ಹುಲಿಕುಂಟಿ ಮಠಕ್ಕಿದೆ ಪ್ರಾಚೀನ ಪರಂಪರೆ

ಸುತ್ತಲಿನ ಪ್ರದೇಶದಲ್ಲಿವೆ ಔಷಧೀಯ ಸಸ್ಯಗಳು ಅನೇಕ ಶರಣರು ತಪಸ್ಸು ಮಾಡಿದ ಸ್ಥಳ

Team Udayavani, Oct 19, 2019, 2:57 PM IST

„ಜಯರಾಜ ದಾಬಶೆಟ್ಟಿ
ಭಾಲ್ಕಿ:
ಖಟಕ ಚಿಂಚೋಳಿ ಗ್ರಾಮದ ಹೊರ ವಲಯದಲ್ಲಿರುವ ಹುಲಿಕುಂಟಿ ಶ್ರೀ ಶಾಂತಲಿಂಗೇಶ್ವರ ಮಠವು ಐತಿಹಾಸಿಕ ಪರಂಪರೆಯುಳ್ಳ ಮಠವಾಗಿದೆ. ಮಠದ ಸುತ್ತಲಿನ ಪರಿಸದರಲ್ಲಿ ಗುಡ್ಡಗಾಡು ಪ್ರದೇಶವಿದ್ದು ಅಲ್ಲಿ ಅನೇಕ ಆಯುರ್ವೇದ ಔಷಧೀಯ ಮರಗಳಿವೆ.

ಸುಮಾರು 15ನೇ ಶತಮಾನದಲ್ಲಿ ಖಟಕಚಿಂಚೋಳಿಯಲ್ಲಿ ಸುಮಾರು ಐದು ಮಠಗಳನ್ನು ಸ್ಥಾಪಿಸಲಾಗಿತ್ತು ಎನ್ನುವ ಪ್ರತೀತಿ ಇದೆ. ಅವುಗಳಲ್ಲಿ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ಅತ್ಯಂತ ಪ್ರಸಿದ್ಧಿ ಪಡೆದಿದೆ. ಇವತ್ತಿಗೂ ಖಟಕಚಿಂಚೋಳಿಯಲ್ಲಿರುವ ಹುಗ್ಗೆಳ್ಳಿ ಹಿರೇಮಠ, ಚೌಕಿ ಮಠ, ಕೋರಿಕಾಂತ ಮಠ, ಪರ್ವತ ಮಠಗಳಲ್ಲಿ ಗ್ರಾಮದಿಂದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಹುಲಿಕುಂಟಿಯ ಶ್ರೀ ಶಾಂತಲಿಂಗೇಶ್ವರ ಮಠವು ವಿಶೇಷತೆ ಹೊಂದಿದೆ.

ಹುಲಿಕುಂಟಿ ಮಠದಲ್ಲಿ ಸ್ಥಾಪಿಸಲಾದ ಶ್ರೀ ಶಾಂತಲಿಂಗೇಶ್ವರ ದೇವಸ್ಥಾನದ ಸುತ್ತಲೂ ಗುಡ್ಡಗಾಡು ಪ್ರದೇಶವಿದೆ. ಅದಲ್ಲದೆ ಅಲ್ಲಿ ಅನೇಕ ಆಯುರ್ವೇದ ಗಿಡಗಳಿವೆ. ಇವುಗಳಿಂದ ಸುಮಾರು ರೋಗಳು ವಾಸಿಯಾಗಿರುವ ಉದಾಹರಣೆ ಇವೆ. ವಿಶೇಷವಾಗಿ ಪಾರ್ಶ್ವವಾಯು ಸೇರಿದಂತೆ, ಹಲವಾರು ರೋಗಗಳಿಗೆ ತುತ್ತಾದ ರೋಗಿಗಳು, ಈ ಮಠದಲ್ಲಿ ವಾಸವಾಗಿ, ಇಲ್ಲಿಯ ಗಿಡಮೂಲಿಕೆಗಳನ್ನು ಸೇವಿಸಿ ರೋಗ ವಾಸಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಮಠದ ಪಕ್ಕದಲ್ಲಿ ವಿಶಾಲವಾದ ಕೆರೆ ಮತ್ತು ತುಪ್ಪದ ಬಾವಿ ಎಂದೇ ಪ್ರಸಿದ್ಧಿಯಾದ ಬಾವಿ ಇದೆ.

