ಬಸವಕಲ್ಯಾಣ; ಭಾರೀ ಮಳೆಗೆ ಒಡೆದ ಕೆರೆ ದಂಡೆ: ನೀರು ನುಗ್ಗಿ ಅಪಾರ ಹಾನಿ

Team Udayavani, Jun 12, 2024, 3:51 PM IST

1-asdsadasd

ಬಸವಕಲ್ಯಾಣ: ರಾತ್ರಿ ವೇಳೆ ಸುರಿದ ಭಾರಿ ಮಳೆಗೆ ಸಣ್ಣಕೆರೆ ಯೊಂದು ಒಡೆದು ಅಪಾರ ಪ್ರಮಾಣದ ಹಾನಿಯಾದ ಘಟನೆ ತಾಲೂಕಿನ ಅಟ್ಟೂರ್ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಜರುಗಿದೆ. ತಾಲೂಕಿನ ಕೊಹಿನೂರು ಹೋಬಳಿ ವ್ಯಾಪ್ತಿಯಲ್ಲಿ ಮಧ್ಯರಾತ್ರಿಯಲ್ಲಿ ಸುರಿದ ಭಾರಿ ಮಳೆಗೆ ಅಟ್ಟೂರ ಗ್ರಾಮದ ಸಮೀಪದ ಸಣ್ಣ ಕೆರೆ ಒಡೆದು ಗ್ರಾಮದ ವ್ಯಾಪ್ತಿಯ ಹಲವು ಜನ ರೈತರ ಜಮೀನುಗಳಿಗೆ ನೀರು ನುಗ್ಗಿದೆ.

ಕೆರೆ ನೀರು ಜಮೀನಿಗೆ ನುಗ್ಗಿದ ಪರಿಣಾಮ ರೈತರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಸಹಿತ ಇನ್ನೂ ಮೊಳಕೆ ಒಡೆಯದ ಬಿತ್ತನೆ ಮಾಡಿದ ಬೀಜ ಗೊಬ್ಬರಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿಹೋಗಿವೆ.

ಕೆರೆ ನೀರು ಹಲವು ರೈತರ ಬಾವಿಗಳಿಗೆ ನುಗ್ಗಿದ ಕಾರಣ ಅಟ್ಟೂರು ಗ್ರಾಮದ ಸುಮಾರು 15ಕ್ಕೂ ಅಧಿಕ ರೈತರ ಬಾವಿಗಳು ಸಂಪೂರ್ಣ ಮುಚ್ಚಿ ಹೋಗಿವೆ. ಕೆರೆ ಒಡೆದ ಪರಿಣಾಮ ಭಾರಿ ರಭಸದಿಂದ ಹರಿದ ನೀರಿನಿಂದಾಗಿ ಅಟ್ಟೂರ ಗ್ರಾಮದಿಂದ ಅಟ್ಟೂರ ತಾಂಡಾಕ್ಕೆ ಸಂಪರ್ಕಿಸುವ ಮಾರ್ಗ ಮಧ್ಯದಲ್ಲಿರುವ ರಸ್ತೆ ಸೇತುವೆ ಒಂದು ಸಂಪೂರ್ಣವಾಗಿ ಒಡೆದು ಕೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹೀಗಾಗಿ ತಾಂಡಾದ ನಿವಾಸಿಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದಾರೆ.

ಅಟ್ಟೂರ ಸೇರಿದಂತೆ ಕೋಹಿನೂರ್‌ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಗಂಡೂರಿ ನಾಲಾ ಸೇರಿದಂತೆ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತಿದ್ದು, ಹಳ್ಳಗಳ ನೀರು ಸಹ ರೈತರ ಜಮೀನುಗಳಿಗೆ ನುಗ್ಗಿವೆ.

