Udayavni Special

ಯುಜಿಡಿ ಅಕ್ರಮ: ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧಾರ

ಪುರಸಭೆ ಸದಸ್ಯರ-ಅಧಿಕಾರಿಗಳ ವಿಶೇಷ ಸಭೆ

Team Udayavani, Mar 7, 2021, 5:45 PM IST

Bidar

ಹುಮನಾಬಾದ: ಯುಜಿಡಿ ಕಾಮಗಾರಿಯಲ್ಲಿ ಅಕ್ರಮ ಕುರಿತು “ಉದಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಶನಿವಾರ ವಿಶೇಷ ಸಭೆ ಕರೆದು ಯುಜಿಡಿ ಕಾಮಗಾರಿ ಕುರಿತು ಸುದೀರ್ಘ‌ ಚರ್ಚೆ ನಡೆಸಿದರು.

28 ಕೋಟಿ ರೂ. ವೆಚ್ಚದ ಯುಜಿಡಿ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು, ಈ ಕುರಿತು ಸಿಒಡಿ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಪುರಸಭೆ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿತು. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಬೆಂಗಳೂರು ಎಂ.ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿ, ಈವರೆಗೂ ಯುಜಿಡಿ ಕಾಮಗಾರಿ ನಾನು ಹಸ್ತಾಂತರ ಮಾಡಿಕೊಂಡಿಲ್ಲ. ಸೌಜನ್ಯದ ಭೇಟಿ ಸಂದರ್ಭದಲ್ಲಿ ತೆಗೆದ ಚಿತ್ರಗಳು ದುರ್ಬಳಕೆ ಮಾಡಿಕೊಂಡು ದಾಖಲೆಗಳಿಗೆ ಲಗತ್ತಿಸಲಾಗಿದೆ. ಅಲ್ಲದೆ ಕಾಮಗಾರಿ ಪೂರ್ಣಗೊಂಡಿರುವ ಕುರಿತು  ಯಾವುದೇ ದಾಖಲೆ ಕಚೇರಿಯಿಂದ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಾಯೋಗಿಕ ಪರೀಕ್ಷೆ ನಂತರ ಹಸ್ತಾಂತರ ಮಾಡಿಕೊಳ್ಳುವುದಾಗಿ ತಿಳಿಸಿದೆ. ಆದರೆ ಸಂಬಂಧಪಟ್ಟವರು ಎಲ್ಲ ದಾಖಲೆಗಳು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದರು.

ಪುರಸಭೆ ಸದಸ್ಯರಾದ ರಮೇಶ ಕಲ್ಲೂರ್‌, ಎಸ್‌.ಎ ಬಾಸಿದ್‌, ಅನಿಲ ಪಲ್ಲರಿ, ವೀರೇಶ ಸೀಗಿ, ಮುಕರಮ್‌ ಜಾ ಮಾತನಾಡಿ, 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಮುಖ್ಯಾಧಿಕಾರಿ ದಾಖಲೆಗೆ ಸಹಿ ಹಾಕಿದ ಕಾರಣಕ್ಕೆ ಕೊನೆಯ ಕಂತಿನ ಹಣ ಪಾವತಿಯಾಗಿದೆ. ಸಹಿ ಮಾಡುವಾಗ ಅರ್ಜಿಯ ತಲೆಬರಹದಲ್ಲಿ ಬರೆದಿರುವುದು ನೋಡಿಲ್ವಾ ಎಂದು ಪ್ರಶ್ನಿಸಿದರು. ನಿಮ್ಮ ಚಿತ್ರಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿರುವ ನೀವು ಸಂಬಂಧಪಟ್ಟವರ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದೀರಿ. ತಪ್ಪು ಮಾಹಿತಿ ನೀಡಿ ಸಹಿ ಪಡೆದುಕೊಂಡಿದ್ದಾರೆ ಎಂದಾದರೆ ಕಳೆದ 16 ತಿಂಗಳಿಂದ ಏನು ಮಾಡುತ್ತಿದ್ದೀರಿ? ಯಾವ ಕಾರಣಕ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. 2020ರಲ್ಲಿ ಕಾಮಗಾರಿ ನಿರ್ವಹಣೆಯ ಅವಧಿ ಪೂರ್ಣಗೊಂಡಿದೆ. ಸದ್ಯ ಯುಜಿಡಿ ಕಾಮಗಾರಿಗೂ ಗುತ್ತಿಗೆದಾರನಿಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಪುರಸಭೆಗೆ ಗುತ್ತಿಗೆದಾರ ಪತ್ರ ಬರೆದು ತಿಳಿಸಿದ್ದಾರೆ. ಹಾಗಾದರೆ 28 ಕೋಟಿ ಮುಖ್ಯಾಧಿಕಾರಿಯಿಂದ ವಸೂಲಿ ಮಾಡಬೇಕಾ? ಎಂದು ಪ್ರಶ್ನಿಸಿದರು.

