ರಾಗಿ ಬೆಳೆ ಖರ್ಚಿಗಿಂತ ಕೊಯ್ಲು ವೆಚ್ಚ ಜಾಸ್ತಿ !

ಮಳೆ ಹಾವಳಿ ಮಧ್ಯೆ ಅಳಿದುಳಿದ ರಾಗಿ ಫಸಲು ಕೊಯ್ಲಿಗೆ ಬೆಳೆಗಾರರು ಹೈರಾಣ

Team Udayavani, Nov 20, 2019, 4:13 PM IST

„ಎಚ್‌.ಬಿ. ನಿರಂಜನ ಮೂರ್ತಿ

ಭರಮಸಾಗರ: ಕಳೆದ ತಿಂಗಳು ಎಡೆಬಿಡದೆ ಸುರಿದ ಮಳೆಯಿಂದ ತೆನೆಗಟ್ಟಿದ ರಾಗಿ ಫಸಲಿಗೆ ಕಂಟಕ ಎದುರಾಗಿತ್ತು. ಇದೀಗ ಕಟಾವಿಗೆ ಬಂದಿರುವ ರಾಗಿ ಕೊಯ್ಲಿಗೆ ರೈತರಿಗೆ ದುಬಾರಿ ಕೂಲಿ ದರದ ಸಮಸ್ಯೆ ಎದುರಾಗಿದೆ.

ಚಿತ್ರದುರ್ಗ ತಾಲೂಕಿನಲ್ಲಿ ರಾಗಿ ಬಿತ್ತನೆ ಪ್ರದೇಶದ ಹೋಬಳಿವಾರು ವಿವರ ಇಂತಿದೆ. ಕಸಬಾ-1650 ಹೆಕ್ಟೇರ್‌, ಭರಮಸಾಗರ- 1260 ಹೆಕ್ಟೇರ್‌, ಹಿರೇಗುಂಟನೂರು- 620 ಹೆಕ್ಟೇರ್‌, ತುರುವನೂರು-1025 ಹೆಕ್ಟೇರ್‌ ಸೇರಿದಂತೆ 4555 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ.

ಸಿರಿಧಾನ್ಯ ಬೆಳೆಯಾಗಿರುವ ರಾಗಿಯನ್ನು ಕಳೆದ ವರ್ಷ ಸರ್ಕಾರ ಬೆಂಬಲ ಬೆಲೆಯಡಿ ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿತ್ತು. ಒಂದು ಎಕರೆ ರಾಗಿ ಫಸಲು ಕೊಯ್ಲಿಗೆ 8 ರಿಂದ 10 ಸಾವಿರ ರೂ.ಗಳನ್ನು ಗುತ್ತಿಗೆ ನೀಡಿ ಕೊಯ್ಲು ಮಾಡಿಸಬೇಕು. ಇಲ್ಲವೇ ಬೆಳಿಗ್ಗೆ 10 ಗಂಟೆಗೆ ಬಂದು ಸಂಜೆ 5ಕ್ಕೆ ಕೆಲಸ ಮುಗಿಸುವ ಕೂಲಿಕಾರರಿಗೆ 400 ರೂ. ನೀಡಬೇಕು. ಹೀಗಾಗಿ ಹಲವು ರೈತರು ದುಬಾರಿ ದರದ ರಾಗಿ ಕೊಯ್ಲಿನ ಸಮಸ್ಯೆಯಿಂದ ರಾಗಿ ಬಿತ್ತನೆಯಿಂದ ಹಿಂದೆ ಸರಿದಿದ್ದೂ ಇದೆ. ಪ್ರಸಕ್ತ ವರ್ಷ ಮಳೆ ತಡವಾಗಿ ಶುರುವಾಯಿತು. ಇದರಿಂದ ಮೆಕ್ಕೆಜೋಳ ಬಿತ್ತನೆ ಅವಧಿ ಮುಗಿದು ಕೊನೆಯ ಆಟ ಎಂಬಂತೆ ರಾಗಿ ಬಿತ್ತನೆ ಬಿಟ್ಟರೆ ಬೇರೆ ಬೆಳೆಗಳನ್ನು ಬೆಳೆಯಲು ಅವಕಾಶವಿಲ್ಲ.

