ಬೇಲೂರಿನಲ್ಲಿ ಬೀದಿ ನಾಯಿ ಹಾವಳಿಗೆ ಬೇಸತ್ತ ಜನತೆ

ರಸ್ತೆಯಲ್ಲಿ ವಾಹನ ಸವಾರರಿಗೆ ಅಡ್ಡಿಯುಂಟು ಮಾಡುವ ನಾಯಿಗಳು

Team Udayavani, Jul 11, 2019, 3:26 PM IST

ಬೇಲೂರು ಪಟ್ಟಣದಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳು

ಡಿ.ಬಿ.ಮೋಹನ್‌ಕುಮಾರ್‌
ಬೇಲೂರು:
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಮುಖ್ಯ ರಸ್ತೆ, ಬಸ್‌ ನಿಲ್ದಾಣ, ದೇವಾಲಯ ಹಾಗೂ ವಾರ್ಡ್‌ಗಳು ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದು ಇದರಿಂದ ವಾಹನ ಚಾಲಕರಿಗೆ ರಸ್ತೆ ಬದಿ ಓಡಾಡುವವರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಪಟ್ಟಣದಲ್ಲಿ ಇತ್ತೀಚೆಗೆ ನಾಯಿಗಳ ಸಂಖ್ಯೆ ಹೆಚ್ಚಾಗಿ ಎಲ್ಲೆಂದರಲ್ಲಿ ಇವುಗಳ ಹಿಂಡು ನಡು ರಸ್ತೆಯಲ್ಲಿ ಓಡಾಡುತ್ತಿರುವುದರಿಂದ ವಾಹನ ಸಾವಾರರು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ನಾಯಿಗಳಿಂದ ಅಪಘಾತ: ನಾಯಿಗಳ ಓಡಾಟ ದಿಂದಾಗಿ ವಾಹನಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ದಿಢೀರನೆ ಸವಾರರು ಬೀಳು ವುದು ಅಥವಾ ರಸ್ತೆ ಬದಿಗೆ ಹೋಗಿ ಸ್ಕಿಡ್‌ ಆಗು ವುದು ಮಾಮೂಲಾಗಿದೆ. ಅಲ್ಲದೇ ಪದಚಾರಿ ರಸ್ತೆ ಯಲ್ಲಿ ಓಡಾಡುವ ವೃದ್ಧರು ಮಹಿಳೆಯರು ಹಾಗೂ ಮಕ್ಕಳು ರಸ್ತೆಯಲ್ಲಿ ನಡೆಯಲಾಗದೇ ಹರ ಸಾಹಸ ಪಡುವಂತಾಗಿದೆ. ಕೂಡಲೇ ಈ ಬಗ್ಗೆ ಪುರ ಸಭೆಯವರು ನಾಯಿಗಳನ್ನು ನಿಯಂತ್ರಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಕ್ರಮ ಮಾಂಸದ ಅಂಗಡಿಗಳ ಹಾವಳಿ: ಗ್ರಾಮೀಣ ಪ್ರದೇಶದಿಂದ ಆಹಾರ ಅರಿಸಿ ಬರುವ ನಾಯಿಗಳು ಪಟ್ಟಣದ ಹೊರ ವಲಯದ ರಾಯಪುರ ಗ್ರಾಮದ ಪಕ್ಕ ತಲೆ ಎತ್ತಿರುವ ಅಕ್ರಮ ಹಂದಿ ಮಾಂಸದ ಅಂಗಡಿಗಳು ಮತ್ತು ಪಟ್ಟಣದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗೋಮಾಂಸದ ತ್ಯಾಜ್ಯ ತಿನ್ನಲು ನೂರಾರು ನಾಯಿಗಳು ಪಟ್ಟಣದಲ್ಲಿ ಬೀಡು ಬಿಟ್ಟಿದ್ದು ಕೂಡಲೇ ಸಂಭಂದಪಟ್ಟ ಇಲಾಖೆಯವರು ಅಕ್ರಮವಾಗಿ ನಡೆಯುತ್ತಿರುವ ಹಂದಿ ಮತ್ತು ಗೋಮಾಂಸದ ಅಂಗಡಿ ಬಂದ್‌ ಮಾಡಿ ನಾಯಿ ಹಾವಳಿ ತಪ್ಪಿಸ ಬಹುದಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