Udayavni Special

ಅಧಿಕಾರಿಗಳ ವಿರುದ್ಧ ಜಿಪಂ ಸದಸ್ಯರು ಗರಂ

•ಜಿಪಂ ಸದಸ್ಯರನ್ನು ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ•ಶಿಷ್ಟಾಚಾರ ಪಾಲಿಸುವಂತೆ ತಾಕೀತು

Team Udayavani, Jul 16, 2019, 11:07 AM IST

ballary-tdy-1..

ಬಳ್ಳಾರಿ: ಜಿಪಂ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮಾತನಾಡಿದರು.

ಬಳ್ಳಾರಿ: ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ವೇಳೆ ನಾಮಫಲಕಗಳಲ್ಲಿ ಶಿಷ್ಟಾಚಾರ ಪಾಲಿಸದ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ… ಕ್ರಿಯಾಯೋಜನೆಯಲ್ಲಿ ಬಳ್ಳಾರಿ ತಾಲೂಕನ್ನು ಕೈಬಿಟ್ಟಿದ್ದಕ್ಕೆ, ಪ್ರೌಢಶಾಲೆಗಳಿಗೆ ಕಳಪೆ ಸಾಮಗ್ರಿ ಪೂರೈಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು… ಒಂದೇ ಸಭೆಯಲ್ಲಿ ಭಾಗವಹಿಸಿದ ಪತಿ-ಪತ್ನಿಯರು…

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯ ಪ್ರಮುಖ ಹೈಲೈಟ್‌ಗಳಿವು. ಸಭೆ ಆರಂಭವಾಗಿದ್ದೇ ತಡ ಸೋಗಿ ಜಿಪಂ ಸದಸ್ಯ ವಿಶ್ವನಾಥ್‌ (ವಿಜಯಕುಮಾರ್‌) ಅವರು ಶಿಷ್ಟಾಚಾರ ಪಾಲಿಸದ ಹಡಗಲಿ ಇಒ ಸೋಮಶೇಖರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಡಗಲಿ ತಾಲೂಕು ಗ್ರಾಮ ಪಂಚಾಯಿತಿಯೊಂದರಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ವೇಳೆ ನಾಮಫಲಕಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕೈಬಿಟ್ಟು, ಶಿಷ್ಟಾಚಾರವನ್ನು ಉಲ್ಲಂಘಿಸಲಾಗುತ್ತಿದೆ. ಅಲ್ಲಿನ ಸಚಿವರು, ಶಾಸಕರು, ಗ್ರಾಪಂ ಸದಸ್ಯರು, ಅಧ್ಯಕ್ಷರು, ಕೆಲ ಗುತ್ತಿಗೆದಾರರ ಹೆಸರುಗಳನ್ನು ಸಹ ಹಾಕಲಾಗಿದೆ. ಆದರೆ, ಅಲ್ಲಿನ ಜಿಪಂ ಸದಸ್ಯರ ಹೆಸರನ್ನು ಮಾತ್ರ ಹಾಕಲ್ಲ. ಈ ಕುರಿತು ಕೇಳಿದರೆ ಇಒಗಳಿಂದ ಸಮರ್ಪಕ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಇಲಾಖೆಗಳಿಂದ ಸಿದ್ಧಪಡಿಸಲಾಗಿದ್ದ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಬಳ್ಳಾರಿ ತಾಲೂಕನ್ನು ಕೈಬಿಟ್ಟಿದ್ದಕ್ಕೆ ಸದಸ್ಯರಾದ ಅಲ್ಲಂ ಪ್ರಶಾಂತ್‌, ಎ.ಮಾನಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಳ್ಳಾರಿ ತಾಲೂಕಿಗೆ ಅನುದಾನವನ್ನು ಮೀಸಲಿಟ್ಟಿಲ್ಲ. ಬಳ್ಳಾರಿ ತಾಲೂಕು ಸಹ ಈ ಜಿಲ್ಲೆಯಲ್ಲೇ ಇದೆ ಎಂಬುದನ್ನು ಮರೆಯಬಾರದು ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು. ಕ್ರಿಯಾಯೋಜನೆ ರೂಪಿಸುವಾಗ ನಮ್ಮ ಗಮನಕ್ಕೆ ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ್‌ ಹೆಡೆ, ಜಿಲ್ಲೆಯ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿ ಈ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಅವರು ಜನಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ ಎಂದರು.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ 55 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಡೆಸ್ಕ್ ಉಪಕರಣಗಳನ್ನು ಖರೀದಿಸಿ ಪೂರೈಸಲು 1.23 ಕೋಟಿ ರೂ. ಹಣವನ್ನು ತೆಗೆದಿರಿಸಲಾಗಿದ್ದು, ಪೂರೈಕೆ ಮಾಡಲಾಗಿದೆ. ಕೆಲವೆಡೆ ಡೆಸ್ಕ್ಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ಕೆಲ ಸದಸ್ಯರು ಅಸಮಾಧಾನವನ್ನು ಹೊರಹಾಕಿದರು. ಇದಕ್ಕೆ ಮಧ್ಯಪ್ರವೇಶಿಸಿದ ಜಿಪಂ ಸಿಇಒ ಕೆ.ನಿತೀಶ್‌, ಇನ್ನು ಮುಂದೆ ಶಾಲಾ ಡೆಸ್ಕ್ಗಳ ಖರೀದಿಗೆ ಡಿಐಸಿಯಿಂದ ಮತ್ತು ಕಂಪ್ಯೂಟರ್‌ ಉಪಕರಣ ಖರೀದಿಗೆ ಎನ್‌ಐಸಿಯು ಸಮಿತಿಗಳನ್ನು ರಚಿಸಿ ಆ ಮೂಲಕ ಟೆಂಡರ್‌ ಕರೆಯಲಾಗುವುದು ಎಂದರು. ಜನಪ್ರತಿನಿಗಳು ಕೇಳಿದಲ್ಲಿ ವಯಸ್ಕರ ಶಿಕ್ಷಣದ ಮಾಹಿತಿ ನೀಡಬೇಕು ಎಂದು ಅಕಾರಿಗಳಿಗೆ ಸಂಸದರು ಸೂಚಿಸಿದರು.