ಯುಜಿಡಿ ಕಾಮಗಾರಿಯ ಜೆಇ ಪ್ರಕಾಶ ಮಾತನಾಡಿ, ಕಳೆದ 2019ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ, 2020ಕ್ಕೆ ನಿರ್ವಹಣೆ ಅವಧಿಯು ಅಗತ್ಯವಾಗಿದೆ. ಪುರಸಭೆಯವರು ಮನೆಗಳಿಗೆ ಸಂಪರ್ಕ ಕಲ್ಪಿಸಿ ಬಳಸಬೇಕಿತ್ತು. ಕಾಮಗಾರಿ ಮಾಡದಿದ್ದರೆ ಹೇಗೆ ಗುತ್ತೆದಾರನಿಗೆ ಹಣ ಪಾವತಿ ಆಯ್ತು ಎಂದು ಮರು ಪ್ರಶ್ನಿಸಿದರು. ಕಾಮಗಾರಿ ಪೂರ್ಣಗೊಂಡ ಸಂದರ್ಭದಲ್ಲಿ ಪುರಸಭೆಯವರು ಎಲ್ಲವನ್ನೂ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕಿತ್ತು ಎಂದು ವಾದಿಸಿದರು. ಇದಕ್ಕೆ ಆಕ್ರೋಶಗೊಂಡ ಸದಸ್ಯರು ಮುಖ್ಯಾಧಿಕಾರಿ ಹಾಗೂ ತಾವುಗಳು ಸೇರಿ ಅಕ್ರಮ ನಡೆಸಿದ್ದೀರಿ. ತಪ್ಪು ಮುಚ್ಚಿಹಾಕಿಕೊಳ್ಳಲು

ಸುಳ್ಳು ಮಾಹಿತಿ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳು ವಿರುದ್ಧ ಪ್ರಕರಣ ದಾಖಲಾಗಬೇಕು. ಅಧಿಕಾರಿಗಳಿಂದ ಹಾಗೂ ಗುತ್ತಿಗೆದಾರನಿಂದ 28 ಕೋಟಿ ರೂ. ಹಣ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ನಡೆದ ಚರ್ಚೆಗಳ ನಡಾವಳಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಮೂಲಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಪರವಾನಗಿ ನೀಡಿದರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ತಿಳಿಸಿದರು.

ಟಾಪ್ ನ್ಯೂಸ್

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ

ಲಾಕ್‌ಡೌನ್‌ ಮದ್ದಲ್ಲ : ಪರೀಕ್ಷೆ, ಲಸಿಕೆ ಹೆಚ್ಚಿಸಿ: ತಜ್ಞರು, ವೈದ್ಯರ ಸಲಹೆ

ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ನಮ್ಮ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಸಾರಿಗೆ ನೌಕರರ ಮುಷ್ಕರ: ಯುಗಾದಿ ಬಳಿಕ ಸಂಧಾನ?

ಸಾರಿಗೆ ನೌಕರರ ಮುಷ್ಕರ: ಯುಗಾದಿ ಬಳಿಕ ಸಂಧಾನ?

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.