಿಸಲಾಗಿದೆ.

ಶಿಕ್ಷಣ ಸಚಿವ ಸುರೇಶಕುಮಾರ್‌ ಅಧ್ಯಕ್ಷತೆ,ಶಿಕ್ಷಣ ಇಲಾಖೆ ಆಯುಕ್ತರ ಉಪಸ್ಥಿತಿಯಲ್ಲಿಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ನಡೆದ ವಿಡಿಯೋ ಕಾನ್ಫರೆನ್ಸ್‌ನಂತರ ಜಿಪಂ ಸಿಇಒ ಕೆ.ಆರ್‌. ನಂದಿನಿಅವರು, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕರು ಹಾಗೂ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿದರು.

ಶಾಲಾ ಪ್ರಾರಂಭೋತ್ಸವ ಮತ್ತು ಅದಕ್ಕೂ ಮುನ್ನ ಕೈಗೊಳ್ಳಬೇಕಾದ ಸಿದ್ಧತಾ ಕ್ರಮಗಳನ್ನು ಜಿಲ್ಲೆಯ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಕಡ್ಡಾಯವಾಗಿ ಅನುಸರಿಸುವಂತೆ ಸೂಚನೆ ನೀಡಿದ್ದಾರೆ. 2021ರ ಜ. 1ರಿಂದ ಶಾಲಾ ಪ್ರಾರಂಭೋತ್ಸವ ಅನುಷ್ಠಾನಗೊಳಿಸಲು ಈಗಾಗಲೇ ಡಿಎಸ್‌ಇಆರ್‌ಟಿಯಿಂದ ಬಿಡುಗಡೆಗೊಂಡಿರುವ ಶಾಲಾ ಪ್ರಾರಂಭೋತ್ಸವ ಮಾರ್ಗಸೂಚಿಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಪರಿಷ್ಕೃತ ಸುತ್ತೋಲೆ ಅನುಸರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

10ನೇ ತರಗತಿಯವರಿಗೆ ಪೂರ್ಣಶಾಲೆಗಳು 2021 ಜ. 1ರಿಂದ ಪ್ರಾರಂಭವಾಗಲಿವೆ. ಎಲ್ಲ ತರಗತಿ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ. ಸ್ವಇಚ್ಛೆಯಿಂದ ಪೋಷಕರ ಒಪ್ಪಿಗೆ ಪತ್ರದ ಮೇರೆಗೆ ಶಾಲೆಗೆ ಹಾಜರಾಗಬಹುದು. ಶಾಲೆಗೆ ಹಾಜರಾಗದ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕವೂ ತರಗತಿ ಆಲಿಸಬಹುದಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ವಿದ್ಯಾಗಮ ಜ. 1ರಿಂದ ಪ್ರಾರಂಭ: 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿವಿದ್ಯಾಗಮ ಜ.1ರಿಂದ ಪ್ರಾರಂಭವಾಗಲಿವೆ. 1 ರಿಂದ 5ನೇ ತರಗತಿಗೆ ವಿದ್ಯಾಗಮಜ.14ರಿಂದ ಪ್ರಾರಂಭವಾಗಲಿವೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಶಾಲೆಗೆ ಹಾಜರಾಗುವ ಎಲ್ಲ ಮಕ್ಕಳನ್ನು ಪ್ರತಿದಿನ ಕಡ್ಡಾಯವಾಗಿ ಥರ್ಮಲ್‌ ಸ್ಕ್ಯಾನ್‌ ಮೂಲಕ ಪರೀಕ್ಷಿಸುವುದು. ರೋಗ ಲಕ್ಷಣ ಕಂಡು ಬಂದರೆ ಶಾಲೆಗೆ ಹಾಜರಾಗುವಂತಿಲ್ಲ. ಒಂದು ವೇಳೆ ಯಾವುದೇ ರೀತಿಯರೋಗಲಕ್ಷಣಗಳು ಇದ್ದಲ್ಲಿ ಪೋಷಕರಗಮನಕ್ಕೂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ತರುವುದು ಕಡ್ಡಾಯ ಎಂದು ಅವರು ವಿವರಿಸಿದ್ದಾರೆ.

ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳಾಗಿ ಶಾಲಾ ಕಟ್ಟಡದ ಗೋಡರೀಲಿಂಕ್ಸ್‌ ಲಿಫೈ, ಸೈರ್‌ಕೇಸ್‌, ವಾಹನಗಳು ಪೀಠೊಪಕರಣಗಳು ಇತ್ಯಾದಿಗಳನ್ನು 1%ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸುವುದು, ಸೇವಾ ಸಂಸ್ಥೆಗಳಾದ ರೋಟರಿ ಕ್ಲಬ್‌, ಲಯನ್ಸ್‌ ಕ್ಲಬ್‌ ಮತ್ತು ಸೌಟ್‌ ಮತ್ತು ಗೈಡ್‌ ಹಾಗೂ ದಾನಿಗಳ ನೆರವನ್ನು ಪಡೆದು ಮಕ್ಕಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಲಭ್ಯತೆ ಒದಗಿಸುವುದು. ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಾಲಾ ಪ್ರಾರಂಭೋತ್ಸವಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಕೊಠಡಿಮೀಸಲಿಡಬೇಕು ಎಂದು ಸೂಚಿಸಿರುವಅವರು ಎಲ್ಲ ಶಾಲೆಗಳ ಶೌಚಾಲಯ, ಕೊಠಡಿಗಳು, ಮೈದಾನ, ಶಾಲಾ ಆವರಣವು ಸ್ವಚ್ಛ ಮಾಡಿಸುವುದು. ಶಾಲೆಗಳನ್ನುತಳೀರು ತೋರಣಗಳಿಂದ ಸಿಂಗರಿಸಿ ಶಾಲಾಅಂಗಳದಲ್ಲಿ ರಂಗೋಲಿ ಬಿಡಿಸಿ ಶಾಲಾಆವರಣ ಅಂದಗೊಳಿಸಬೇಕು ಎಂದು ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?

ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?

ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಕಾಂಗ್ರೆಸ್‌ನಲ್ಲೂ ಅಡ್ಜಸ್ಟ್‌ಮೆಂಟ್‌ ಚರ್ಚೆ

ಕಾಂಗ್ರೆಸ್‌ನಲ್ಲೂ ಅಡ್ಜಸ್ಟ್‌ಮೆಂಟ್‌ ಚರ್ಚೆ

ಇಂದು ಲಸಿಕೆ ದಿನ

ಇಂದು ಲಸಿಕೆ ದಿನ

ಈ ವರ್ಷ ವರ್ಗಾವಣೆ ಅನುಮಾನ

ಈ ವರ್ಷ ವರ್ಗಾವಣೆ ಅನುಮಾನ

ದಿನವಿಡೀ ದುಡಿದು ಪಡೆಯುವ ಕೂಲಿ

ದಿನವಿಡೀ ದುಡಿದು ಪಡೆಯುವ ಕೂಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RANGOLI

ಗಣಿನಾಡಿನಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ

A fascinating Rangabharati park

ಮನಸೆಳೆವ ರಂಗಭಾರತಿ ಉದ್ಯಾನವನ

Historic Hampi place

ಐತಿಹಾಸಿಕ ಹಂಪಿ ಕ್ಷೇತ್ರಕ್ಕೆ ಹರಿದು ಬಂತು ಜನಸಮೂಹ

Crop clearance using JCB machine

ಜೆಸಿಬಿ ಯಂತ್ರ ಬಳಸಿ ಬೆಳೆ ತೆರವು

Free Mask Distribution for School Children

ಶಾಲಾ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

MUST WATCH

udayavani youtube

ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್‌ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ

udayavani youtube

ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ

udayavani youtube

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

udayavani youtube

ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani

udayavani youtube

ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು

ಹೊಸ ಸೇರ್ಪಡೆ

ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?

ಜನಸಾಮಾನ್ಯರಿಗೆ ಲಸಿಕೆ ಯಾವಾಗ ಕೊಡುತ್ತಾರೆ?

ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

ಎಚ್‌1-ಬಿ ವೀಸಾ ಅಸ್ತ್ರ: ಬೈಡೆನ್‌ಗೆ ಟ್ರಂಪ್‌ ಹೊಸ ಸವಾಲು

ತಾಲೂಕು ಕೇಂದ್ರ ಬೈಂದೂರಿನಲ್ಲಿ ತಹಶೀಲ್ದಾರರೇ ಇಲ್ಲ!

ತಾಲೂಕು ಕೇಂದ್ರ ಬೈಂದೂರಿನಲ್ಲಿ ತಹಶೀಲ್ದಾರರೇ ಇಲ್ಲ!

ಮರವಂತೆ ಕರಾವಳಿ ಪ್ರದೇಶ: ಬ್ರೇಕ್‌ ವಾಟರ್‌ಗೆ ಬೇಡಿಕೆ

ಮರವಂತೆ ಕರಾವಳಿ ಪ್ರದೇಶ: ಬ್ರೇಕ್‌ ವಾಟರ್‌ಗೆ ಬೇಡಿಕೆ

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.