17 ಜನ ನಮ್ಮ ಪಕ್ಷಕ್ಕೆ ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ, ಅವರ ಬಗ್ಗೆ ಗೌರವವಿದೆ: ಸವದಿ
Team Udayavani, Nov 29, 2020, 12:10 PM IST
ಬಳ್ಳಾರಿ: 17 ಜನ ಬಿಜೆಪಿ ಪಕ್ಷಕ್ಕೆ ಬಂದ ಕಾರಣ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಅವರ ಬಗ್ಗೆ ಗೌರವವಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡಬೇಕೋ, ಪುನರ್ ರಚನೆ ಮಾಡಬೇಕೋ ಎನ್ನುವುದು ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಕೆಲವೇ ದಿನಗಳಲ್ಲಿ ತಿಳಿಯಲಿದೆ. ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಕಾರ್ಯಸೂಚಿಗಳಿವೆ. ಯಾರಿಗೆ ಸಚಿವ ಸ್ಥಾನ ಕೊಡಬೇಕೆಂದು ಪಕ್ಷ ತೀರ್ಮಾನ ಮಾಡುತ್ತದೆ. ಸಿಎಂ ಯಡಿಯೂರಪ್ಪ ಫೈನಲ್ ಮಾಡುತ್ತಾರೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಅವರ ವೈಯಕ್ತಿಕ ವಿಚಾರ ಎಂದರು.
ಇದನ್ನೂ ಓದಿ:ಸಂಪುಟ ವಿಸ್ತರಣೆಗಾಗಿ ಇಂದು ದೆಹಲಿಯವರ ಜತೆ ಮಾತುಕತೆ: ಸಿಎಂ ಯಡಿಯೂರಪ್ಪ
ಬಳ್ಳಾರಿ ಜಿಲ್ಲೆಯ ವಿಭಜನೆಯಾಯ್ತು. ಬೆಳಗಾವಿ ವಿಭಜನೆ ಮಾಡಲು ತಾಂತ್ರಿಕ ತೊಂದರೆ ಇದೆ. ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಸವದಿ ಹೇಳಿದರು.
ಸಚಿವ ಆನಂದ್ ಸಿಂಗ್ ಮಾತನಾಡಿ, ವಿಜಯನಗರ ಜಿಲ್ಲೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಲಾಗುತ್ತದೆ. ಒಂದು ತಿಂಗಳ ಅವಧಿ ಇದೆ. ಇನ್ನೂ ನಾಲ್ಕೈದು ದಿನದಲ್ಲಿ ಕಾಲ್ ಮಾಡಲಾಗುತ್ತದೆ ಎಂದರು.
ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆ ಮಾಡಿದ್ದೇವೆ. ರಾಜಕೀಯ ಉದ್ದೇಶದಿಂದ ಮಾಡಿಲ್ಲ. ಪಶ್ಚಿಮ ತಾಲೂಕುಗಳ ಜನರ ಸಮಸ್ಯೆ ಕೇಳಿ, ಎಲ್ಲಾ ತಾಲೂಕುಗಳ ಅಭಿವೃದ್ಧಿ ಮಾಡುತ್ತೇವೆ ಎಂದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವ್ಯಾಪಾರಿಯಿಂದ ಹಣ ದೋಚಿದ ಪ್ರಕರಣ : ಹನೂರು ಪೊಲೀಸರಿಂದ 4 ಮಂದಿ ಆರೋಪಿಗಳ ಬಂಧನ
ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟು ಕೊಡೆವು : ಉದ್ಧವ್ ಠಾಕ್ರೆ ಹೇಳಿಕೆಗೆ BSY ಖಂಡನೆ
ಬೆಂಗಳೂರಿನಲ್ಲೂ ರೈತರ ಟ್ರ್ಯಾಕ್ಟರ್, ಬೈಕ್ ಪೆರೇಡ್: ಕುರುಬೂರು ಶಾಂತಕುಮಾರ್
ಸಿಡಿ ಬಗ್ಗೆ ನಾನೇನು ಹೇಳಿಲ್ಲ, ಡಿಕೆಶಿ ಹೇಳಿದ್ದನ್ನಷ್ಟೇ ಮತ್ತೆ ಹೇಳಿದೆ: ಯತ್ನಾಳ್
6 ವರ್ಷದೊಳಗಿನ ಮಕ್ಕಳ ಸರ್ವೇ ಕೈಗೊಳ್ಳಲು ಸೂಚನೆ