Udayavni Special

ಪಶು ಪಾಲಕರಿಗೆ ಅಂಬ್ಯುಲೆನ್ಸ್‌ ಸಂಜೀವಿನಿ; | 1962ಕ್ಕೆ ಕರೆ ಮಾಡಿದ್ರೆ ವೈದ್ಯರು ಹಾಜರ್‌

ಪ್ರತಿ ಪಾಲಿಕ್ಲಿನಿಕ್‌ನ ಒಬ್ಬರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದೆ.

Team Udayavani, Feb 17, 2021, 5:38 PM IST

ಪಶು ಪಾಲಕರಿಗೆ ಅಂಬ್ಯುಲೆನ್ಸ್‌ ಸಂಜೀವಿನಿ; | 1962ಕ್ಕೆ ಕರೆ ಮಾಡಿದ್ರೆ ವೈದ್ಯರು ಹಾಜರ್‌

ಬೀದರ: ಜಾನುವಾರುಗಳಲ್ಲಿ ಎದುರಾಗುವ ಅರೋಗ್ಯ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ, ಮೂಕ ರೋಧನೆ ತಪ್ಪಿಸಲು ಸರ್ಕಾರ ಜಾರಿಗೊಳಿಸಿರುವ “ಪಶು ಸಂಜೀವಿನಿ’ ಸೇವೆಗೆ ಗಡಿ ಜಿಲ್ಲೆ ಬೀದರನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ರೈತರ ಮನೆ ಬಾಗಿಲಿಗೆ ಪಶು ವೈದ್ಯಕೀಯ ಸೇವೆ ನೀಡುತ್ತಿರುವ ಪಶು ಶಸ್ತ್ರ ಚಿಕಿತ್ಸಾ ವಾಹನ ಪಶು ಪಾಲಕರಿಗೆ “ಸಂಜೀವಿನಿ’ಯಾಗಿಯೇ ಪರಿಣಿಮಿಸುತ್ತಿದೆ.

ರೋಗಗ್ರಸ್ಥ ಜಾನುವಾರುಗಳಿಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ದೂರದ ಪಶು ಆಸ್ಪತ್ರೆಗಳಿಗೆ ಸಾಗಿಸಲು ರೈತರಿಗೆ ಅನಾನುಕೂಲದ ಜತೆಗೆ ಆರ್ಥಿಕ ಹೊರೆ ಆಗುತ್ತಿದ್ದು, ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೇ ಅಸುನೀಗುತ್ತಿವೆ. ಇದನ್ನು ತಪ್ಪಿಸಿ ತುರ್ತು ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬೀದರ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ತಲಾ ಒಂದರಂತೆ ಪಶು ಸಂಜೀವಿನಿ ಅಂಬ್ಯುಲೆನ್ಸ್‌ ಸೇವೆ ಜಾರಿಗೊಳಿಸಿದೆ. ಬೀದರ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಕಾಯಿಲೆಗಳಿಗೆ ತುತ್ತಾಗಿದ್ದ 40ಕ್ಕೂ ಹೆಚ್ಚು ಜಾನುವಾರುಗಳ ಆರೋಗ್ಯ ರಕ್ಷಣೆ ಮಾಡಿದೆ. ರೈತರ ಮನೆ ಬಾಗಿಲಿಗೆ ತೆರಳಿ ಅವಶ್ಯಕ ಹಾಗೂ ತುರ್ತು ಚಿಕಿತ್ಸೆ ಒದಗಿಸಿದೆ.

ಅಂಬ್ಯುಲೆನ್ಸ್‌ ವಿಶೇಷತೆಗಳು: ಸುಸಜ್ಜಿತ ಅಂಬ್ಯುಲೆನ್ಸ್‌ ವಾಹನ ಆಧುನಿಕ ಪಶು ವೈದ್ಯಕೀಯ ಸೇವೆಗಳಾದ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗಶಾಲೆ, ಸ್ಕ್ಯಾನಿಂಗ್‌ ಉಪಕರಣ ಅಳವಡಿಸಲಾಗಿದೆ. ಪ್ರಸೂತಿ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಕಿಟ್‌, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್‌, ವಾಶ್‌ ಬೇಸಿನ್‌, ಆಮ್ಲಜನಕ ಸಪೋರ್ಟ್‌ ಸಿಸ್ಟಮ್‌ ಒಳಗೊಂಡಿದ್ದು, ಪ್ರತಿ ಪಾಲಿಕ್ಲಿನಿಕ್‌ನ ಒಬ್ಬರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಸಹಾಯಕರನ್ನು ನೇಮಕ ಮಾಡಲಾಗಿದೆ.

