ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ಕ್ರಮ


Team Udayavani, May 31, 2021, 7:44 PM IST

ಚಬನಷಬಚಚನಷಚಬ

ಬೀದರ: ಕೋವಿಡ್‌-19 ಹಾಗೂ ಇತರೇ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳು ಮತ್ತು ದುಡಿಯುವ ಪೋಷಕರು ಮರಣ ಹೊಂದಿದ ಮಕ್ಕಳಿಗೆ ಪುನರ್ವಸತಿ ಮತ್ತು ಸಹಾಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ಅವರು, ರವಿವಾರ ನಗರದ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಸರ್ವೋತ್ಛ ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವಂತೆ ಹಾಗೂ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅವರು ನೀಡಿರುವ ಶಿಫಾರಸ್ಸಿನ ಅಂಶಗಳಂತೆ ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕ್ರಮಗಳು ಕಾಲಮಿತಿಯೊಳಗೆ ನಡೆಯಬೇಕು ಎಂದು ಅ ಧಿಕಾರಿಗಳಿಗೆ ಸೂಚನೆ ನೀಡಿದರು. ಮೊದಲಿಗೆ ಮಾರ್ಚ್‌ 2020ರಿಂದ ಇಲ್ಲಿಯವರೆಗೆ ಕೋವಿಡ್‌ನಿಂದ ಮರಣ ಹೊಂದಿರುವ ಪಾಲಕರ ಅನಾಥ ಮಕ್ಕಳು ಹಾಗೂ ದುಡಿಯುವ ಪಾಲಕ ಮರಣ ಹೊಂದಿದ್ದ ಪಕ್ಷದಲ್ಲಿ ಅವರ ಮಕ್ಕಳು ಹಾಗೂ ಇತರೆ ಕಾರಣದಿಂದ ಮರಣ ಹೊಂದಿದ ಪಾಲಕರ ಮಕ್ಕಳ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಹೊಂದಿರುವ ಮಾಹಿತಿಯನ್ನು ಕೆಪಿಎಂಇಯಿಂದ ತುರ್ತಾಗಿ ಪಡೆಯಬೇಕು ಎಂದು ಜಿಲ್ಲಾ ಧಿಕಾರಿಗಳು ಸೂಚನೆ ನೀಡಿದರು.

ಗ್ರಾಮ ಹಾಗೂ ತಾಲೂಕು ಮಟ್ಟದ ರಕ್ಷಣಾ ಸಮಿತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಕಷ್ಟದಲ್ಲಿ ಇರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ಪುನರ್ವಸತಿ ಕಲ್ಪಿಸುವುದಕ್ಕಾಗಿ ಕ್ರಮವಹಿಸಬೇಕು ಎಂದು ಸೂಚಿಸಿದರು. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಒಂದು ಸದಸ್ಯತ್ವ ಹುದ್ದೆ ಖಾಲಿಯಿದ್ದು, ಅದನ್ನು ತುರ್ತಾಗಿ ಭರ್ತಿ ಮಾಡಿಕೊಳ್ಳಲು ಪ್ರಸ್ತಾವನೆಯನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಲು ಕ್ರಮ ವಹಿಸಬೇಕು ಎಂದು ಅ ಧಿಕಾರಿಗಳಿಗೆ ತಿಳಿಸಲಾಯಿತು.

ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಮಕ್ಕಳ ಕಂಡುಬಂದಲ್ಲಿ ಮಕ್ಕಳು ಸಹಾಯವಾಣಿ ಸಂಖ್ಯೆ 1098, ಪೊಲೀಸ್‌ ಸಹಾಯವಾಣಿ ಸಂಕ್ಯೆ 112 ಹಾಗೂ ಮಕ್ಕಳಿಗೆ ಆಪ್ತ ಸಮಾಲೋಚನೆ ಬೇಕಾದ್ದಲ್ಲಿ ಟೇಲಿ ಕಾನ್ಸೆಲಿಂಗ್‌ ನಂಬರ್‌ 14499 ಕರೆ ಮಾಡುವಂತೆ ಸಭೆಯಲ್ಲಿ ತಿಳಿಸಲಾಯಿತು. ಕೋವಿಡ್‌ ತುರ್ತು ಸಂದರ್ಭದಲ್ಲಿ ಕೋವಿಡ್‌ನಿಂದ ಬಾಧಿತರಾದ ಮಕ್ಕಳಿಗೆ ಸಹಾಯಧನ ನೀಡಲು ಜಿಲ್ಲಾ ಮಟ್ಟದಲ್ಲಿ ಬೀದರ್‌ ಜಿಲ್ಲಾ ಬಾಲ ನ್ಯಾಯ ನಿ ಧಿಯನ್ನು ಪ್ರಾರಂಭಿಸಲು ಜಿಲ್ಲಾ ಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಧಿಕಾರಿಗಳ ಜಂಟಿ ಹೆಸರಿನಲ್ಲಿ ಖಾತೆಯನ್ನು ತೆರೆಯಲು ಸೂಚಿಸಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ, ಎಸ್‌ಪಿ ನಾಗೇಶ ಡಿ.ಎಲ್‌., ಹಿರಿಯ ಸಿವಿಲ್‌ ನ್ಯಾಯಾಧೀಶ ಸಿದ್ರಾಮ ಟಿ.ಪಿ., ಅಪರ ಜಿಲ್ಲಾ ಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಾ| ಭುವನೇಶ ಪಾಟೀಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ, ಡಿಡಿಪಿಐ ಟಿ.ಆರ್‌. ದೊಡ್ಡೆ, ತಹಶೀಲ್ದಾರ್‌ ಗಂಗಾದೇವಿ ಸಿ.ಎಚ್‌., ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬೀದರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಭಜಂತ್ರಿ ಇದ್ದರು.

ಟಾಪ್ ನ್ಯೂಸ್

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

Boris

“ಮಹಾ” ಕಸರತ್ತು: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಇಂಗಿತ

congress

ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

20plasic

ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಪಾಲಿಸಿ

ಬೀದರ: ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ

ಬೀದರ: ಹಳ್ಳ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ

19BJP-‘

ಬೀದರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಭೇಟಿ: ಪರಿಸರ ಮಾಲಿನ್ಯಕ್ಕೆ ಸಿಗುತ್ತ ಮುಕ್ತಿ?

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಭೇಟಿ: ಪರಿಸರ ಮಾಲಿನ್ಯಕ್ಕೆ ಸಿಗುತ್ತ ಮುಕ್ತಿ?

MUST WATCH

udayavani youtube

ನ್ಯಾಯ ಸಿಗುವ ನಂಬಿಕೆ ಇಲ್ಲ; ಹರ್ಷ ಸಹೋದರಿ ಅಶ್ವಿನಿ ಅಳಲು

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

ಹೊಸ ಸೇರ್ಪಡೆ

16-protest

ಶಾಲೆಗೆ ಬೀಗ ಹಾಕಿ ಪ್ರತಿಭಟನೆ

Namma-hudugrau

ಭರ್ಜರಿ ಎಂಟ್ರಿಗೆ ‘ನಮ್ಮ ಹುಡುಗರು’ ರೆಡಿ

15AC

ಎಸ್‌ಸಿ ಪ್ರಮಾಣ ಪತ್ರ ವಿತರಣೆಗಾಗಿ ನಿರಶನ

Boris

“ಮಹಾ” ಕಸರತ್ತು: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಇಂಗಿತ

congress

ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.