ನೀರಿಲ್ಲದೆ ಭಣಗುಟ್ಟುತ್ತಿವೆ ಜೋಡಿ ಕೆರೆ

Team Udayavani, Nov 11, 2019, 5:17 PM IST

11-November-21

„ಎಚ್‌.ಬಿ. ನಿರಂಜನ ಮೂರ್ತಿ
ಭರಮಸಾಗರ:
ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದರೆ, ಐತಿಹಾಸಿಕ ದೊಡ್ಡಕೆರೆ ಮತ್ತು ಚಿಕ್ಕಕೆರೆ ಎಂದೇ ಖ್ಯಾತಿ ಪಡೆದ ಜೋಡಿ ಕೆರೆಗಳಿಗೆ ಇದುವರೆಗೆ ಮಳೆ ನೀರು ಹರಿದು ಬಂದಿಲ್ಲ. ಇದರಿಂದ ಎರಡು ಕೆರೆಗಳು ಭಣಗುಟ್ಟುತ್ತಿವೆ. 2011ರಲ್ಲಿ ಸಮೃದ್ಧ ಮಳೆಯಾಗಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬಳಿಕ ಕೆರೆಯ ಕೋಡಿ ಎತ್ತರವನ್ನು ಒಂದುವರೆ ಅಡಿ ಹೆಚ್ಚಿಸಲಾಯಿತು. ಆ ಬಳಿಕ ಎಂಟು ವರ್ಷಗಳು ಕಳೆದರೂ ಕೆರೆಗೆ ನೀರು ಬಂದಿಲ್ಲ. ಈ ವರ್ಷದ ದಾಖಲೆ ಮಳೆಯಾದರೂ ಕೆರೆಗೆ ನೀರು ಬಾರದೆ ಇರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.

ಹಲವು ಐತಿಹ್ಯಗಳ ಗಣಿ ಆಗಿರುವ ಇಲ್ಲಿನ ದೊಡ್ಡಕೆರೆ ಮತ್ತು ಚಿಕ್ಕ ಕೆರೆಗಳು ಪ್ರಾಕೃತಿಕ ಸೊಬಗಿನಿಂದ ಕಣ್ಮನ ಸೆಳೆಯಬೇಕಾಗಿತ್ತು. ಆದರೆ ಬರೀ ಜಾಲಿ ಗಿಡಗಳ ಪ್ರದೇಶವಾಗಿ ಮಾರ್ಪಟ್ಟಿದೆ. ಕೆರೆ ಪುನರ್‌ ನಿರ್ಮಾಣ ಮತ್ತು ಸಂರಕ್ಷಣೆ ಯೋಜನೆಯಡಿ ಕೆರೆ ಸುತ್ತ ಟ್ರಂಚ್‌ ನಿರ್ಮಾಣ ಮತ್ತು ಸುಮಾರು 10 ಅಡಿ ಎತ್ತರದವರೆಗೆ ಸುತ್ತ ಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಳೆದ 8-9 ವರ್ಷಗಳಲ್ಲಿ ಉತ್ತಮ ಮಳೆಯಿಲ್ಲದೆ ಕೆರೆಗಳು ಖಾಲಿಯಾಗಿ ಅಂತರ್ಜಲ ಪಾತಾಳ ತಲುಪಿದೆ. ಇದರಿಂದಾಗಿ ಅಡಿಕೆ, ಬಾಳೆ, ತೆಂಗು ತೋಟಗಳ ಬೆಳೆಗಾರರು ಟ್ಯಾಂಕರ್‌ ನೀರು ಪೂರೈಸಿ ತೋಟಗಳನ್ನು ಉಳಿಸುವ ಭಗೀರಥ ಸಾಹಸ ಮಾಡಿ ನಷ್ಟ ಎದುರಿಸಿದ್ದರು.

ಟ್ಯಾಂಕರ್‌ ನೀರು ಒದಗಿಸಲು ಆಗದೆ ತೋಟಗಳನ್ನು ಬರದ ಛಾಯೆಯಿಂದ ರಕ್ಷಿಸಿಕೊಳ್ಳಲಾಗದೆ ಬೆಳೆಗಾರು ಅಸಹಾಯಕರಾಗಿದ್ದರು. ಇತ್ತ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿ ಗ್ರಾಪಂಗಳು ಟ್ಯಾಂಕರ್‌ ಗಳ ಮೂಲಕ ನೀರು ಪೂರೈಕೆ ಮಾಡಿ ಜನ ಮತ್ತು ಜಾನುವಾರುಗಳನ್ನು ಕಾಪಾಡಿದ್ದವು. ಈ ಬಾರಿ ಸುರಿದ ಮಳೆ ಎರಡು ಕೆರೆಗಳನ್ನು ತುಂಬಿಸದೇ ಇರುವುದು ಈ ಭಾಗದ ಜನರನ್ನು ಆತಂಕಕ್ಕೆ ತಳ್ಳಿದೆ.

ಭರಮಸಾಗರ ಹೋಬಳಿಯಲ್ಲಿ ಜೂನ್‌-67 ಮಿಮೀ, ಜುಲೈ-74, ಆಗಸ್ಟ್‌-133, ಸೆಪ್ಟಂಬರ್‌-166, ಅಕ್ಟೋಬರ್‌-149 ಮಿಮೀ ಮಳೆಯಾಗಿದೆ. ಒಟ್ಟಾರೆ ಐದು ತಿಂಗಳಲ್ಲಿ ಆಗಬೇಕಾದ ವಾಡಿಕೆ ಮಳೆ 429 ಮಿಲಿ ಮೀಟರ್‌. ಇದುವರೆಗೆ 585 ಮಿಮೀ ಮಳೆ ಸುರಿದಿದೆ.

ಗುಡಿನಾಯಕನಹಳ್ಳಿ ಎಂದು ಕರೆಯುತ್ತಿದ್ದ ಈಗಿನ ಗ್ರಾಮದ ಬಳಿ ಕ್ರಿಶ 1695 ರಲ್ಲಿ ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕ ಎರಡು ಜೋಡಿ ಕೆರೆಗಳನ್ನು ಕಟ್ಟಿಸಿದ ಕಾರಣ ಗ್ರಾಮಕ್ಕೆ “ಭರಮಸಾಗರ’ ಎಂಬ ಹೆಸರು ಬಂದಿದೆ. ದೊಡ್ಡಕೆರೆ ಅಂಗಳದಲ್ಲಿ ಬ್ರಿಟಿಷರ ಸೇನಾ ತುಕಡಿಗಳು ಈ ಮಾರ್ಗದಲ್ಲಿ ಸಾಗುವ ವೇಳೆ ವಿಶ್ರಾಂತಿ ಪಡೆದು ಸಾಗುತ್ತಿದ್ದರಿಂದ ಕೆರೆಯಂಗಳದ ಮೈದಾನವನ್ನು “ಲಷ್ಕರ್‌ ಮೈದಾನ’ ಎಂದು ಕರೆಯುತ್ತಿದ್ದರು.

230 ಎಕರೆ ವಿಸ್ತಾರದ ದೊಡ್ಡಕೆರೆ 800 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ಒಟ್ಟಾರೆ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ಅಬ್ಬರಿಸಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ತಾಲೂಕಿನ ಭರಮಸಾಗರದ ಕೆರೆ-ಕಟ್ಟೆಗಳು ತುಂಬುತ್ತವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.