ಕ್ರೀಡಾ ಇಲಾಖೆಗೆ ಲಕ್ಷಾಂತರ ರೂ. ಪೋಲು: ಯುವಜನ ಮತ್ತು ಕ್ರೀಡಾ ಇಲಾಖೆ ಬಗ್ಗೆ ಸದಸ್ಯ ಅಲ್ಲಂ ಪ್ರಶಾಂತ್‌ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ವಸತಿ ನಿಲಯದಲ್ಲಿನ ಕ್ರೀಡಾ ವಿದ್ಯಾರ್ಥಿಗಳಿಗೆಂದು ಪ್ರತಿವರ್ಷ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ಅದರಿಂದ ಫಲಿತಾಂಶ ದೊರೆಯುತ್ತಿಲ್ಲ. ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಬಂದ ಕ್ರೀಡಾಪಟುಗಳು ಪ್ರಮಾಣ ಪತ್ರದ ಕೊರತೆಯಿಂದಾಗಿ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿಲ್ಲ. ಜತೆಗೆ ಇಲಾಖೆಯಿಂದಲೂ ನೀಡಲಾಗುವ ಟಿಎ, ಡಿಎ ಕ್ರೀಡೆಗಳಲ್ಲಿ ಭಾಗವಹಿಸಿದ ನಂತರ ಅದಕ್ಕೆ ಸಂಬಂಧಿಸಿದ ಬಿಲ್ಗಳನ್ನು ಸಲ್ಲಿಸಿದ ಬಳಿಕ ನೀಡಲಾಗುತ್ತದೆ. ಇದರಿಂದ ಬಹುತೇಕರು ಹಣದ ಕೊರತೆಯಿಂದಾಗಿ ರಾಜ್ಯಮಟ್ಟದ ಕ್ರೀಡೆಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಹೋಗುವಾಗಲೇ ನೀಡಿದರೆ ಅವರಿಗೆ ಅನುಕೂಲವಾಗಲಿದೆ ಎಂದು ಕೋರಿದರು.