ಹಾಗಾಗಿ ಅನಿವಾರ್ಯವಾಗಿ ರೈತರು ರಾಗಿ ಬಿತ್ತನೆ ಕಡೆ ಮುಖ ಮಾಡಿದ್ದರು. ರಾಗಿ ಬಿತ್ತನೆ ಪ್ರದೇಶ ಹೆಚ್ಚು: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರಾಗಿ ಬಿತ್ತನೆ ಪ್ರದೇಶ ಹೆಚ್ಚಿದೆ. ಎಕರೆಗೆ 15 ರಿಂದ 20 ಸಾವಿರ ರೂ.ಗಳನ್ನು ಖರ್ಚು ಮಾಡಿ ರಾಗಿ ಬೆಳೆದಿರುವ ರೈತ, ಇದೀಗ ಅದರ ಅರ್ಧದಷ್ಟು ಹಣವನ್ನು ಕೊಯ್ಲಿಗೆ ವ್ಯಯಿಸಬೇಕಿದೆ. ಈ ನಡುವೆ ಮಳೆಯಿಂದ ತೆನೆಗಟ್ಟಿದ ರಾಗಿ ಹೊಲಗಳಲ್ಲೇ ಉದುರಿದರೆ ಹುಲ್ಲು ನೆಲಕ್ಕೆ ಬಿದ್ದು ಹಾಳಾಗುತ್ತದೆ. ಈ ನಡುವೆ ರಾಗಿ ಹುಲ್ಲು ಮತ್ತು ಕಾಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೂಲಿಕಾರರು ಮತ್ತು ದುಬಾರಿ ಗುತ್ತಿಗೆ ದರಕ್ಕೆ ಬೆಳೆಗಾರರು ಹೈರಾಣಾಗಿದ್ದಾರೆ.

ಕೃಷಿ ಇಲಾಖೆ ಮೂಲಕ ಒದಗಿಸಲಾಗಿರುವ ಯಂತ್ರಗಳ ಮೂಲಕ ಬಿದ್ದಿರುವ ರಾಗಿ ಬೆಳೆ ಕಟಾವಿಗೆ ಮುಂದಾದರೆ ಕೆಲಸ ಪರಿಪೂರ್ಣವಾಗದು ಎಂಬ ಹಿನ್ನೆಲೆಯಲ್ಲಿ ಆ ಯಂತ್ರಗಳ ಕಡೆ ರೈತರು ತಿರುಗಿಯೂ ನೋಡುತ್ತಿಲ್ಲ. ಕುಟುಂಬಸ್ಥರೇ ಸೇರಿ ಆದಷ್ಟು ರಾಗಿ ಕೊಯ್ಲು ಮಾಡಿಕೊಳ್ಳಲು ಮುಂದಾದರೆ ಮತ್ತೆಲ್ಲಿ ಮಳೆ ಶುರುವಾಗಿ ಮತ್ತಷ್ಟು ಹಾಳು ಮಾಡುತ್ತದೆಯೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಇದರಿಂದ ಅನಿವಾರ್ಯವಾಗಿ ಗುತ್ತಿಗೆ ನೀಡುವುದು ಅಥವಾ ಕೂಲಿಕಾರರ ಸಹಾಯದಿಂದ ಕೊಯ್ಲು ಮಾಡಬೇಕಿದೆ. ಒಟ್ಟನಲ್ಲಿ ರಾಗಿ ಬೆಳೆಯುವುದಕ್ಕಿಂತ ಅದರ ಕಟಾವಿಗೇ ಹೆಚ್ಚು ತಲೆ ಕೆಡಿಸಿಕೊಳ್ಳುವಂತಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮೈಸೂರು: "ಸಾಲ ತಂದಾದರೂ ಸರ್ಕಾರ ರೈತರ ನೆರವಿಗೆ ಬರಲಿದೆ. ರೈತರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿಯ ಯತ್ನ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ...

  • ಬೆಂಗಳೂರು: "ಪ್ರಯೋಜನಕ್ಕೆ ಬಾರದ ಕಲ್ಪನೆಗಳು ಮತ್ತು ಮೂಢನಂಬಿಕೆಗಳನ್ನು ತ್ಯಜಿಸಿ, ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿಗೆ ಶ್ರಮಿಸಬೇಕು' ಎಂದು ನಾಡಿನ ಜನತೆಗೆ...

  • ಮಂಡಲವಾಸ್‌(ರಾಜಸ್ಥಾನ): ಹನಿ ನೀರಿಗೂ ಪರದಾಡಿದ್ದೆವು, ಕಿಮೀಗಟ್ಟಲೇ ದೂರ ಸಾಗಿ ನೀರು ತರಲು ಹಲವು ತಾಸುಗಳನ್ನೇ ಮೀಸಲಿಡುತ್ತಿದ್ದೆವು, ಮಳೆ ಬಂದ ಎರಡೇ ತಾಸಿಗೆ...

  • ಬೆಂಗಳೂರು: ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಂವಿಧಾನ ರಕ್ಷಿಸುವ ಹೊಣೆಯನ್ನು ಕಾಂಗ್ರೆಸ್‌ ಮಾಡಬೇಕಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಶಪಥಗೈಯುವ ಮೂಲಕ 71ನೇ...

  • ವಿಜಯಪುರ: "ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಸಿ.ಸಿ. ಪಾಟೀಲ ಅವರನ್ನು ಬಲಿಕೊಟ್ಟು ಸಚಿವನಾಗುವ ದುರಾಸೆ ನನಗಿಲ್ಲ. ಒಂದೊಮ್ಮೆ ಪಕ್ಷ ನನಗೆ ಅಧಿಕಾರ ನೀಡಬಯಸಿದರೆ...