ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯದ ನೀರು
Team Udayavani, Aug 27, 2021, 8:18 PM IST
ಹೊಸಪೇಟೆ:ಕಲ್ಯಾಣ ಕರ್ನಾಟಕ ಪ್ರದೇಶದ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಇದೀಗ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು, ನದಿ ಪಾತ್ರದ ಜನ-ಜಾನುವಾರುಗಳ ಆರೋಗ್ಯಕ್ಕೆ ಕಂಠಕ ಪ್ರಾಯವಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಸಂಪೂರ್ಣ ಭರ್ತಿಯಾಗಿ ಜಲಾಶಯದ ಹಿನ್ನೀರಿನ(ಗೂಂಡಾ ಕಾದಿಟ್ಟ ಅರಣ್ಯ) ಪ್ರದೇಶದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ.
ತುಂಗಭದ್ರಾ ನದಿ ಪಾತ್ರದ ಜನ-ಜಾನುವಾರುಗಳು ನೀರನ್ನು ಹೆಚ್ಚಾಗಿ ಶುದ್ದೀಕರಿಸದೇ ಸೇವನೆ ಮಾಡುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಪಶ್ಚಿಮ ಘಟ್ಟದ ಆಯ್ದ ಪಟ್ಟಣಗಳ ಕೆಲ ಕಾರ್ಖಾನೆಗಳ ತ್ಯಾಜ್ಯ ನದಿಗೆ ಬಂದು ಸೇರುತ್ತಿದೆ. ರೈತರು ಹೊಲ-ಗದ್ದೆಗಳಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಕೆ ಹಾಗೂ ಜನವಸತಿ ಪ್ರದೇಶದ ತ್ಯಾಜ್ಯ ಕೂಡ ನದಿಗೆ ಬಂದು ಸೇರುತ್ತಿರುವ ಪರಿಣಾಮ ನೀರು ಹಸಿರು ಬಣ್ಣಕ್ಕೆ ಬರುತ್ತಿದೆ.
ಇದನ್ನೂ ಓದಿ:ನೋಡು ನೋಡುತ್ತಲೆ ಕುಸಿದು ಬಿದ್ದ ಬ್ರಿಡ್ಜ್ : ವಿಡಿಯೋ ಇಲ್ಲಿದೆ ನೋಡಿ
ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುವ ನೀರು ಈ ಬಾರಿ ಅವಧಿಗೆ ಮುನ್ನವೇ ಹಸಿರು ಬಣ್ಣಕ್ಕೆ ತಿರುಗಿದೆ. ಈ ನೀರು ಸಂಕ್ರಾಮಿಕ ರೋಗ-ರುಜಿನ ಹಾಗೂ ಚರ್ಮ ರೋಗಗಳಿಗೂ ಕಾರಣವಾಗಬಹದು ಎಂದು ಪರಿಸರ ತಜ್ಷರು ಎಚ್ಚರಿಸಿದ್ದಾರೆ.
ಇತ್ತೀಚಿಗೆ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಖಾತೆ ವಹಿಸಿಕೊಂಡಿರುವ ಸಚಿವ ಆನಂದ ಸಿಂಗ್ ಅವರು ರಾಜ್ಯದ ಯಾವುದೇ ನದಿಗಳಿಗೆ ತ್ಯಾಜ್ಯ ಹರಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉದಯವಾಣಿಯೊಂದಿಗೆ ಮಾತನಾಡಿದ ಸಚಿವ ಆನಂದ ಸಿಂಗ್ ಅವರು, ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚುಂಚನಕಟ್ಟೆ ಸಕ್ಕರೆ ಕಾರ್ಖಾನೆ ಗುತ್ತಿಗೆಗೆ ಅನುಮೋದನೆ
ವರದಕ್ಷಿಣೆ ಕಿರುಕುಳ: ವೈದ್ಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ-ಪತಿ ಅಪರಾಧಿ: ಕೇರಳ ಕೋರ್ಟ್
ಪ್ರಜಾಪ್ರಭುತ್ವದಲ್ಲಿ ಠೀಕೆಯನ್ನು ಎದುರಿಸದೇ ಇರುವುದು ಕೂಡಾ ಅಪಾಯಕಾರಿ : ಕೋಟ
ಗುಡ್ ಗುಡ್ಡರ್ ಗುಡ್ಡೆಸ್ಟ್: ಹೊಸಬರ ಕಿಕ್ ಸ್ಟಾರ್ಟ್
ಶಿವಮೊಗ್ಗ: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