ಈ ಪ್ರದೆಶದಲ್ಲಿ ಈ ಹಿಂದೆ ಅನೇಕ ಕಾಡು ಪ್ರಾಣಿಗಳಾದ ಜಿಂಕೆ, ಚಿರತೆ, ಹುಲಿ, ಸಿಂಹ ಮೂದಲಾದ ಪ್ರಾಣಿಗಳು ವಾಸವಾಗಿದ್ದವು. ಅದಲ್ಲದೆ ಜೀವಂತ ಐಕ್ಯವಾದ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ತಮ್ಮ ಮಠವನ್ನು ಕಾಯಲು ಹುಲಿಯನ್ನೇ ದ್ವಾರ ಪಾಲಕನಾಗಿ ಇಟ್ಟಿದ್ದರು. ಹೀಗಾಗಿ ಈ ಮಠಕ್ಕೆ ಹುಲಿಕುಂಟಿ ಯೆಂಬ ಹೆಸರು ಬಂತು ಎನ್ನಲಾಗುತ್ತಿದೆ.

ಅನೇಕ ಶರಣರು ತಪಸ್ಸು ಮಾಡಿ ಹೋಗಿರುವ ಜಾಗ ಇದಾಗಿದೆ. ಇಲ್ಲಿವರೆಗೆ ಒಟ್ಟು 9 ಪೂಜ್ಯರು ಈ ಮಠದ ಪೀಠಾಧ್ಯಕ್ಷರಾಗಿದ್ದ ಬಗ್ಗೆ ಮಾಹಿತಿ ಇದೆ. ಇವರಲ್ಲಿ ಪ್ರಥಮ ಪೀಠಾ ಪತಿ ಶ್ರೀ ಶಾಂತಲಿಗೆಶ್ವರ ಶಿವಯೋಗಿಗಳು, ಶ್ರೀ ಶಾಂತ ಬಸವ ಶಿವಾಚಾರ್ಯರು, ಶ್ರೀ ರುದ್ರ ಬಸವ ಸ್ವಾಮಿಗಳು, ಶ್ರೀ ಕರಬಸಯ್ನಾ ಪೂಜ್ಯರು ಮಠದ ಉತ್ತರಾಧಿಕಾರಿಗಳು ಆಗಿದ್ದು. ಅದಲ್ಲದೆ ಇದೀಗ ಈ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವಾನಂದ ಸ್ವಾಮಿಗಳು ಹುಲಸೂರು ಮತ್ತು ಹುಲಿಕುಂಠಿಯ ಎರಡು ಮಠಗಳಿಗೂ ಪೀಠಾಧಿ ಪತಿಗಳಾಗಿ ಕಾರ್ಯ ನಿರ್ವಹಿಸುತ್ತಲಿದ್ದಾರೆ.

ಪ್ರಾಚೀನ ಶರಣರಾದ ಅಲ್ಲಮ ಪ್ರಭುಗಳು, ಶ್ರೀ ರೇವಣಸಿದ್ದೇಶ್ವರರು, ಶ್ರೀ ಮಾಣಿಕ ಪ್ರಭುಗಳು, ನಾವದಗಿಯ ಶ್ರೀ ರೇವಪ್ಪಯ್ನಾ ಶಿವಶರಣರು ತಪಸ್ಸು ಮಾಡಿದ ಪುಣ್ಯ ಭೂಮಿ ಇದಾಗಿದೆ. ಹುಲಿಕುಂಠಿ ಮಠದ ಶ್ರೀ ಶಾಂತಲಿಂಗೇಶ್ವರ ದೇವರು, ನಾಡಿನ ಹಲವಾರು ಮನೆತನಗಳ ಮನೆ ದೇವರಾಗಿದ್ದಾರೆ. ಹೀಗಾಗಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಿಂದ ಭಕ್ತಾದಿಗಳು ಈ ಮಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವರು.

ಇಲ್ಲಿಯ ಅರಣ್ಯ ಪ್ರದೇಶದ ರಕ್ಷಣೆ ಇಲ್ಲದ ಕಾರಣ ಇಲ್ಲಿಯ ಹಲವಾರು ಗಿಡ ಮರಗಳನ್ನು ಕಡಿದು, ಆಯುರ್ವೇದ ಮರಗಳ ಮಾರಣ ಹೋಮ ನಡೆಯುತ್ತಿದೆ. ಕಾರಣ ಸರ್ಕಾರ ಇತ್ತ ಗಮನ ಹರಿಸಿ ಇಲ್ಲಿಯ ಮಣ್ಣು ಮತ್ತು ಗಿಡಗಳ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಭಕ್ತಾದಿಗಳ ಆಶಯವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