Udayavni Special

ವೀ.ವಿ. ಸಂಘದ ಸಮಿತಿಗೆ ಚುನಾವಣೆ

­19ರಿಂದ ನಾಮಪತ್ರ ಸಲ್ಲಿಕೆ­2586 ಆಜೀವ ಸದಸ್ಯರು­ಆರ್‌ವೈಎಂಇಸಿ ಕಾಲೇಜಿನಲ್ಲಿ 8 ಬೂತ್‌ ವ್ಯವಸ್ಥೆ  

Team Udayavani, Feb 11, 2021, 3:23 PM IST

Vidyavardhak election

ಬಳ್ಳಾರಿ: ವೀರಶೈವ ವಿದ್ಯಾವರ್ಧಕ ಸಂಘದ ಮುಂದಿನ ಮೂರು ವರ್ಷಗಳ ಅವಧಿಗೆ 30 ಜನ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಮಾ. 21ರಂದು ಚುನಾವಣೆ ನಡೆಯಲಿದ್ದು, ಇದೇ ಫೆ. 19ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ಎನ್‌.ಪಿ.ಲಿಂಗನಗೌಡ ಹೇಳಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ಅಕ್ಟೋಬರ್‌ 15ರಂದು ಚುನಾವಣೆ ನಡೆದಿತ್ತು. ಸಂಘದ ಹಾಲಿ ಸದಸ್ಯರ ಮೂರು ವರ್ಷದ ಅವ ಧಿ 2020ಕ್ಕೆ ಪೂರ್ಣಗೊಂಡಿದ್ದು, ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕಳೆದ ವರ್ಷ ಕೋವಿಡ್‌ ಸೋಂಕು ಆವರಿಸಿದ್ದರಿಂದ ಆರು ತಿಂಗಳು ವಿಳಂಬವಾಗಿದೆ. ಇದೀಗ 2021ನೇ ಸಾಲಿನಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಚುನಾವಣೆ ನಡೆಸಲು ಸಂಘದ ನಿವೃತ್ತ ನೌಕರರಾದ ಎನ್‌.ಪಿ.ಲಿಂಗನಗೌಡ ಚುನಾವಣಾಧಿಕಾರಿ, ವಿ.ಎಂ. ರಾಜಶೇಖರ್‌, ಎಚ್‌.ವಿಜಯಕುಮಾರ್‌, ಡಾ| ಕೆ. ತೇಜಸ್‌ ಮೂರ್ತಿ, ಎಸ್‌.ನಾಗರಾಜ್‌ ಸೇರಿ ನಾಲ್ವರನ್ನು ಸಹಾಯಕ ಚುನಾವಣಾ ಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ನಾಮಪತ್ರ ಅರ್ಜಿ ಶುಲ್ಕವನ್ನು 600 ರೂ., ಉಮೇದುವಾರಿಕೆ ಶುಲ್ಕವನ್ನು 6 ಸಾವಿರ ರೂ. ನಿಗದಿಪಡಿಸಲಾಗಿದೆ. ಫೆ. 19ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಫೆ. 26ರಂದು ಮಧ್ಯಾಹ್ನ 3 ಗಂಟೆವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫೆ. 27ರಂದು ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಪರಿಶೀಲನೆ ಮುಗಿದ ಬಳಿಕ ಅಂದು ಸಂಜೆ ಅರ್ಹತೆಯುಳ್ಳ ಉಮೇದುವಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮಾ. 1ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಬಹುದಾಗಿದೆ. ನಂತರ ಅಂದು ಸಂಜೆ ನಾಮಪತ್ರ ಹಿಂಪಡೆದವರು ಮತ್ತು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಮಾ. 21 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಗರದ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ 8 ಬೂತ್‌ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದವರು ವಿವರಿಸಿದರು.

