Udayavni Special

ರೈಲು ಸಂಚಾರ ಕನಸು ನನಸು


Team Udayavani, Sep 17, 2019, 1:20 PM IST

ballary-tdy-1

ಹೊಸಪೇಟೆ: ನಗರದಿಂದ ಕೊಟ್ಟೂರುವರೆಗೆ ರೈಲ್ವೆ ಸುರಕ್ಷತಾ ಅಧಿಕಾರಿಗಳು ಟ್ರಾಲಿಗಳ ಮೂಲಕ ಹಳಿ ಸುರಕ್ಷತಾ ಪರಿಶೀಲನೆ ಕಾರ್ಯ ಆರಂಭಿಸಿದರು.

ಹೊಸಪೇಟೆ: ಹೊಸಪೇಟೆ-ಕೊಟ್ಟೂರು ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಈ ಭಾಗದ ಜನರ ಎರಡು ದಶಕಗಳ ಹೋರಾಟದ ಬಳಿಕ ಕೊಟ್ಟೂರು-ಹೊಸಪೇಟೆ ರೈಲು ಸಂಚಾರಕ್ಕೆ ಶುಭಾರಂಭ ದೊರೆಯುವ ಎಲ್ಲ ಸಾಧ್ಯತೆಗಳಿದ್ದು ಸೆ. 21ರಂದು ಚಾಲನೆ ಸಿಗಲಿದೆ ಎಂಬ ವಿಶ್ವಾಸ ಗರಿಗೆದರಿದೆ.

ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳು ರೈಲ್ವೆ ಸಂಚಾರದ ‘ಗ್ರೀನ್‌ ಸಿಗ್ನಲ್’ ತೋರಿಸಿದ್ದಾರೆ. ಹೀಗಾಗಿ ರೈಲ್ವೆ ಸಂಚಾರಕ್ಕಾಗಿ ಈವರೆಗೆ ನಡೆಸಿದ ಹೋರಾಟಕ್ಕೆ ಫ‌ಲ ನೀಡಿದಂತಾಗಿದೆ. ಪ್ಯಾಸೆಂಜರ್‌ ರೈಲು ಓಡಾಟ ಆರಂಭಿಸುವುದರಿಂದ ಪೂರಕ ಕಾಮಗಾರಿಗಳು ಚುರುಕುಗೊಂಡಿವೆ. ರೈಲ್ವೆ ನಿಲ್ದಾಣದ ಅಭಿವೃದ್ಧಿ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ದಿಸೆಯ ಕೆಲಸಗಳು ಭರದಿಂದ ನಡೆದಿವೆ. ತುಂಗಭದ್ರಾ ಡ್ಯಾಂ ನಿಲ್ದಾಣ, ವ್ಯಾಸನಕೆರೆ ನಿಲ್ದಾಣ, ಹಗರಿಬೊಮ್ಮನಹಳ್ಳಿ ನಿಲ್ದಾಣದಲ್ಲಿ ಕಟ್ಟಡಗಳಿಗೆ ವಿದ್ಯುತ್‌ ಅಳವಡಿಕೆ ಕಾರ್ಯ ನಡೆದಿದೆ. ಉಳಿದಂತೆ ಹೊಸಪೇಟೆಯಿಂದ ಕೊಟ್ಟೂರುವರೆಗೆ ಸಾಗುವ ದಾರಿ ಮಧ್ಯದಲ್ಲಾಗಬೇಕಾದ ಕಾಮಗಾರಿಗಳು ಚುರುಕಾಗಿದ್ದು ಪ್ಲಾಟ್ಫಾರಂ, ಹೈಟೆಷನ್‌ ತಂತಿ ಸ್ಥಳಾಂತರ ಕೆಲಸ ಬಹುತೇಕ ಪೂರ್ಣಗೊಂಡಿದೆ.

