Udayavni Special

ಬ್ರಿಮ್ಸ್‌ ಆಡಳಿತ ಸುಧಾರಣೆಗೆ ಕ್ರಮ

545 ಸ್ಟಾಫ್‌ ನರ್ಸ್‌ ಹುದ್ದೆ ಭರ್ತಿ •30 ಹೊಸ ವೆಂಟಿಲೇಟರ್‌ ಖರೀದಿಗೆ ಅನುದಾನ ಮಂಜೂರು

Team Udayavani, Jun 20, 2019, 10:03 AM IST

20-June-2

ಬೀದರ: ಬ್ರಿಮ್ಸ್‌ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಇ.ತುಕಾರಾಮ್‌ ಸುದ್ದಿಗಾರರೊಂದಿಗೆ ಮಾತನಾಡಿದರು.

ಬೀದರ: ಬೀದರ ಮೆಡಿಕಲ್ ಕಾಲೇಜು ರಾಜ್ಯದಲ್ಲಿ ಮಾದರಿಯಾಗಬೇಕಿತ್ತು. ಆದರೆ, ಇಲ್ಲಿ ಅಸ್ವಚ್ಛತೆ ಸಮಸ್ಯೆ ಎದ್ದುಕಾಣುತ್ತಿದೆ. ಬ್ರಿಮ್ಸ್‌ ಆಡಳಿತ ವ್ಯವಸ್ಥೆಯಲ್ಲಿ ಲೋಪಗಳು ಎದ್ದು ಕಾಣುತ್ತಿದ್ದು, ಸುಧಾರಣೆಗೆ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಸಚಿವ ಇ.ತುಕಾರಾಮ್‌ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಮ್ಸ್‌ ಬೋಧಕ ಆಸ್ಪತ್ರೆ ಆಡಳಿತ ವ್ಯವಸ್ಥೆ ಸರಿಪಡಿಸಿ ಜಿಲ್ಲೆಯ ಬಡಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುವ ಕೆಲಸ ಮಾಡಲಾಗುವುದು. ನಾನು ಬಡ ಕುಟುಂಬದಿಂದ ಬಂದಿದ್ದು, ಬಡವರ ನೋವು ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಸೇವೆಗಳು ಸಿಗುವಂತೆ ಆಡಳಿತ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ತಿಳಿಸಿದರು.

ನಮ್ಮ ಇಲಾಖೆಯಲ್ಲಿ ಪ್ರಭಾರಿ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿರುವುದು ಗೊತ್ತಿದೆ. ಕಾರಣ ಅರ್ಹತೆ ಹೊಂದಿರುವ ಅಧಿಕಾರಿಗಳನ್ನು ಪೂರ್ಣಪ್ರಮಾಣದ ನಿರ್ದೇಶಕರಾಗಿ ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಡಳಿತಾಧಿಕಾರಿಯಾಗಿ ಕೆಎಎಸ್‌ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುವುದು. ಹಣಕಾಸು ಅಧಿಕಾರಿ ಸೇರಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಸಭೆೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬೀದರ ನಗರದಲ್ಲಿ 2007ರಿಂದ ಎಂಬಿಬಿಎಸ್‌ ಕೋರ್ಸ್‌ ಪ್ರಾರಂಭವಾಗಿದೆ. ಒಟ್ಟು 234 ಖಾಯಂ ಹುದ್ದೆಗಳ ಪೈಕಿ 171 ಖಾಯಂ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅಸ್ವಚ್ಛತೆ ಹಿನ್ನೆಲೆಯಲ್ಲಿ ಈಗಾಗಲೇ ಸ್ವಚ್ಛತೆಗೆ ಟೆಂಡರ್‌ ಕರೆಯಲಾಗಿದೆ. ಅಲ್ಲದೆ, ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆ ಇದೆ. 1,036 ಸ್ಟಾಫ್‌ ನರ್ಸ್‌ ಹುದ್ದೆಗಳ ಪೈಕಿ 545 ಹುದ್ದೆಗಳ ಭರ್ತಿಯಾಗಿದ್ದು, ಇನ್ನುಳಿದ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಹೊರ ಗುತ್ತಿಗೆ ಆಧಾರದಲ್ಲಿ ಕೂಡ ನರ್ಸ್‌ಗಳ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಬ್ರಿಮ್ಸ್‌ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಬೇಕಿದ್ದು, 30 ಹೊಸ ವೆಂಟಿಲೇಟರ್ ಖರೀದಿಗೆ ಮಂಜೂರಿ ನೀಡಲಾಗಿದೆ. 10 ಹೊಸ ಡಯಾಲಿಸಿಸ್‌ ಯಂತ್ರಗಳ ಖರೀದಿ, 30 ವಾಮ್ಸ್‌ರ್ಗಳ ಖರೀದಿ, ಲ್ಯಾಬ್‌ ವಸ್ತುಗಳ ಖರೀದಿ ಹಾಗೂ ರಾಸಾಯನಿಕ ಖರೀದಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಸದ್ಯ ಆಸ್ಪತ್ರೆ ಹಳೆ ಕಟ್ಟಡದಲ್ಲಿ ಸ್ಥಾಪಿಸಲಾದ ಎಂಆರ್‌ಐ ಯಂತ್ರವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಮೆಡಿಕಲ್ ಕಾಲೇಜಿಗೆ ಬೇಕಾದ ಎಲ್ಲ ಮೂಲ ಸೌಲಭ್ಯ ಹಾಗೂ ಸೌಕರ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ವೈದ್ಯ ಕಾಲೇಜಿನಲ್ಲಿ ನೀರಿನ ಸಮಸ್ಯೆ ಕಂಡು ಬಂದಿದ್ದು, ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸುವಂತೆ ತಿಳಿಸಲಾಗಿದೆ. ಮುಂದಿನ ಜನವರಿಯಲ್ಲಿ ಮತ್ತೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.

