1.83 ಲಕ್ಷ ಹೆಕ್ಟೇರ್‌ ಮುಂಗಾರು ಬೆಳೆಹಾನಿ


Team Udayavani, Oct 21, 2021, 1:08 PM IST

16

ಬೀದರ: ಧರಿನಾಡು ಬೀದರನಲ್ಲಿ ಆರ್ಭಟಿಸಿರುವ ಮುಂಗಾರು ಮಳೆ ಬೆಳೆಯನ್ನಷ್ಟೇ ಅಲ್ಲ ರೈತರ ಬದುಕನ್ನು ತನ್ನೊಟ್ಟಿಗೆ ಸೆಳೆದುಕೊಂಡು ಹೋಗಿದೆ.

ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ಪ್ರಕಾರ ಆಗಸ್ಟ್‌, ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆ, ‘ಮಹಾ’ ನೀರಿನ ಕಂಟಕದಿಂದ 1.83 ಲಕ್ಷ ಹೆಕ್ಟೇರ್‌ ಬೆಳೆ ನೀರು ಪಾಲಾಗಿದ್ದು, ನೆರವಿಗಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಬಿಸಿಲೂರಿನ ಅನ್ನದಾತರು ಕಳೆದೆರಡು ವರ್ಷದಿಂದ ವರುಣನ ಅವಕೃಪೆಗೆ ಒಳಗಾಗುತ್ತಿದ್ದು, ಅಕ್ಷರಶಃ ನಲುಗಿ ಹೋಗಿದ್ದಾರೆ.

ಒಂದೆಡೆ ಎಡಬಿಡದೇ ಮಳೆ ಸುರಿದಿದ್ದರೆ, ಮತ್ತೂಂದೆಡೆ ಮಹಾರಾಷ್ಟ್ರದ ಧನೇಗಾಂವ್‌ ಜಲಾಶಯದಿಂದ ಸಾವಿರಾರು ಕ್ಯೂಸೆಕ್‌ ನೀರು ಮಾಂಜ್ರಾ ನದಿಗೆ ಹರಿಬಿಟ್ಟಿರುವುದರಿಂದ ಕಟಾವಿಗೆ ಬಂದಿದ್ದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಕೃಷಿಕರನ್ನು ಕೋಟ್ಯಂತರ ರೂಪಾಯಿ ನಷ್ಟಕ್ಕೆ ಸಿಲುಕಿಸಿದೆ.

ಜಿಲ್ಲಾದ್ಯಂತ ಈ ಹಿಂದೆ ಸುರಿದ ಮಳೆಗೆ ಸಮೃದ್ಧವಾಗಿ ಬೆಳೆದಿದ್ದ ಉದ್ದು ಮತ್ತು ಹೆಸರು ಬೆಳೆ ಹಾನಿಗೀಡಾಗಿತ್ತು. ನಂತರ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬೀನ್‌ ನೀರು ಪಾಲಾಗಿದೆ. ಕಟಾವು ಮಾಡಿ ಕೂಡಿಟ್ಟಿದ್ದ ಬೆಳೆ ಕೊಳೆತು ಹೋಗುತ್ತಿದ್ದರೆ, ಇನ್ನೂ ಕೆಲವೆಡೆ ಭೂಮಿಯಲ್ಲಿನ ತೇವಾಂಶದಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲ ಸೂಲ ಮಾಡಿ ಭೂಮಿಗೆ ಸಾವಿರಾರು ರೂ. ಹಾಕಿದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೀದರ ಜಿಲ್ಲೆಯಲ್ಲಿ ಕಳೆದ ಜನವರಿ 1ರಿಂದ ಅಕ್ಟೋಬರ್‌ 20ರವರೆಗೆ 882 ಮಿ.ಮೀ. (795 ಮಿ.ಮೀ.) ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ 1,83,660 ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಆಗಿದ್ದು, ಅ.18ರಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಅವರು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ನಷ್ಟದ ಬಗ್ಗೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಹಾನಿಯಾದ ಬೆಳೆಗಳ ಪೈಕಿ ಸೊಯಾಬಿನ್‌ ಅತಿ ಹೆಚ್ಚು 1,01,981 ಹೆಕ್ಟೇರ್‌ ಪ್ರದೇಶ ಸೇರಿದೆ. ಇನ್ನುಳಿದಂತೆ 60,502 ಹೆಕ್ಟೇರ್‌ ತೊಗರಿ, 9882 ಹೆಕ್ಟೇರ್‌ ಹೆಸರು, 8551 ಹೆಕ್ಟೇರ್‌ ಉದ್ದು, 2054 ಹೆಕ್ಟೇರ್‌ ಕಬ್ಬು ಮತ್ತು 688 ಹೆಕ್ಟೇರ್‌ ಇತರೆ ಬೆಳೆಗಳು ಹಾನಿಯಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