ಮರುದಿನ ಮಾ. 22ರಂದು ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜು ಆವರಣದಲ್ಲೇ ಬೆಳಗ್ಗೆ 9.05ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಎಣಿಕೆ ಕಾರ್ಯ ಸಂಪೂರ್ಣವಾಗಿ ಮುಗಿದ ಬಳಿಕ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ :ಚಿರತೆ ನೋಡಿ ಹುಲಿ ಎಂದ ಕಾರು ಚಾಲಕ; ವಿಡಿಯೋ ವೈರಲ್

ವೀ.ವಿ. ಸಂಘದಲ್ಲಿ ಒಟ್ಟು 2890 ಆಜೀವ ಸದಸ್ಯರು ಇದ್ದರು. ಇವರಲ್ಲಿ 2014-17ರ ಅವಧಿಯಲ್ಲಿ 200 ಸದಸ್ಯರು, 2017-21ನೇ ಸಾಲಿನ ಅವ ಧಿಯಲ್ಲಿ 101 ಸದಸ್ಯರು ಸೇರಿ ಆರು ವರ್ಷದಲ್ಲಿ ಒಟ್ಟು 301 ಸದಸ್ಯರು ನಿಧನರಾಗಿದ್ದಾರೆ.

ಸದ್ಯ 2372 ಪುರುಷ, 214 ಮಹಿಳೆಯರು ಸೇರಿ ಒಟ್ಟು 2586 ಆಜೀವ ಸದಸ್ಯರು ಇದ್ದಾರೆ. ಇವರಲ್ಲಿ ನಗರ ಪ್ರದೇಶದಲ್ಲಿನ ಸದಸ್ಯರ ಸಂಖ್ಯೆಯೇ ಹೆಚ್ಚಿದೆ. ಚುನಾವಣೆಯಲ್ಲಿ ನಗರ ಪ್ರದೇಶದಿಂದ 16, ಗ್ರಾಮೀಣ ಭಾಗದಿಂದ 14 ಸೇರಿ ಒಟ್ಟು 30 ಸದಸ್ಯರನ್ನು ಆಯ್ಕೆ ಮಾಡಬೇಕಿದ್ದು, ಪ್ರತಿಯೊಬ್ಬ ಮತದಾರರು 30 ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕು ಎಂದರು.

ಟಾಪ್ ನ್ಯೂಸ್

Salma’s women dream of many things in this novel, but we cannot grasp the dreamers

ವುಮೆನ್ ಡ್ರೀಮಿಂಗ್ : ಬದುಕನ್ನು ಗ್ರಹಿಸಲು ಸಾಧ್ಯವಿಲ್ಲ..!

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

v

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

Congress MLA Santosh Mishra’s nephew

ಕಾಂಗ್ರೆಸ್ ಶಾಸಕ ಸಂತೋಷ್ ಸೋದರಳಿಯನ ಗುಂಡಿಕ್ಕಿ ಕೊಲೆ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

ಬಿಡಿಎ ನಿವೇಶನ ಫ್ಯಾನ್ಸಿ ನಂಬರ್‌ 1,000ಕ್ಕೆ 1.30 ಕೋಟಿ ರೂ.!

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

Salma’s women dream of many things in this novel, but we cannot grasp the dreamers

ವುಮೆನ್ ಡ್ರೀಮಿಂಗ್ : ಬದುಕನ್ನು ಗ್ರಹಿಸಲು ಸಾಧ್ಯವಿಲ್ಲ..!

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ವಿಜೃಂಭಣೆಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಜನರನ್ನು ರಕ್ಷಿಸುವಲ್ಲಿ ಬಿಜೆಪಿ ಸರ್ಕಾರ ವಿಫ‌ಲ

ಕೃಷಿ ವಿವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

ಕೃಷಿ ವಿ.ವಿ ಹಾಸ್ಟೇಲ್ ಗಳಲ್ಲಿ ಮಧ್ಯಾಹ್ನದ ಊಟಕ್ಕೆ ಸಿರಿಧಾನ್ಯ ಸೂಚನೆ: ಬಿ.ಸಿ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.