ಬಳಿಕ ವಾರ್ಷಿಕ ಕ್ರಿಯಾಯೋಜನೆ ಕುರಿತು ಸುದೀರ್ಘ‌ ಚರ್ಚೆ ಈ ಸಂದರ್ಭದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಸದ ವೈ. ದೇವಿಂದ್ರಪ್ಪ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಒಂದೇ ಸಭೆಯಲ್ಲಿ ಪತಿ-ಪತ್ನಿಯರು: ಬಳ್ಳಾರಿ ನೂತನ ಸಂಸದ ವೈ. ದೇವೇಂದ್ರಪ್ಪ, ದಂಪತಿ ಸಮೇತ ಮೊದಲ ಬಾರಿಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದರು. ಹರಪನಹಳ್ಳಿ ತಾಲೂಕು ಬಳ್ಳಾರಿಗೆ ಸೇರಿದ ಬಳಿಕ ನಡೆಯಬೇಕಿದ್ದ ಜಿಪಂ ಸಾಮಾನ್ಯ ಸಭೆ ಕೋರಂ ಕೊರತೆಯಿಂದಾಗಿ ಎರಡು ಬಾರಿ ರದ್ದಾಗಿತ್ತು. ಮೂರನೇ ಬಾರಿಗೆ ನಡೆದಿದ್ದು, ನೂತನ ಸಂಸದ ದೇವೇಂದ್ರಪ್ಪ ಮತ್ತವರ ಪತ್ನಿ ಅರಸಿಕೆರೆ ಕ್ಷೇತ್ರದ ಜಿಪಂ ಸದಸ್ಯೆ ಸುಶೀಲಮ್ಮ ದೇವೇಂದ್ರಪ್ಪನವರು ಒಂದೇ ಕಾರಲ್ಲಿ ಬಂದು ಸಭೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. 1990ರ ದಶಕದಲ್ಲಿ ಬಳ್ಳಾರಿ ಜಿಪಂ ಉಪಾಧ್ಯಕ್ಷರಾಗಿದ್ದ ದೇವೇಂದ್ರಪ್ಪ, ಇದೀಗ ಮೂರು ದಶಕಗಳ ಬಳಿಕ ಸಂಸದರಾಗಿ ಆಯ್ಕೆಯಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

RBI

RBI ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕೋವಿಡ್ ಸೋಂಕು ದೃಢ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 84 ಜನರಿಗೆ ಕೋವಿಡ್ ಸೋಂಕು ದೃಢ! 111 ಸೋಂಕಿತರು ಗುಣಮುಖ

mumbai

ಮುಂಬೈ – ರಾಜಸ್ಥಾನ್ ಕಾಳಗ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಲಾರ್ಡ್ ಬಳಗ

RCB

ಗಾಯಕ್ವಾಡ್ ಮನಮೋಹಕ ಅರ್ಧಶತಕ: ಚೆನ್ನೈ ಎದುರು ಮುಗ್ಗರಿಸಿದ ಆರ್ ಸಿಬಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ballary-tdy-1

ಮಸಣ ಕಾರ್ಮಿಕರನ್ನು ನೌಕರರೆಂದು ಪರಿಗಣಿಸಿ

Ballary-tdy-1

ಪ್ರಸ್ತುತ ದೇಶದ ರಾಜಕಾರಣ ಅಸ್ತವ್ಯಸ್ತ

Ballary-tdy-1

ಕುಡಿಯುವ ನೀರು ಪೂರೈಸಲು ಆಗ್ರಹ

Ballary-tdy-2

ಪೊಲೀಸರ ಕಾಯಕ ನಿಷ್ಠೆ ಶ್ಲಾಘನೀಯ

BALLARY-TDY-1

9-10ನೇ ತರಗತಿವರೆಗೂ ಆರ್‌ಟಿಇ ಕಾಯ್ದೆ ವಿಸ್ತರಿಸಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮ : ಆರ್. ಅಶೋಕ್

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

ಅಸ್ವಸ್ಥಗೊಂಡ ಪರಿಚಯಸ್ಥ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಯುವಕ! ಯುವತಿ ಸಾವು

Mumbai-tdy-1

ಧಾರ್ಮಿಕ ಆಚರಣೆಗಳಿಗೂ ಆದ್ಯತೆ: ಸಂತೋಷ್‌ ಶೆಟ್ಟಿ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಬಂಗಾಳಿ ಚಿತ್ರರಂಗದ ಹಿರಿಯ ನಟ ಸೌಮಿತ್ರ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

RBI

RBI ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕೋವಿಡ್ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.