ಪಶು ಪಾಲಕರು ಸಹಾಯವಾಣಿ ಸಂಖ್ಯೆ-1962ಕ್ಕೆ ಕರೆ ಮಾಡಿದರೆ ರೋಗಗ್ರಸ್ತ ಜಾನುವಾರು ಸ್ಥಳಕ್ಕೆ ವಾಹನ ತೆರಳಿ ವೈದ್ಯಕೀಯ ಸೇವೆ ನೀಡಲಿದೆ. ವಿಷಪ್ರಾಶನ, ಪ್ರಸವಕ್ಕೆ ಸಂಬಂಧಿಸಿದ ತೊಂದರೆಗಳು, ಹೊಟ್ಟೆಯುಬ್ಬರ, ಉಸಿರುಗಟ್ಟುವುದು, ಅಪಘಾತ, ಮೂಳೆಮುರಿತ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ಜಾನುವಾರುಗಳನ್ನು ವಾಹನದಲ್ಲಿ ಹಾಕಿಕೊಂಡು ಹೋಗಿ ಚಿಕಿತ್ಸೆ ಪಡೆಯುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ. ಈ ಮೂಲಕ ಜಾನುವಾರುಗಳ ಪ್ರಾಣ ಹಾನಿ ಆಗುವುದನ್ನು ತಡೆಗಟ್ಟಿ ರೈತರಿಗೆ ಎದುರಾಗುವ ಆರ್ಥಿಕ ಸಂಕಷ್ಟ ತಪ್ಪಿಸಲು ಅನುಕೂಲ ಆಗುತ್ತಿದೆ.

ಬೀದರ, ರಾಯಚೂರು, ಕಲುಬುರ್ಗಿ, ಧಾರವಾಡ, ವಿಜಯಪುರ, ಬೆಳಗಾವಿ, ಮಂಗಳೂರು, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ಯಾದಗಿರಿ,
ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಪಶು ವೈದ್ಯಕೀಯ ಪಾಲಿಕ್ಲಿನಿಕ್‌ಗಳಿಗೆ ನೀಡಲಾಗಿದೆ. ಸದ್ಯ ರಾಜ್ಯದ 15 ಜಿಲ್ಲೆಗಳಲ್ಲಿ “ಪಶು ಸಂಜೀವಿನಿ’ ಕಾರ್ಯಾರಂಭ ಮಾಡಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೆ ಈ ಸೇವೆಯನ್ನು ವಿಸ್ತರಿಸುವ ಸಾಧ್ಯತೆ ಇದೆ.

“ವೈದ್ಯ ಸಿಬ್ಬಂದಿ ನೇಮಿಸಲಿ’
ಜಾನುವಾರುಗಳ ತುರ್ತು ಆರೋಗ್ಯ ಸೇವೆಗಾಗಿ ಪಶು ಸಂಜೀವಿನಿ ಜಾರಿಗೊಳಿಸಿರುವ ಸರ್ಕಾರ, ಚಿಕಿತ್ಸೆಗೆ ಅಗತ್ಯವಾಗಿರುವ ವೈದ್ಯ ಸಿಬ್ಬಂದಿಗಳ ನೇಮಕದಲ್ಲಿ ನಿರ್ಲಕ್ಷ ವಹಿಸಿದೆ. ಸದ್ಯ ಪಾಲಿಕ್ಲಿನಿಕ್‌ನ ಸಿಬ್ಬಂದಿಗಳನ್ನೇ ನಿಯುಕ್ತಿ ಮಾಡಿರುವುದರಿಂದ ರೈತರಿಗೆ 24×7 ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಅಡ್ಡಿಯಾಗುತ್ತಿದೆ. ಪಶುಗಳಿಗೆ ಸಮಯಕ್ಕೆ ಚಿಕಿತ್ಸೆ ಸೌಲಭ್ಯ ಸಿಗದಂತಾಗಿದೆ. ಪಶು ಸಂಜೀವಿನಿ ವಾಹನಗಳಿಗೆ ಪ್ರತ್ಯೇಕ ಶಸ್ತ್ರ ಚಿಕಿತ್ಸಾ ತಜ್ಞರು, ಸಹಾಯಕರ ಜತೆಗೆ ಅಗತ್ಯ ಚಾಲಕರ ನೇಮಕಾತಿಯ ಅಗತ್ಯವಿದೆ.