ಹೊಸಪೇಟೆಯಿಂದ ಕೊಟ್ಟೂರುವರೆಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದ್ದು, ನಿರಂತರ ಹೋರಾಟಕ್ಕೆ ಪ್ರತಿಫ‌ಲ ಸಿಕ್ಕಂತಾಗಿದೆ ಎನ್ನುತ್ತಾರೆ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ. ರೈಲು ಸಂಚಾರದಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ರೈಲನ್ನು ಬಳ್ಳಾರಿಯಿಂದ ಓಡಾಡಿಸುವಂತಾಗಬೇಕು ಎಂಬುದು ಈ ಭಾಗದ ಜನರ ಒತ್ತಾಸೆಯಾಗಿದೆ ಎನ್ನುತ್ತಾರೆ. ಮೊದಲು ಹೊಸಪೇಟೆ ಹಾಗೂ ಕೊಟ್ಟೂರು ರೈಲು ಸಂಚಾರ ಶುರುವಾಗಲಿ. ನಂತರ ಇದನ್ನು ವಿಸ್ತರಿಸುವುದು ಕಷ್ಟವಲ್ಲ. ಬಳ್ಳಾರಿ ಜಿಲ್ಲೆ ರೈಲ್ವೆ ಇಲಾಖೆಗೆ ಅತಿ ಹೆಚ್ಚು ಆದಾಯವನ್ನು ನೀಡಿದ ಜಿಲ್ಲೆ. ದಕ್ಷಿಣ ಮಧ್ಯ ರೈಲ್ವೆಗೆ ಬಳ್ಳಾರಿ ಕೊನೆಯ ಪಾಂಯಿಂಟ್ ಆಗಿದೆ. ಹೀಗಾಗಿ ಬಳ್ಳಾರಿಗೆ ಈ ರೈಲು ವಿಸ್ತರಣೆಯಾದರೆ ಬಳ್ಳಾರಿಯಿಂದ ಹೊಸಪೇಟೆಗೆ ನಿತ್ಯ ಸಾವಿರಾರು ಜನರು ಓಡಾಡುತ್ತಿದ್ದು, ಅವರಿಗೆ ಅನುಕೂಲವಾಗಲಿದೆ. ಬಳ್ಳಾರಿಯಿಂದ ನೇರವಾಗಿ ಕೊಟ್ಟೂರಿಗೆ ತೆರಳುವ ಪ್ರಯಾಣಿಕರ ಸಹ ಹೆಚ್ಚಿನ ಅನುಕೂಲವಾಗಿದೆ ಎಂದು ಮಹೇಶ್ವರ ಸ್ವಾಮಿ ತಿಳಿಸಿದರು.

ಪರಿಶೀಲನೆ ಕಾರ್ಯ:

ರೈಲ್ವೆ ಸುರಕ್ಷತಾ ಅಧಿಕಾರಿಗಳು, ಸೋಮವಾರ ಟ್ರಾಲಿಗಳ ಮೂಲಕ ಹೊಸಪೇಟೆಯಿಂದ ಕೊಟ್ಟೂರುವರೆಗೆ ಹಳಿ ಸುರಕ್ಷತೆ ನಿಲ್ದಾಣ ಹಾಗೂ ರೈಲ್ವೆ ಗೇಟ್‌ಗಳನ್ನು ಪರಿಶೀಲನೆ ಕಾರ್ಯ ನಡೆಸಿದರು. ರೈಲ್ವೆ ಸುರಕ್ಷತಾ ಆಯುಕ್ತ ಮನೋಹರನ್‌ ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಹುಬ್ಬಳ್ಳಿ ವಲಯ) ರಾಜೇಶ್‌ ಮೋಹನ್‌ ನೇತೃತ್ವದ ತಂಡ, ನಗರದ ರೈಲ್ವೆ ನಿಲ್ದಾಣದಿಂದ ಕೊಟ್ಟೂರು ರೈಲು ಹಳಿ ಮಾರ್ಗದ ಸುರಕ್ಷತೆ ಪರಿಶೀಲನೆ ನಡೆಸಿ, ನೈರುತ್ಯ ವಲಯ ರೈಲ್ವೆ ಇಲಾಖೆ ವರದಿ ನೀಡಲಿದೆ. ಈ ವರದಿ ಆಧಾರಿಸಿ, ದಿನಾಂಕ ನಿಗದಿಯಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಈ ವಾರದ ಕೊನೆಯಲ್ಲಿ ನಗರದಿಂದ ಕೊಟ್ಟೂರು ರೈಲು ಓಡಾಟ ಆರಂಭವಾಗಲಿದೆ. ಈ ಮೂಲಕ ಈ ಭಾಗದ ಜನರ ಬಹುದಿನ ಬೇಡಿಕೆ ಈಡೇರಿದಂತಾಗಿದೆ.
ಬಳ್ಳಾರಿವರೆಗೆ ವಿಸ್ತರಣೆಯಾಗಲಿ:

ಹೊಸಪೇಟೆಯಿಂದ ಕೊಟ್ಟೂರಿಗೆ ರೈಲು ಸಂಚಾರ ಆರಂಭಿಸುತ್ತಿರುವುದು ಅತ್ಯಂತ ಖುಷಿ ಸಂಗತಿಯಾಗಿದೆ. ಈ ಭಾಗದಲ್ಲಿ ರೈಲ್ವೆ ಸೌಲಭ್ಯ ಹೆಚ್ಚಳವಾಗಬೇಕು. ಆದರೆ ಬಳ್ಳಾರಿವರೆಗೆ ಈ ರೈಲು ವಿಸ್ತರಣೆಯಾಗಬೇಕು. ಬಡವರಿಗೆ ಅನುಕೂಲವಾಗಲಿದೆ. •ವಿ.ಶಿವಾಚಾರಿ ಡಿ.ಕಗ್ಗಲ್,ಎಲ್ಐಸಿ ಪ್ರತಿನಿಧಿ, ಬಳ್ಳಾರಿ
ಅಶಾಭಾವ:

ಹೊಸಪೇಟೆ-ಕೊಟ್ಟೂರು ನಡುವೆ ರೈಲು ಓಡಾಟಕ್ಕೆ ಈ ಭಾಗದ ಜನರು ಎದುರು ನೋಡುತ್ತಿದ್ದರು. ಇದೀಗ ಶೀಘ್ರ ರೈಲು ಓಡಾಟಕ್ಕೆ ಹಸಿರು ನಿಶಾನೆ ದೊರೆತ್ತಿದೆ. ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಇಂದು ರೈಲು ಮಾರ್ಗದ ಸುರಕ್ಷತೆ ಪರಿಶೀಲನೆ ಮಾಡುತ್ತಿದೆ. ಈ ವಾರದ ಕೊನೆಯಲ್ಲಿ ರೈಲು ಓಡಾಟ ಆರಂಭವಾಗಲಿದೆ ಎಂಬುದು ಆಶಾಭಾವ. •ಕೆ.ಮಹೇಶ್‌, ಅಧ್ಯಕ್ಷರು,ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ
ಕನಸು ಈಡೇರಿಕೆ:

ರೈಲ್ವೆ ಸುರಕ್ಷತಾ ಆಯುಕ್ತರ ಮಾರ್ಗ ಪರಿಶೀಲನೆ ನಂತರ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಓಡಾಟದ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಬಳ್ಳಾರಿ ಜಿಲ್ಲೆಯ ಜನತೆಯ ಎರಡು ದಶಕಗಳ ಕನಸು ಈಡೇರಿದಂತಾಗಿದೆ. ಶೀಘ್ರದಲ್ಲಿ ಸಹಕಾರಗೊಳ್ಳುತ್ತದೆ. •ವೈ.ಯಮುನೇಶ್‌, ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷರು
•ಪಿ.ಸತ್ಯನಾರಾಯಣ

ಟಾಪ್ ನ್ಯೂಸ್

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

ಇಂದು ಚಿರು ಹುಟ್ಟುಹಬ್ಬ: ಮೇಘನಾ ಹೊಸ ಸಿನಿಮಾ ಆರಂಭ

bommai and siddaramaiah

ಒಂದೇ ಹೋಟೆಲ್ ನಲ್ಲಿದ್ದರೂ ಪರಸ್ಪರ ಭೇಟಿಯಾಗದ ಸಿಎಂ-ಮಾಜಿ ಸಿಎಂ!

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

ಗಂಗಾವತಿ: ಹೆಚ್ಚಳವಾಗುತ್ತಿರುವ ಅನಾಥ ವಯೋವೃದ್ಧರು, ಭಿಕ್ಷುಕರ ಸಂಖ್ಯೆ ಜಿಲ್ಲಾಡಳಿತ ಮೌನ

shrikrishna gmail com movie review

ಶ್ರೀಕೃಷ್ಣ ಅಟ್‌ ಜಿಮೇಲ್‌. ಕಾಂ ಚಿತ್ರ ವಿಮರ್ಶೆ: ಫ್ಯಾಮಿಲಿ ಟೈಮ್‌ ನಲ್ಲಿ ಕೃಷ್ಣ ಸುಂದರ ಯಾನ

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ballari news

16ರಂದು ಗ್ರಾಮ ವಾಸ್ತವ್ಯ

ballari news

ಅನ್ನದಾತನ ಕೈಹಿಡಿದ ಚೆಂಡು ಹೂ

ballari news

ಕುಲಪತಿ ವಿರುದ್ಧ ಕ್ರಮಕ್ಕೆ ಅಲ್ಲಂ ಪತ್ರ

The bridge work

ಕೆಂಚಿಹಳ್ಳ ಸೇತುವೆ ಕಾಮಗಾರಿ ಅಪೂರ್ಣ

MUST WATCH

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

ಹೊಸ ಸೇರ್ಪಡೆ

ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಚಾಲನೆ

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಬೇಕು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ

ffhjutgfd

ತುಮಕೂರು : ಮದುವೆ ಮಾಡಿಸುವಂತೆ ಡಿಸಿಗೆ ಅರ್ಜಿ ಸಲ್ಲಿಸಿದ ಯುವಕರು

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ  ಶಾಸಕ ಮಂಜುನಾಥ್ ಆದೇಶ

ವಾರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಶಾಸಕ ಮಂಜುನಾಥ್ ಆದೇಶ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಇಂದಿನ ರಾಜಕಾರಣ ನನಗೆ ತೃಪ್ತಿ ಎನಿಸುತ್ತಿಲ್ಲ: ಬಸವರಾಜ ಹೊರಟ್ಟಿ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

ಎಂ.ಎ.ಹೆಗಡೆರಿಗೆ ಮರಣೋತ್ತರ ಚಂದುಬಾಬು‌ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.