ಇಂದಿನಿಂದ ವಿಜಯಾನಂದ


Team Udayavani, Feb 9, 2021, 3:08 PM IST

Vijayananda from today

ಬಳ್ಳಾರಿ: ಹೊಸಪೇಟೆ ಕೇಂದ್ರವಾಗಿಸಿಕೊಂಡು ನೂತನ ವಿಜಯನಗರ ಜಿಲ್ಲೆಗೆ ರಾಜ್ಯ ಸರ್ಕಾರದಿಂದ ಅಂತಿಮ ಮುದ್ರೆ ಒತ್ತಿಸುವಲ್ಲಿ ಸಚಿವ ಆನಂದ್‌ಸಿಂಗ್‌ ಯಶಸ್ವಿಯಾಗಿದ್ದಾರೆ. ವಾರದಲ್ಲಿ ಎರಡು ಮೂರು ಬಾರಿ ಖಾತೆ ಬದಲಾವಣೆಯಾದರೂ, ಬೇಡವಾದ ಖಾತೆಗಳನ್ನು ನೀಡಿದರೂ ಮೌನ ವಹಿಸಿರುವ ಸಿಂಗ್‌, ವಿಜಯನಗರ ಜಿಲ್ಲೆ ರಚನೆಯಲ್ಲಿ ತನ್ನ ಚಾಣಕ್ಯ ಶಪಥವನ್ನು ಈಡೇರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಮೊದಲ ಸಚಿವ ಸಂಪುಟದಲ್ಲಿ ಆನಂದ್‌ಸಿಂಗ್‌  ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖಾತೆ ನೀಡಲಾಗಿತ್ತು. ಈ ಖಾತೆಯನ್ನು ತಿರಸ್ಕರಿಸಿದ್ದ ಸಿಂಗ್‌, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕೇವಲ ಎರಡನೇ ದಿನಗಳಲ್ಲಿ ಖಾತೆ ಬದಲಾಯಿಸಿ ಅರಣ್ಯ ಮತ್ತು ಜೀವಿಶಾಸ್ತ್ರಿ ಇಲಾಖೆ ಖಾತೆ ಪಡೆಯುವಲ್ಲಿ ಯಶಸ್ವಿಯಾದರು.

ಈ ಖಾತೆಯನ್ನು ನಿರ್ವಹಿಸುವಲ್ಲಿ ವರ್ಷ ಕಳೆಯುವುದರೊಳಗೆ ಜ.21ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಆನಂದ್‌ ಸಿಂಗ್‌ ಅವರ ಅರಣ್ಯ ಮತ್ತು ಜೀವಿಶಾಸ್ತ್ರ ಖಾತೆಯನ್ನು ವಾಪಸ್‌ ಪಡೆದು ಸಿಂಗ್‌ ಅವರಿಗೆ ಪ್ರವಾಸೋದ್ಯಮ ಖಾತೆ ನೀಡಲಾಯಿತು. ಈ ಹಿಂದೆಯೇ ಒಮ್ಮೆ ಪ್ರವಾಸೋದ್ಯಮ ಖಾತೆಯನ್ನು ನಿಭಾಯಿಸಿದ್ದ ಅನುಭವ ಅವರಿಗೆ ಇದೆ. ಮೇಲಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿ ಸಹ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವುದರಿಂದ ಹಂಪಿ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ಚಿಂತನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಖಾತೆ ದೊರೆತ ದಿನವೇ ತರಾತುರಿಯಲ್ಲಿ ಅಧಿ  ಕಾರ ವಹಿಸಿಕೊಂಡಿದ್ದರು.

ಆದರೆ ಈ ಖಾತೆ ದೊರೆತ ಕೇವಲ ನಾಲ್ಕು ದಿನದಲ್ಲಿ ಆನಂದ್‌ಸಿಂಗ್‌ ಅವರ ಖಾತೆ ಮತ್ತೂಮ್ಮೆ ಬದಲಾವಣೆಯಾಯಿತು. ನಂತರ ಸಣ್ಣ ಖಾತೆಗಳಾದ ಮೂಲಸೌಕರ್ಯ ಮತ್ತು ಹಜ್‌, ವಕ್ಫ್  ಖಾತೆಯನ್ನು ನೀಡಲಾಗಿದೆ. ಬೇಡವಾದ ಖಾತೆ ನೀಡಿದರೂ ಎಲ್ಲೂ ಅಸಮಾಧಾನ ವ್ಯಕ್ತಪಡಿಸಿದೆ ಮೌನ ವಹಿಸಿದ್ದ ಆನಂದ್‌ಸಿಂಗ್‌ ವಿಜಯನಗರ ಜಿಲ್ಲೆಯನ್ನು ಅಧಿಕೃತಗೊಳಿಸುವ ಬಹುದಿನಗಳ ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಗಿ ಬಸವಾದಿತ್ಯ ಶ್ರೀ ಆಯ್ಕೆ

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು

ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ವಧು-ವರರ ಮೇಲೆ ಹಲ್ಲೆ ನಡೆಸಿದ ಎಂಇಎಸ್ ಪುಂಡರು

Bidisha De Majumdar

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ 21 ವರ್ಷದ ಬೆಂಗಾಲಿ ನಟಿ

5theft

ಸ್ತ್ರೀಯರ ವೇಷದಲ್ಲಿ ಫೈನಾನ್ಸ್‌ನಲ್ಲಿ ಕಳವಿಗೆ ಯತ್ನ: ಸೈರನ್‌ ಶಬ್ದ ಕೇಳಿ ಆರೋಪಿಗಳು ಪರಾರಿ  

wheelchair romeo

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

4fraud

ಮೆಡಿಕಲ್‌ ಸೀಟ್‌ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ಷರ ದಾಸೋಹ ಬಿಸಿಯೂಟದಲ್ಲಿ ಹುಳು ಪತ್ತೆ: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

ಅಕ್ಷರ ದಾಸೋಹ ಬಿಸಿಯೂಟದಲ್ಲಿ ಹುಳು ಪತ್ತೆ: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

ballary1

ಜೋಳ ಖರೀದಿ ಅವ್ಯವಹಾರ ತನಿಖೆಗೆ ಸಮಿತಿ

ಬಿಎಸ್ ವೈ ಪಕ್ಷದ ದೊಡ್ಡ ಶಕ್ತಿ, ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ; ಸಚಿವ ರಾಮುಲು

ಬಿಎಸ್ ವೈ ಪಕ್ಷದ ದೊಡ್ಡ ಶಕ್ತಿ, ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ; ಸಚಿವ ರಾಮುಲು

huvinahadagali

ರೈತರ ಹೊಲಗಳಿಗೆ ಕಲುಷಿತ ನೀರು ತಡೆಗೆ ಮನವಿ

7

ಅದಿರು ರಫ್ತಿಗೆ ಅನುಮತಿ ಸಿಕ್ಕರೂ ಗಡಿ ರೇಖೆ ಅಡ್ಡಿ 

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

10

ಗಮನ ಸೆಳೆದ ಮಾವು ಪ್ರದರ್ಶನ-ಮಾರಾಟ ಮೇಳ

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!

7school

840ಕ್ಕೂ ಹೆಚ್ಚು ಮಕ್ಕಳಿಗೆ ಏಳೇ ಜನ ಶಿಕ್ಷಕರು!

9

ಅಭ್ಯರ್ಥಿ ಹುಕ್ಕೇರಿಗೆ ಶಿಕ್ಷಕರ ಕಾಳಜಿಯಿಲ್ಲ

umbrella

ಎಲ್ಲೆಲ್ಲೂ ಕೊಡೆ ಅಲಂಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.