ಪಶು ಸಂಜೀವಿನಿ ಅಂಬ್ಯುಲೆನ್ಸ್‌ ಸೇವೆಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರೈತರು, ಪಶು ಪಾಲಕರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ರೋಗಗ್ರಸ್ತ
ಜಾನುವಾರುಗಳನ್ನು ಪಶು ಆಸ್ಪತ್ರೆಗೆ ತರಬೇಕಾದರೆ 2-3 ಸಾವಿರ ರೂ. ವೆಚ್ಚವಾಗುತ್ತದೆ. ಈಗ ರೋಗಪೀಡಿತ ಜಾನುವಾರುಗಳ ಸ್ಥಳಕ್ಕೆ ತಜ್ಞ ವೈದ್ಯರು ಮತ್ತು ಉಪಕರಣಗಳನ್ನು ಒಳಗೊಂಡ ವಾಹನ ತೆರಳಿ ಚಿಕಿತ್ಸಾ ಸೇವೆ ನೀಡುತ್ತಿದೆ.
ಡಾ| ರವೀಂದ್ರ ಭೂರೆ, ಪ್ರಭಾರ ಉಪ ನಿರ್ದೇಶಕರು ಪಶು ಪಾಲಿಕ್ಲಿನಿಕ್‌, ಬೀದರ

 ಶಶಿಕಾಂತ ಬಂಬುಳಗೆ

 

ಟಾಪ್ ನ್ಯೂಸ್

kaup

ಕಾಪು: ಜೆಡಿಎಸ್‌ ನ ಎಲ್ಲಾ ಘಟಕಗಳು ವಿಸರ್ಜನೆ: ಯೋಗೀಶ್ ಶೆಟ್ಟಿ

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

ಮತ ಹಾಕದವರನ್ನು ಮುಂದೆ ನೋಡಿಕೊಳ್ಳುತ್ತೇವೆ : ಟಿಎಂಸಿ ನಾಯಕನ ಬೆದರಿಕೆ..!

narayan

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ: ಸಚಿವ ಡಾ. ನಾರಾಯಣಗೌಡ ಗರಂ

Kamal Hasan Against on Modi

ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

ಕೇರಳದಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿ ‘ಮೆಟ್ರೋ ಮ್ಯಾನ್’

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Urgently distribute the solution

ದೌರ್ಜನ್ಯ ಪ್ರಕರಣ; ತುರ್ತಾಗಿ ಪರಿಹಾರ ವಿತರಿಸಿ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಕೋವಿಡ್‌ ಲಸಿಕೆ ಸಂಪೂರ್ಣ ಸುರಕ್ಷಿತ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ಸಿದ್ಧಿವಿನಾಯಕನ ದರ್ಶನಕ್ಕೆ ಪಾದಯಾತ್ರೆ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

ನ್ಯಾಯವಾದಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಿ

Bidar-New

ಬೀದರ: ಪ್ರತಿಯೊಬ್ಬರು ಕೋವಿಡ್‌ ಲಸಿಕೆ ಪಡೆಯಿರಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

Urgently distribute the solution

ದೌರ್ಜನ್ಯ ಪ್ರಕರಣ; ತುರ್ತಾಗಿ ಪರಿಹಾರ ವಿತರಿಸಿ

Laxman

ಜಾರಕಿಹೊಳಿ ವಿರುದ್ಧ ಎಫ್ಐಆರ್‌ ದಾಖಲಿಸಿ

Cheeta Death

ಉರುಳಿಗೆ ಸಿಲುಕಿ 3 ವರ್ಷದ ಗಂಡು ಚಿರತೆ ಸಾವು

virendra heggade

ಮೂಲಸ್ವರೂಪದಂತೆ ದೇಗುಲ ಪುನರ್‌ ನಿರ್ಮಾಣ

booth level

ಬೂತ್‌ ಮಟ್ಟದಿಂದ ಪಕ್ಷ ಸದೃಢಗೊಳಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.