Udayavni Special

ತೊಗರಿ ಕಡ್ಡಿಯಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಕೆ

Team Udayavani, Feb 17, 2020, 1:26 PM IST

17-February-13

ಬೀದರ: ತೊಗರಿ ಕಡ್ಡಿಯನ್ನು ಸಮಗ್ರವಾಗಿ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ರೈತರಿಗೆ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ಬೆಳೆಯಾದ ತೊಗರಿಯನ್ನು ಹೆಚ್ಚಾಗಿ ಒಣ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಕೆಲ ರೈತರು ನೀರಿನ ಲಭ್ಯತೆ ಇದ್ದಲ್ಲಿ ನೀರಾವರಿ ತೊಗರಿ ಹಾಗೂ ಕೆಲವು ಪ್ರಗತಿಪರ ರೈತರು ನಾಟಿ ತೊಗರಿ ಕೂಡ ಬೆಳೆಯುವುದುಂಟು. ಒಣ ಪ್ರದೇಶದಲ್ಲಿ ಬೆಳೆದ ತೊಗರಿ ಹೆಚ್ಚಾಗಿ ಕಡ್ಡಿಯಿಂದ ಕೂಡಿರುತ್ತದೆ. ನೀರಾವರಿ ತೊಗರಿ ಹೆಚ್ಚಾಗಿ ಕೆಳಭಾಗದಿಂದ ದಪ್ಪವಾಗಿರುವುದರಿಂದ ಇಂತಹ ತೊಗರಿ ಕಟ್ಟಿಗೆಯನ್ನು ಹೆಚ್ಚಾಗಿ ಉರುವಲಿಗೆ ಉಪಯೋಗಿಸುತ್ತಾರೆ.

ತೊಗರಿ ಗಿಡದ ಮೇಲ್ಭಾಗ ಹೆಚ್ಚಾಗಿ ಸಣ್ಣದಾದ ಕಡ್ಡಿ ಇರುವುದರಿಂದ ಭಾಗಶಃ ರೈತರು ಜಮೀನಿನಲ್ಲಿಯೇ ಬಿಟ್ಟು ಹೋಗುತ್ತಾರೆ. ಇದಕ್ಕೆ ಗೊಳ್ಳಿ (ಗೊನ್ನೆ ಹುಳು) ಮಣ್ಣೇರಿಸಿ ಬಿಡುತ್ತದೆ. ಹೀಗೆ ಅದು ಮಣ್ಣಾಗಿ ಬಿಡುತ್ತದೆ. ಇದನ್ನು ಈ ಕೆಳಕಂಡಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಒಳ್ಳೆಯ ಕಾಂಪೋಸ್ಟ್‌ ರೀತಿಯಲ್ಲಿ ಮಾರ್ಪಾಡು ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಜಿಲ್ಲೆಯ ಎಲ್ಲ ರೈತರು ಈ ವೈಜ್ಞಾನಿಕ ಮಾಹಿತಿ ಅಳವಡಿಸಿಕೊಂಡು ಫೆಬ್ರವರಿಯಲ್ಲಿ ಅಳವಡಿಸಿಕೊಂಡಲ್ಲಿ ಜೂನ್‌ (ಬಿತ್ತುವ ಸಮಯಕ್ಕೆ ಸರಿಯಾಗಿ) ತಿಂಗಳಿಗೆ ಒಳ್ಳೆಯ ಕಾಂಪೋಸ್ಟ್‌ ಗೊಬ್ಬರ ಜಮೀನಿಗೆ ಉಪಯೋಗಿಸಲು ಉಪಕಾರಿಯಾಗುವುದೆಂದು ತಿಳಿಸಿದ್ದಾರೆ.