 “ನೆರೆ ಪೀಡಿತ ಜಿಲ್ಲೆ ಘೋಷಿಸಿ”

ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು. ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್‌ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸಿದೆ. ಬೆಳೆಹಾನಿ ಸಮೀಕ್ಷೆ ವರದಿ ಸಲ್ಲಿಸಿ ಎರಡು ದಿನ ಕಳೆದಿದ್ದು, ಯಾವಾಗ ಪರಿಹಾರ ಸಿಗುತ್ತದೇ ಕಾದು ನೋಡಬೇಕಿದೆ. ಇನ್ನೂ ಬೀದರನ್ನು ನೆರೆ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಕೃಷಿಕರ ಒತ್ತಾಯ ಇದ್ದು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ.

-ಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ: ಜಿಲ್ಲಾಧಿಕಾರಿ ಕೂರ್ಮಾ ರಾವ್‌

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ಸಿದ್ದು v/s ದೊಡ್ಡ ಗೌಡರು; ಪ್ರಧಾನಿ ಜತೆಗಿನ ಭೇಟಿ ವಿಚಾರ ವಾಗ್ವಾದ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟ

ನಾಳೆಯಿಂದ ಜವಾರ್‌ ಚಂಡಮಾರುತ ಕಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

ಕಲ್ಯಾಣಕ್ಕೆ ಖೂಬಾ-ಚವ್ಹಾಣ ಕೊಡುಗೆ ಶೂನ್ಯ

ಕಲ್ಯಾಣಕ್ಕೆ ಖೂಬಾ-ಚವ್ಹಾಣ ಕೊಡುಗೆ ಶೂನ್ಯ

accident

ಅಪಘಾತ: ಪುತ್ರ‌ನ ಮದುವೆಗೆ ಆಮಂತ್ರಿಸಲು ಹೋದ ದಂಪತಿ ದುರ್ಮರಣ

Untitled-2

ಬೀದರ್: ಬಿಸಿಯೂಟದಲ್ಲಿ ಮೊಟ್ಟೆ: ಯೋಜನೆ ಕೈಬಿಡಲು ಆಗ್ರಹ

15DC

ಬ್ರಿಮ್ಸ್‌ ಕಟ್ಟಡ ವೀಕ್ಷಿಸಿದ ಡಿಸಿ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ

ಒಮಿಕ್ರಾನ್‌: ಉಡುಪಿಯಲ್ಲಿ ಸಕಲ ಮುನ್ನೆಚ್ಚರಿಕೆ: ಜಿಲ್ಲಾಧಿಕಾರಿ ಕೂರ್ಮಾ ರಾವ್‌

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಭಾರತದಲ್ಲಿ ಒಮಿಕ್ರಾನ್‌ ಅಪಾಯಕಾರಿಯಲ್ಲ!

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

ಶೇ. 10ರಷ್ಟು ಮಂದಿ ಅಕ್ಷರ ವಂಚಿತರು

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

1963ರಲ್ಲೇ ಬಂದಿತ್ತು “ಒಮಿಕ್ರಾನ್‌ ವೇರಿಯಂಟ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.