ಜಮೀನಿನಲ್ಲಿ ಇರುವ ವಿದ್ಯುತ್ ಕಂಬಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಟ್ಟೂರ ಸೇರಿದಂತೆ ಕೆಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೆರೆ ಒಡೆದಿರುವ ಸುದ್ದಿ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಕುರಿತು ಸಮೀಕ್ಷೆ ನಡೆಸುತ್ತಿದ್ದಾರೆ. ಕೋಹಿನೂರ್‌ ಹೊಬಳಿ ವ್ಯಾಪ್ತಿಯಲ್ಲಿ 180 ಮಿ.ಮಿ. ಮಳೆ ಸುರಿದಿದೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿಯಲ್ಲಿ ಆಕಸ್ಮಿಕವಾಗಿ ಕೆರೆ ಒಡೆದು ರೈತರಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಧನ ಕಲ್ಪಿಸಿ ಕೊಡಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

1-qewqe

Parliament; ಸರ್ವ ಪಕ್ಷ ಸಭೆಯಲ್ಲಿ 44 ಪಕ್ಷಗಳು ಭಾಗಿ: ಹಲವು ಬೇಡಿಕೆಗಳು

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

Thirthahalli ರಭಸವಾಗಿ ಹರಿಯುತ್ತಿರವ ಹಳ್ಳದಲ್ಲಿ ಈಜಿ ವಿದ್ಯುತ್ ಲೈನ್ ಸರಿ ಮಾಡಿದ ಸಿಬ್ಬಂದಿ

mamata

Bangladesh crisis: ಸಂತ್ರಸ್ತರು ನಮ್ಮ ಮನೆ ಬಾಗಿಲಿಗೆ ಬಂದರೆ ಆಶ್ರಯ ನೀಡುತ್ತೇವೆ: ಮಮತಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Selling liquor online? Minister RB Thimmapura clarified

Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

BUS driver

Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!

Bidar: ರಾಜ್ಯದ ಮದರಸಾಗಳಲ್ಲಿ ಕನ್ನಡ ಕಲಿಕೆಗಾಗಿ ಪ್ರಾಧಿಕಾರದಿಂದ ಯೋಜನೆ: ಬಿಳಿಮಲೆ‌

Bidar: ಮದರಸಾಗಳಲ್ಲಿ ಕನ್ನಡ ಕಲಿಕೆಗಾಗಿ ಪ್ರಾಧಿಕಾರದಿಂದ ಯೋಜನೆ: ಬಿಳಿಮಲೆ‌

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

Bidar; ಲಾರಿ-ಕಾರಿನಲ್ಲಿ ಸಾಗಿಸುತ್ತಿದ್ದ 3.05 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

MUDA ಅವ್ಯವಹಾರದ ಸಮಗ್ರ ತನಿಖೆಯಾಗಲಿ: ಪ್ರಭು ಚವ್ಹಾಣ್

MUDA ಅವ್ಯವಹಾರದ ಸಮಗ್ರ ತನಿಖೆಯಾಗಲಿ: ಪ್ರಭು ಚವ್ಹಾಣ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Heavy Rain: ಬೆಳಗಾವಿ, ಖಾನಾಪುರ ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ‌ ಘೋಷಣೆ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Kota ಯಡಾಡಿ – ಮತ್ಯಾಡಿ: ಇಸ್ಪೀಟ್‌ ನಿರತರ ಬಂಧನ

Thirthahalli ನಿರಂತರ ಮಳೆಯ ಆರ್ಭಟ : ಕುಸಿದು ಬಿದ್ದ ಮನೆಯ ಗೋಡೆ

Thirthahalli ನಿರಂತರ ಮಳೆಯ ಆರ್ಭಟ: ಕುಸಿದು ಬಿದ್ದ ಮನೆಯ ಗೋಡೆ

Rain-Karnataka

Rain Alert: ಕರಾವಳಿ ಜಿಲ್ಲೆಗಳಲ್ಲಿ ಜು.25ರವರೆಗೂ ವ್ಯಾಪಕ ಮಳೆ 

1-mmm

Mudhol; ಸ್ವಲ್ಪವೂ ಪಾಪ ಪ್ರಜ್ಞೆಯೇ ಇಲ್ಲದೆ ಪೊಲೀಸರೆದುರೇ ಎದೆ ತಟ್ಟಿಕೊಂಡ ಆರೋಪಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.