ಆಸ್ಪತ್ರೆ ಕಟ್ಟಡದ ಮೇಲ್ಛಾವಣಿ ಕುಸಿದಿರುವ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಯಾವ ಕಾರಣಕ್ಕೆ ಸಮಸ್ಯೆ ಕಂಡು ಬಂತ್ತು ಎಂಬ ವರದಿ ಬಂದ ನಂತರ ಕಟ್ಟಡ ನಿರ್ಮಿಸಿದ ಕಂಪೆ‌ನಿ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ತಿಳಿಸಲಾಗುವುದು. ಅಲ್ಲದೆ, ಆಸ್ಪತ್ರೆ ಪೂರ್ಣ ಕಟ್ಟಡದ ಪರಿಶೀಲಿಸುವಂತೆ ಮೂರನೇ ಸಂಸ್ಥೆ(ಥರ್ಡ್‌ ಪಾರ್ಟಿ) ಮೂಲಕ ವರದಿ ಪಡೆಯಲಾಗುವುದು ಎಂದು ತಿಳಿಸಿದರು.

ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ, ಕ್ರೀಡಾ ಖಾತೆ ಸಚಿವ ರಹೀಂಖಾನ್‌, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಸಂಸದ ಭಗವಂತ ಖೂಬಾ, ಎಂಎಲ್ಸಿ ಡಾ| ಚಂದ್ರಶೇಖರ ಪಾಟೀಲ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ಮಿತಿಮೀರುತ್ತಿದೆ covid-19: ಏ.14ರ ನಂತರ ಲಾಕ್ ಡೌನ್ ಮುಂದುವರಿಕೆ; ಪ್ರಧಾನಿ ಸುಳಿವು

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸುತ್ತಿರಲಿಲ್ಲ ಧೋನಿ !

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಕೋವಿಡ್ ಗೆ ಔಷಧಿ; ಸಂಜೀವಿನಿ ಪರ್ವತದ ಬಗ್ಗೆ ಉಲ್ಲೇಖಿಸಿ ಮೋದಿಗೆ ಬ್ರೆಜಿಲ್ ಪ್ರಧಾನಿ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

08-April-40

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

08-April-39

2,450 ಲೀಟರ್‌ ನಂದಿನಿ ಹಾಲು ವಿತರಣೆ

08-April-38

ಸಾರ್ವಜನಿಕರಿಗೆ ಬಾಳೆಗೊನೆ ಉಚಿತ ಹಂಚಿಕೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

avalu-tdy-6

ಹೇಮಾ ಮಾಲಿನಿ ಥರ ಇದ್ದೀಯ.

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

ಗದಗ ವೃದ್ಧೆಗೆ ಕೋವಿಡ್ ಸೋಂಕು: ಸಂಪರ್ಕದಲ್ಲಿದ್ದ ಎಲ್ಲಾ 45 ಮಂದಿ ನಿರಾಳ

zoom-app-desktop

ಏನಿದು ಜೂಮ್ ಆ್ಯಪ್ ? ತಂತ್ರಜ್ಞಾನ ದೈತ್ಯರಿಗೆ ಟಕ್ಕರ್ ಕೊಟ್ಟ ಇದರ ವಿಶೇಷತೆಗಳೇನು ?

08-April-40

ಗಡಿ ಭಾಗದ ಸರಹದ್ದಿನಲ್ಲಿ ಚೆಕ್‌ಪೋಸ್ಟ್‌ ತೆರೆಯಲು ಕ್ರಮ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ

ಮನೆಯಿಂದ ಹೊರಬರುವ ಮುನ್ನ ಮಾಸ್ಕ್ ಧರಿಸಿ: ಜನರಿಗೆ ಮಹಾರಾಷ್ಟ್ರ ಸಿಎಂ