ಚುನಾವಣೆ ಬಂದಾಗಷೇ ಬಿಜೆಪಿಗೆ ರಾಮಮಂದಿರ ನೆನಪು

Team Udayavani, Oct 26, 2018, 4:25 PM IST

ಕೂಡ್ಲಿಗಿ: ಚುನಾವಣೆಗಳು ಬಂದಾಗಷ್ಟೇ ಬಿಜೆಪಿಯವರಿಗೆ ಹಿಂದುತ್ವ ಹಾಗೂ ರಾಮಮಂದಿರ ನೆನಪಾಗುತ್ತೆ. ಇಂತಹ ಬಿಜೆಪಿಯವರಿಂದ ದೇಶ ರಕ್ಷಣೆ ಮಾಡಲು ಸಾಧ್ಯವೇ. ಇಂತಹವರಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕರೆ ನೀಡಿದರು.

ಪಟ್ಟಣದ ಸಂತೆ ಮೈದಾನದಲ್ಲಿ ಬುಧವಾರ ರಾತ್ರಿ ಕೂಡ್ಲಿಗಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರನ್ನು ಗೆಲ್ಲಿಸಬೇಕು. ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಜನತೆ ತಿಳಿದುಕೊಳ್ಳಬೇಕೆಂದರು.

ಕೂಡ್ಲಿಗಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್‌ನಲ್ಲಿ ವ್ಯತ್ಯಾಸಗಳಿದ್ದವು. ಈಗ ಎಲ್ಲರೂ ಒಂದೇ ವೇದಿಕೆಯಲ್ಲಿ ಬಂದಿರುವುದ್ದರಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅತ್ಯಧಿಕ ಬಹುಮತ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಶ್ರೀರಾಮುಲು ಅವರು ರಾಜ್ಯದಲ್ಲಿ ಮಹದಾಯಿ, ಕಾವೇರಿಯ ವಿವಾದ ಸಮಸ್ಯೆ ಬಂದಾಗ ಎಲ್ಲಿಯೂ ಧ್ವನಿ ಎತ್ತಿಲ್ಲ. ಇಂತಹವರಿಂದ ಹೇಗೆ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದರು.

ಕಾಂಗ್ರೆಸ್‌ ಹಿರಿಯ ಮುಖಂಡ ಎಚ್‌. ಕೆ.ಪಾಟೀಲ್‌ ಮತನಾಡಿ, ವಿ.ಎಸ್‌.ಉಗ್ರಪ್ಪ ಅವರು ಈಗಾಗಲೇ ಕೂಡ್ಲಿಗಿ ಕ್ಷೇತ್ರದ ಜನತೆಗೆ ಗೆಲ್ಲುವ ಮುಂಚೆಯೇ ಸೇವೆ ಮಾಡಿದ್ದಾರೆ. ಕೂಡ್ಲಿಗಿ ತಾಲೂಕಿನ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಯೋಜನೆಯನ್ನು ಕೂಡ್ಲಿಗಿ, ಪಾವಗಡಕ್ಕೆ ತರಲು ಅವಿರತ ಶ್ರಮಿಸಿದ್ದಾರೆ. ನಾನು ನೀರಾವರಿ ಸಚಿವರಾಗಿದ್ದಾಗ ನನ್ನನ್ನು ನಿರಂತರವಾಗಿ ಸಂಪರ್ಕಿಸಿ ಬರಗಾಲದ ಪ್ರದೇಶವಾದ ಕೂಡ್ಲಿಗಿ, ಪಾವಗಡದ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದು ಈ ಕಾಮಗಾರಿ ಈಗ ಪ್ರಕ್ರಿಯೆಯಲ್ಲಿದೆ. ಚುನಾವಣೆಗೂ ಮುಂಚೆಯೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೂಡ್ಲಿಗಿ ತಾಲೂಕಿನ ಜನತೆಯನ್ನು ಫ್ಲೋರೈಡ್‌ ಮುಕ್ತ ನೀರು ಕುಡಿಯುವಂತೆ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಲೋಕೇಶ್‌ ನಾಯಕ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಾಂಗ್ರೆಸ್‌ಗೆ ಬರಮಾಡಿಕೊಂಡರು. ರಾಜ್ಯ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ, ಕೂಡ್ಲಿಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುಳಿಗಿ ವೀರೇಂದ್ರ, ಮಾಜಿ ಶಾಸಕರಾದ ಎನ್‌ .ಟಿ.ಬೊಮ್ಮಣ್ಣ, ಶಿರಾಜ್‌ ಷೇಕ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವಯೋಗಿ, ಕಾಂಗ್ರೆಸ್‌ ಮುಖಂಡರಾದ ಲೋಕೇಶ್‌ ನಾಯಕ, ಮಹಿಳಾ ಮುಖಂಡರಾದ ನಾಗಮಣಿ, ಗುಜ್ಜಲ ರಘು, ಕೆ.ಶಿವಪ್ಪ ನಾಯಕ, ತುಪ್ಪಕನಹಳ್ಳಿ ರಮೇಶ್‌, ಉದಯ ಜನ್ನು, ಸುರೇಶ್‌ ಹೆಗ್ಡೆ, ಬೋರಣ್ಣ, ದಿಬ್ಬದಹಳ್ಳಿ ಸಿದ್ದೇಶ್‌, ಸಯ್ಯದ್‌ ಶುಕುರ್‌, ಕೋಗಳಿ ಮಂಜುನಾಥ್‌, ನಾಗರಕಟ್ಟೆ ರಾಜಣ್ಣ, ಕಾಟೇರ್‌ ಹಾಲೇಶ್‌, ಮಂಜುನಾಥ್‌ ಮಯೂರ, ಗುಡೇಕೋಟೆ ನೌಷಾದ್‌, ಜಯರಾಂ ನಾಯಕ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾಳಿ: ಹತ್ತು ದೇವಸ್ಥಾನಗಳನ್ನು ಕಟ್ಟುವುದರ ಬದಲು ಒಂದು ಶಾಲೆ ನಿರ್ಮಿಸುವುದು ಶ್ರೇಷ್ಠ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ್‌ ಹೇಳಿದರು. ಭಾನುವಾರ ತಾಲೂಕಿನ...

  • ಬಳ್ಳಾರಿ: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು, ಇದನ್ನು ವಾಟರ್‌ಶೆಡ್‌ ಮೂಲಕ ಹೆಚ್ಚಿಸಲು 4.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು...

  • ಕಂಪ್ಲಿ: ಮುಂದಿನ ಮೂರು ವರ್ಷಗಳಲ್ಲಿ ಕಂಪ್ಲಿ ಕ್ಷೇತ್ರದ ಎರಡು ತಾಲೂಕುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರವನ್ನು ಮಾದರಿ...

  • ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ...

  • ಹೊನ್ನಾಳಿ: ಲಿಂ.ಒಡೆಯರ್‌ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಮತ್ತು ಲಿಂ.ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮದ ನಿಮಿತ್ತ...

ಹೊಸ ಸೇರ್ಪಡೆ