ಪಾರದರ್ಶಕ ಆಡಳಿತಕ್ಕೆ ಇ-ಆಫೀಸ್‌ ತಂತ್ರಾಂಶ ಜಾರಿ

Team Udayavani, Jul 12, 2019, 5:28 PM IST

ಬೀದರ: ಜಿಲ್ಲಾ ರಂಗಮಂದಿರದಲ್ಲಿ ಎ ವೃಂದದ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ವಾರ್ಷಿಕ ವಿದ್ಯುನ್ಮಾನ ಕಾರ್ಯ ನಿರ್ವಹಣಾ ವರದಿ ಹಾಗೂ ಇ-ಆಫೀಸ್‌ ತಂತ್ರಾಂಶ ಕುರಿತ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಉದ್ಘಾಟಿಸಿದರು.

ಬೀದರ: ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಕಾಗದ ಬಳಕೆ ಕಡಿಮೆ ಮಾಡಲು, ಕಡತಗಳನ್ನು ಬೇಗ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಇ-ಆಫೀಸ್‌ ತಂತ್ರಾಂಶ ಜಾರಿ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹೇಳಿದರು.

ಜಿಲ್ಲಾ ರಂಗಮಂದಿರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬೆಂಗಳೂರು, ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾಡಳಿತ ಬೀದರ ಆಶ್ರಯದಲ್ಲಿ ಆಯೋಜಿಸಿದ್ದ ಬೀದರ ಜಿಲ್ಲೆಯ ಎ ವೃಂದದ ಅಧಿಕಾರಿಗಳಿಗೆ ವಾರ್ಷಿಕ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಹಾಗೂ ಈ ಕಚೇರಿಯ ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಅಳವಡಿಕೊಳ್ಳಬೇಕು. ಇದು ಅತ್ಯಂತ ಗಂಭೀರ ವಿಷಯವೆಂದು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಇ-ಆಫೀಸ್‌ ನಿರ್ವಹಣೆ ಮಾಡಿದಲ್ಲಿ ಎಲ್ಲ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಕಡತಗಳ ಮೇಲೆ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಯಾರ ಫೈಲ್ ಯಾರ ಬಳಿ ಇದೆ ಎಂದು ಹುಡುಕಲು ಮತ್ತು ಕಡತದ ಸ್ಥಿತಿ ನೋಡಲು ಬಹಳ ಸುಲಭವಾಗುತ್ತದೆ. ಇಲ್ಲಿ ವಿಳಂಬಕ್ಕೆ ಅವಕಾಶವೇ ಇರುವುದಿಲ್ಲ. ಇ-ಆಫೀಸ್‌ನಲ್ಲಿ ನೋಟ್ಸೀಟ್, ಕಡತ ಯಾವ ಹಂತದಲ್ಲಿದೆ ಎನ್ನುವ ಎಲ್ಲ ಮಾಹಿತಿಯನ್ನು ಮೇಲಾಧಿಕಾರಿಗಳು ಗಮನಿಸುತ್ತಾರೆ. ಇದರಿಂದ ನಾವು ಜಾಗೃತರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ತಪ್ಪುಗಳು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಇ-ಕಚೇರಿ ಸಹಾಯವಾಗುತ್ತದೆ ಎಂದು ಹೇಳಿದರು.

ಆವಕ, ಜಾವಕ ವಹಿಗಳ ನಿರ್ವಹಣೆಯನ್ನು ಬಹುತೇಕ ಕಚೇರಿಗಳಲ್ಲಿ ಸರಿಯಾಗಿ ಮಾಡುವುದಿಲ್ಲ. ಬೇರೆ ಬೇರೆ ಕಚೇರಿಯಿಂದ ಬರುವ ಪ್ರಮುಖ ಪತ್ರಗಳು ಯಾರದೋ ಬಳಿಯಲ್ಲಿ ಉಳಿದುಬಿಡುವ ಇಲ್ಲವೇ ಅಧಿಕಾರಿಯವರಿಗೆ ಸಾಕಷ್ಟು ತಡವಾಗಿ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಎಲ್ಲಾ ತೊಂದರೆ ತಪ್ಪಬೇಕು ಎಂದರೆ ನಾವೆಲ್ಲರೂ ಇ-ಕಚೇರಿ ಮಾದರಿ ಅಳವಡಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಹೇಳಿದರು.

ಎನ್‌ಐಸಿಯ ಶ್ರೀನಿವಾಸ, ವೀರೇಂದ್ರ ಬೊಮ್ಮ, ಸಂದೀಪ ಪಾಟೀಲ, ಸಂಜೀವ ದಾಳೆ, ಅಮರ ರಸೂರ, ಸಯ್ಯದ್‌ ಅಬೀದ್‌, ಶಶಿಕಾಂತ, ವಾಶಿಮ್‌ ಅವರು ತರಬೇತಿ ನೀಡಿದರು. ಈ ವೇಳೆ ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತ ಡಾ| ಶಂಕರ ವಣಕ್ಯಾಳ, ಜ್ಞಾನೇಂದ್ರಕುಮಾರ ಗಂಗವಾರ, ಡಿವೈಎಸ್‌ಪಿಗಳಾದ ವಿ.ಎನ್‌.ಪಾಟೀಲ, ಮಹೇಶ್ವರಪ್ಪ, ಪ್ರೊಬೇಷನರಿ ಡಿವೈಎಸ್‌ಪಿ ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮುಳಗುಂದ: ಸಮೀಪದ ಕಣವಿ ಗ್ರಾಮದಲ್ಲಿ ಕ್ಷಯರೋಗದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಣವಿ ಪ್ರಾ.ಆ.ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಆರ್‌.ವಿ.ಗುರಣ್ಣವರ...

  • ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೋವನಾಳ, ಶಿಗ್ಲಿ, ಸೂರಣಗಿ, ಬಾಲೇಹೊಸೂರ, ಯಳವತ್ತಿ, ಯತ್ನಳ್ಳಿ, ಗೊಜನೂರ, ಅಕ್ಕಿಗುಂದ ಸೇರಿದಂತೆ ಅನೇಕ ಕಡೆಗಳ ಜಿಂಕೆಗಳ...

  • ಚಿಕ್ಕೋಡಿ: ಗ್ರಾಮೀಣ ಪ್ರದೇಶದಲ್ಲಿ ದಿನದಯಾಳ್‌ ಉಪಾಧ್ಯೆ ವಿದ್ಯುತ್‌ ಸಂಪರ್ಕ ವಿಚಾರದಲ್ಲಿ ಹೆಸ್ಕಾ ಅಧಿಕಾರಿಗಳು ಫಲಾನುಭವಿಗಳಿಗೆ ಸಮರ್ಪಕ ವಿದ್ಯುತ್‌ ತಲುಪಿಸುತ್ತಿಲ್ಲ...

  • ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ-2019ರ ಕರಡು ನಿಯಮಾವಳಿ ಪ್ರಕಾರ ಕಾಲೇಜುಗಳು ಪಠ್ಯಕ್ರಮ ರೂಪಿಸುವ ಹಾಗೂ ಪರೀಕ್ಷೆ...

  • ಜಮಖಂಡಿ: ನಗರದ ರಾಯಲ್ ಪ್ಯಾಲೇಸ್‌ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಂಕಾ ಮೇತ್ರಿ ಸಾವಿನ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸ್ಥಳಕ್ಕೆ...

ಹೊಸ ಸೇರ್ಪಡೆ