ಗೊಬ್ಬರ ತಯಾರಿಸುವ ವಿಧಾನ ಹೇಗೆ?
10 ಅಡಿ ಉದ್ದ, 6 ಅಡಿ ಅಗಲ, 4 ಅಡಿ ಅಳತೆಯ ಆಳದ ಕಾಂಪೋಸ್ಟ್‌ ಗುಂಡಿ ತಯಾರಿಸಬೇಕು. ಗುಂಡಿಯಲ್ಲಿ ಮೊದಲ 1 ಅಡಿ ಎತ್ತರದವರೆಗೆ ತೊಗರಿ ಕಟ್ಟಿಗೆ ಹಾಕಬೇಕು. ಸಗಣಿ ರಾಡಿ ತಯಾರಿಸಿ ಕಾಂಪೋಸ್ಟ್‌ ಕಲ್ಚರನ್ನು (1 ಟನ್‌ ತೊಗರಿ ಕಟ್ಟಿಗೆಗೆ 1 ಕಿ.ಗ್ರಾಂ. ಕಾಂಪೋಸ್ಟ್‌ ಕಲ್ಚರ್‌ ಬೇಕಾಗುತ್ತದೆ) ಬೆರೆಸಿ ಕಟ್ಟಿಗೆ ಮೇಲೆ ಸಿಂಪರಣೆ ಮಾಡಬೇಕು. ಹೀಗೆ 2-3 ಸ್ಥಿರದಲ್ಲಿ ಲೇಯರ್‌ ತುಂಬಿರಿ. ಗುಂಡಿ ತುಂಬಿದ ನಂತರ ಕಟ್ಟಿಗೆಯು 1 ಅಡಿ ಮೇಲೆ ಬರುವವರೆಗೂ ತುಂಬಿಸಬೇಕು.

ನಂತರ 4-5 ಕೊಡ ನೀರು ಸುರಿಯಬೇಕು. ತೊಗರಿ ಕಟ್ಟಿಗೆ ಮೇಲೆ 2-3 ಇಂಚು ಮಣ್ಣನ್ನು ಕಟ್ಟಿಗೆ ಮುಚ್ಚುವಂತೆ ಮಾಡಿ ಅಥವಾ ಕೆಸರಿನಿಂದ ಸವರಬೇಕು. (ಅವಶ್ಯವೆನಿಸಿದಲ್ಲಿ 15 ದಿನಕ್ಕೆ ನೀರಿನಿಂದ ಸಿಂಪಡಿಸುವುದು) 4 ತಿಂಗಳಲ್ಲಿ ಸಂಪದ್ಭರಿತ ಕಾಂಪೋಸ್ಟ್‌ ಗೊಬ್ಬರ ತಯಾರಾಗಿರುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೊರೊನಾ ಹರಡಲು 5 ಜಿ ಕಾರಣ ?

ಕೊರೊನಾ ಹರಡಲು 5 ಜಿ ಕಾರಣ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bidar-tdy-1

ಕೃಷಿ ಚಟುವಟಿಕೆ ಸಿದ್ಧತೆಗೆ ಗಮನಕೊಡಿ

ಕೋವಿಡ್ 19 ಹಾವಳಿ ತಡೆಗೆ ಮುಳ್ಳಿನ ಕಾಯಿ ತೋರಣ!

ಕೋವಿಡ್ 19 ಹಾವಳಿ ತಡೆಗೆ ಮುಳ್ಳಿನ ಕಾಯಿ ತೋರಣ!

ಬೀದರಲ್ಲಿ ಶೀಘ್ರ ರೆಡ್‌ ಅಲರ್ಟ್‌?

ಬೀದರಲ್ಲಿ ಶೀಘ್ರ ರೆಡ್‌ ಅಲರ್ಟ್‌?

ಲಾಕ್‌ಡೌನ್‌: ಗ್ರಾಹಕರ ಮನೆ ಬಾಗಿಲಿಗೆ ನಂದಿನಿ!

ಲಾಕ್‌ಡೌನ್‌: ಗ್ರಾಹಕರ ಮನೆ ಬಾಗಿಲಿಗೆ ನಂದಿನಿ!

14ರವರೆಗೆ ಮನೆಯಲ್ಲಿರಲು ಮನವಿ

14ರವರೆಗೆ ಮನೆಯಲ್ಲಿರಲು ಮನವಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಆರ್ಟ್ ಆಫ್ ಸಿಂಪಲ್ ಲಿವಿಂಗ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಪುಸ್ತಕ ಕೇಳಿಸುವ ಆಡಿಬಲ್‌

ಪುಸ್ತಕ ಕೇಳಿಸುವ ಆಡಿಬಲ್‌

ಬರುತಾವ ಕಾಲ!

ಬರುತಾವ ಕಾಲ!