ಸ್ಥಳೀಯರಿಗೆ ಉದ್ಯೋಗ ನೀಡಲು ಪಟ್ಟು
Team Udayavani, Nov 27, 2020, 6:27 PM IST
ಸಂಡೂರು: ಪರಿಸರ ಕುರಿತು ಸಾರ್ವಜನಿಕ ಆಲಿಕೆ ಸಭೆಯಲ್ಲಿ ಬಹಳಷ್ಟು ಸಾರ್ವಜನಿಕರು ಸ್ಥಳೀಯರಿಗೆ ಉದ್ಯೋಗ ಕೊಡಬೇಕು ಎನ್ನುವ ಮಹತ್ತರ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಕಂಪನಿಯೂ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡುವ ಭರವಸೆ ನೀಡಿದೆ ಎಂದು ಜಿಲ್ಲಾಧಿಕಾರಿ ನಕುಲ ತಿಳಿಸಿದರು.
ತಾಲೂಕಿನ ವೀರಭದ್ರಪ್ಪ ಸಂಘಪ್ಪ ಕಂಪನಿಯವರು ಧರ್ಮಪುರ ಕಬ್ಬಿಣದ ಅದಿರಿನ ಗಣಿ ಗುತ್ತಿಗೆ ಉತ್ಪಾದನೆಗಾಗಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅಹವಾಲು ಸ್ವೀಕರಿಸಿಮಾತನಾಡಿ, ಉದ್ಯೋಗ, ಆರೋಗ್ಯ ರಕ್ಷಣೆಗೆಆಸ್ಪತ್ರೆ ನಿರ್ಮಿಸಬೇಕು. ಅದಕ್ಕೆ ಪೂರಕವಾಗಿಈಗಾಗಲೇ ಕಂಪನಿ ಅ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದೆ. ಅಲ್ಲದೆ ಸಿ.ಎಸ್.ಅರ್ ಯೋಜನೆಅಡಿಯಲ್ಲಿ 30 ಲಕ್ಷ ರೂ. ಪ್ರಸ್ತಾಪಿಸಿದ್ದು, ಅದನ್ನು ಇನ್ನೂ 60 ಲಕ್ಷಕ್ಕೆ ಹೆಚ್ಚಿಸಬೇಕು ಎಂದರು. ತಾಲೂಕಿನ ಪ್ರತಿ ಗ್ರಾಪಂನಲ್ಲಿ ಕಂಪ್ಯೂಟರ್, ಟೇಲರಿಂಗ್ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಅಲ್ಲದೆ ಚಾಲನೆ ತರಬೇತಿಗೆ ಇಡೀ ತಾಲೂಕಿನಾದ್ಯಂತ ಕರೆದರೆ ಕೇವಲ 13 ಸದಸ್ಯರೂ ಮಾತ್ರ ಅಗಮಿಸಿದ್ದರು. ಆದ್ದರಿಂದ ತರಬೇತಿ ಪಡೆದು ಉದ್ಯೋಗ ಮಾಡಲು ಬಹಳಷ್ಟು ಅವಕಾಶಗಳನ್ನು ಸಿ.ಎಸ್.ಅರ್ ಮತ್ತು ಡಿ.ಎಂ.ಎಫ್. ನಿಯಮದ ಅಡಿಯಲ್ಲಿ ಕಲ್ಪಿಸಲಾಗಿದೆ, ಅಲ್ಲದೆ ಎನ್.ಎಂ.ಡಿ.ಸಿ ಗಣಿ ಕಂಪನಿಯ ವತಿಯಿಂದ ಸಿ.ಎಸ್.ಅರ್ ಯೋಜನೆ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಮೊಬೈಲ್ ಅಸ್ಪತ್ರೆಯ ವ್ಯವಸ್ಥೆ ಮಾಡಲಾಗುವುದು. ಇನ್ನೂ ದೇವಸ್ಥಾನಗಳಿಗೆ ಸಿಎಸ್‌ಅರ್ ಹಣ ಬಳಕೆ ಮಾಡದೇ, ಡಿಎಂಎಫ್ ಹಣ ಬಳಸಿ ಅದನ್ನು ತೋರಿಸುವುದಿಲ್ಲ, ಅದು ಕೇವಲ ಗಣಿ ಕಂಪನಿಗೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೆ ತಾಲೂಕಿನಾದ್ಯಂತ ಅವಕಾಶವಿರುವ ಬೈಪಾಸ್ ರಸ್ತೆಗಳನ್ನು ನಿರ್ಮಿಸಲಾಗುವುದು. ಅದಕ್ಕೆ ಎಲ್ಲಾ ತಯಾರಿ ನಡೆಸಲಾಗಿದೆ ಎಂದು ತಿಳಿಸಿದರು.
ವೆಸ್ಕೋ ಗಣಿ ಕಂಪನಿಯ ಪರವಾಗಿ ಅಧಿಕಾರಿ ಷಣ್ಮುಖಪ್ಪ ಮಂದಾಲ್ ಮಾತನಾಡಿ, ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಅರ್ಹತೆ ಅಧಾರದ ಮೇಲೆ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು. ಅಲ್ಲದೆ ಹಂತ ಹಂತವಾಗಿ ಶೌಚಾಲಯ ನಿರ್ಮಿಸಿಕೊಡಲಾಗುವುದು. ಇನ್ನೂ ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೇಕಾಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಂಪನಿ ನೀಡ ಬಯಸಿದೆ ಎಂದರು.
ಪರಿಸರ ಇಲಾಖೆಯ ಅಧಿಕಾರಿ ಎಂ.ಸಿ. ರಮೇಶ್, ಇತರ ಸಿಬ್ಬಂದಿ ಪೂರ್ಣ ಮಾಹಿತಿ ನೀಡಿದರು. ಸಾರ್ವಜನಿಕರ ಅನಿಸಿಕೆಗಳಾಗಿ ಕರವೇ ಅಧ್ಯಕ್ಷ ಪಿ.ರಾಜು, ಸಂಡೂರು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶ್ರೀಶೈಲ ಅಲ್ದಳ್ಳಿ, ಸತೀಶ್, ರೈತ ಸಂಘದ ಅಧ್ಯಕ್ಷ ಧರ್ಮಾನಾಯ್ಕ, ಧರ್ಮಾಪುರದಮುಖಂಡ ಅಜ್ಜಪ್ಪ, ಲಕ್ಷ್ಮೀಪುರ ಗ್ರಾಮದ ಶಿವಪ್ಪ,ಇತರರು ಕಂಪನಿ ತೆರೆಯಬೇಕು. ಹೆಚ್ಚು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ತಿಳಿಸಿದರು. ಯಶವಂತನಗರದ ಡಿ. ಹುಸೇನ್ ಪೀರಾ ಭವಿಷ್ಯ ಗಮನದಲ್ಲಿಟ್ಟರೆ ಕಂಪನಿಯ ಅವಶ್ಯಕತೆ ಇಲ್ಲ ಎಂದರು. ವೆಸ್ಕೋ ಕಂಪನಿಯ ಸಿಬ್ಬಂದಿ, ಧರ್ಮಾಪುರ, ಯಶವಂತನಗರ, ಸುಶೀಲಾನಗರ ಗ್ರಾಮದ ಜನತೆ ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444