ಜಲ ಜೀವನ್ ಯೋಜನೆಯಡಿ 22.4 ಕೋಟಿ ರೂ. ಬಿಡುಗಡೆ
Team Udayavani, Nov 26, 2020, 4:58 PM IST
ಬೀದರ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆಯಡಿ ಔರಾದ ತಾಲೂಕಿಗೆ 22.4 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ತಾಲೂಕಿನ ಚಾಂದೋರಿ, ಹಾಲಳ್ಳಿ, ಚಿಕ್ಲಿ(ಜೆ), ನಾಗನಪಳ್ಳಿ, ಬಾಬ್ಳಿ, ಧೂಪತಮಹಾಗಾಂವ್,ಮಣಿಗೆಂಪುರ, ರಂಡ್ಯಾಳ, ಬಾವಲಗಾಂವ್, ಹೊಕ್ರಾಣಾ, ಹೊಳಸಮುದ್ರ, ಜಮಗಿ, ಕಮಲನಗರ, ಲಾಧಾ, ಮದನೂರ್, ಮುರ್ಕಿ, ನಾಗಮಾರಪಳ್ಳಿ, ಶೆಂಬೆಳ್ಳಿ, ಸೋನಾಳ, ಜೀರ್ಗಾ(ಜೆ), ಹೊರಂಡಿ, ಕಾಳಗಾಪುರ, ಇಟಗ್ಯಾಳ, ಸುಂದಾಳ, ಯನಗುಂದಾ, ಮುಧೋಳ(ಕೆ), ಸೋರಳ್ಳಿ, ಸೋರಳ್ಳಿ ತಾಂಡಾ, ಮಾಳೆಗಾಂವ್, ಲಷ್ಕರ್ ತಾಂಡಾ, ಮಹಾದೇವ ತಂಡಾ, ಮಾರುತಿ ತಾಂಡಾ, ಹಿಪ್ಪಳಗಾಂವ್, ಖಂಡಿಕೇರಿ, ಬೆಳಕುಣಿ ಗ್ರಾಮಗಳು ಈ ಯೋಜನೆಗೆ ಆಯ್ಕೆಯಾಗಿವೆ.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಲು ಜಲ ಜೀವನ ಮಿಷನ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಔರಾದ ತಾಲೂಕಿಗೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕ್ರಿಯಾ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಹಂತ-ಹಂತವಾಗಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ಆಯ್ಕೆಯಾಗಿರುವ ಗ್ರಾಮಗಳ ಪ್ರತಿ ಮನೆಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಪ್ಪತ್ತರ ದಶಕ ಹಿಂದಿ ಚಿತ್ರರಂಗದ ಸುವರ್ಣ ಯುಗ: ಗೋವಾ ಚಿತ್ರೋತ್ಸವದಲ್ಲಿ ರಾಹುಲ್ ರವೇಲ್
ಬಾಂಗ್ಲಾದೇಶಕ್ಕೆ ಭಾರತದಿಂದ 20 ಲಕ್ಷ ಕೋವಿಡ್ ಲಸಿಕೆ: ಪಾಕ್ ನಿಂದಲೂ ಮುಂದುವರಿದ ಪ್ರಯತ್ನ
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಫೆ.19 ಪೊಗರು ರಿಲೀಸ್: ಮೂರೂವರೆ ವರ್ಷಗಳ ಬಳಿಕ ಧ್ರುವ ಸರ್ಜಾ ಸಿನಿಮಾ
ವಲಸಿಗರ ಬಣದಲ್ಲಿ ಒಡಕಿನ ಸುಳಿವು: ಭಿನ್ನ ದಿಕ್ಕಿನೆಡೆಗೆ ಮುಖಂಡರ ಚಿಂತನೆ