ಮಹಾಮಾನವತಾವಾದಿ ಬಸವಣ್ಣನ ಮೂರ್ತಿಗೆ ನಮನ
Team Udayavani, May 15, 2021, 1:00 PM IST
ಬೀದರ: ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಮಹಾಮಾನವ ತಾವಾದಿ ಬಸವ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಪುಷ್ಪ ನಮನ, ವಚನ ಪಠಣ ಮೂಲಕ ಬಸವಣ್ಣನಿಗೆ ನಮನ ಸಲ್ಲಿಸಲಾಯಿತು.
ನಗರದ ಬಸವೇಶ್ವರ ಪ್ರತಿಮೆ ಬಳಿ ಷಟಸ್ಥಲ ಧ್ವಜಾರೋಹಣವನ್ನು ಸಂಸದ ಭಗವಂತ ಖೂಬಾ ನೆರವೇರಿಸಿದರು. ಬಳಿಕ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು. ಈ ವೇಳೆ ಮಾತನಾಡಿದ ಸಚಿವ ಚವ್ಹಾಣ, ಬಸವಣ್ಣನ ವಚನಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಕೊರೊನಾ ನಿಯಂತ್ರಿಸಲು ಬಸವಣ್ಣನವರು ನಮಗೆಲ್ಲರಿಗೂ ಶಕ್ತಿ ಕೊಡಲಿ ಮತ್ತು ದಾರಿ ತೋರಲಿ ಎಂದರು.
ಶಾಸಕ ರಹೀಮ್ ಖಾನ್, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಎಸ್‌ಪಿ ನಾಗೇಶ ಡಿ.ಎಲ್, ಕೆಆರ್‌ಐಐಡಿಬಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಈ ವೇಳೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡರು.
ಶಿವಶರಣಪ್ಪ ವಾಲಿ, ಬಸವರಾಜ ಧನ್ನೂರು, ಅನಿಲ್ ಬೆಲ್ದಾರ್, ಸುರೇಶ್ ಚನ್ನಶೆಟ್ಟಿ, ರಜನೀಶ ವಾಲಿ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ್ ಗಾದಗಿ, ಆನಂದ ದೇವಪ್ಪ, ದೀಪಕ ವಾಲಿ, ರಾಜೇಂದ್ರಕುಮಾರ ಗಂದಗೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
“ಮಹಾ” ಕಸರತ್ತು: ಸಚಿವರ ರಾಜೀನಾಮೆಗೆ ಮಣಿದ ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಇಂಗಿತ
ಚುನಾವಣೆವರೆಗೂ ಯಾರೂ ಮಲಗಬಾರದು : ಕೈ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ
ತಿಕೋಟಾ ತಾಲೂಕಲ್ಲಿ ಕಾಮಗಾರಿ ಪರಿಶೀಲನೆ
ಭ್ರಷ್ಟರನ್ನು ಮಟ್ಟ ಹಾಕುವವರೆಗೂ ವಿಶ್ರಮಿಸುವುದಿಲ್ಲ: ಆರಗ ಜ್ಞಾನೇಂದ್ರ ಗುಡುಗು
ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