Udayavni Special

ಬೀದರನಲ್ಲಿ ಹೆಚ್ಚುತ್ತಿದೆ ಕೊರೊನಾರ್ಭಟ!

ಮಾ. 22ರವರೆಗೆ ಕೋರ್ಟ್‌ ಎಲ್ಲ ಶ್ರೇಣಿ ನ್ಯಾಯಾಲಯಗಳಲ್ಲಿ ಕಲಾಪಗಳನ್ನು ಬಂದ್‌ ಮಾಡಲಾಗಿದೆ.

Team Udayavani, Mar 20, 2021, 6:28 PM IST

Bidar

ಬೀದರ: ಗಡಿನಾಡು ಬೀದರನಲ್ಲಿ ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಹೆಮ್ಮಾರಿ ಕೊರೊನಾ ತನ್ನ ಆರ್ಭಟ ಮತ್ತೆ ಮುಂದುವರೆಸಿದೆ. ಹೊಸದಾಗಿ ಶುಕ್ರವಾರ ಮತ್ತೆ 40 ಹೊಸ ಪಾಸಿಟಿವ್‌ ಪ್ರಕರಣ ದೃಢಪಟ್ಟಿದ್ದರೆ, ಓರ್ವ ವೃದ್ಧೆ ಸಾವು ಸಂಭವಿಸಿದೆ. ಕೇವಲ ಆರು ದಿನಗಳಲ್ಲಿ 250 ಸೋಂಕಿತರು ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ತನ್ನ ಕೆನ್ನಾಲಿಗೆ ಚಾಚುತ್ತಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೀದರ ಜಿಲ್ಲೆಗೂ ನಿಧಾನವಾಗಿ ಹಬ್ಬುತ್ತಿದೆ ಎಂಬ ಆತಂಕ ಬಿಸಿಲೂರಿನ ಜನರನ್ನು ಕಾಡಲಾರಂಭಿಸಿದೆ. ಸೋಂಕಿತರ ಕೇಸ್ ಗಳು ಕುಸಿಯುತ್ತ ಬಂದಿದ್ದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದರು. ಇದರಿಂದ ಸಾಮಾನ್ಯ ಜನಜೀವನ ಮೊದಲಿನಂತೆ ಯಥಾಸ್ಥಿತಿಗೆ ತಲುಪುತ್ತಿತ್ತು. ಆದರೆ, ಈಗ ಮತ್ತೂಮ್ಮೆ ಕೋವಿಡ್‌ ಕಂಟಕವಾಗಿ ಪರಿಣಮಿಸುತ್ತಿದ್ದು, ಎರಡು ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದೆ.

ಸೋಂಕಿಗೆ ಗುರುವಾರ 47 ವರ್ಷದ ನ್ಯಾಯವಾದಿ ಮೃತಪಟ್ಟಿದ್ದರೆ, ಶುಕ್ರವಾರ 75 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಸಾರಿ ಹಿನ್ನೆಲೆ ಹೊಂದಿದ್ದ ಈಕೆ ಮಾ. 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 14ರಿಂದ ಆರು ದಿನಗಳಲ್ಲಿ 250 ಪಾಸಿಟಿವ್‌ ಕೇಸ್ ವರದಿಯಾಗಿವೆ. ಮಾ. 14ರಂದು 36, 15ಕ್ಕೆ 27, 16ಕ್ಕೆ 52, 17ಕ್ಕೆ 55 ಮತ್ತು 18ಕ್ಕೆ 41 ಸೋಂಕಿತರು ಪತ್ತೆಯಾಗಿದ್ದಾರೆ.

ನ್ಯಾಯಾಧೀಶರು ಸೇರಿ ಸಿಬ್ಬಂದಿಗೆ ಸೋಂಕು ತಗುಲಿರುವುದು ಮತ್ತು ನ್ಯಾಯವಾದಿ ಸಾವು ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಪರಿಸರವನ್ನು ಕಂಟೈನ್ಮೆಂಟ್‌ ಝೋನ್‌ ಎಂದು ಘೋಷಿಸಲಾಗಿದೆ. ಮಾ. 22ರವರೆಗೆ ಕೋರ್ಟ್‌ ಎಲ್ಲ ಶ್ರೇಣಿ ನ್ಯಾಯಾಲಯಗಳಲ್ಲಿ ಕಲಾಪಗಳನ್ನು ಬಂದ್‌ ಮಾಡಲಾಗಿದೆ. ಅಷ್ಟೇ ಅಲ್ಲದೆ ನಗರಸಭೆ ಸಿಬ್ಬಂದಿಗೆ ಪಾಸಿಟಿವ್‌ ಬಂದಿರುವುದರಿಂದ ಇಡೀ ಕಚೇರಿಯನ್ನು ಸೀಲ್‌ಡೌನ್‌ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ. ಕಚೇರಿ ಮುಖ್ಯ ದ್ವಾರದದಲ್ಲಿ ಸೀಲ್‌ಡೌನ್‌ ಫಲಕ ಹಾಕಲಾಗಿದೆ. ಸೋಂಕಿತರ ಸಂಪರ್ಕ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರದವರೆಗೆ ಕಚೇರಿ ಸೀಲ್‌ ಡೌನ್‌ ಇರಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ.

ಬೀದರ ಜಿಲ್ಲೆಯಲ್ಲಿ ಶುಕ್ರವಾರ 40 ಹೊಸ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,938ಕ್ಕೆ ತಲುಪಿದೆ. ವೃದ್ಧ ಮಹಿಳೆಯ ಸಾವಿನೊಂದಿಗೆ ಮೃತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಈವರೆಗೆ 7,537 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಇನ್ನೂ 220 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

ಟಾಪ್ ನ್ಯೂಸ್

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಹೆಚ್ಚುತ್ತಿರುವ ಕೋವಿಡ್ ಎರಡನೇ ಅಲೆ : ಜಿ.ಪಂ., ತಾ.ಪಂ. ಚುನಾವಣೆ ಮುಂದೂಡಿಕೆ?

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಕರಾವಳಿ ಭಾಗದಲ್ಲಿ ಸಿಡಿಲು ಸಹಿತ ಮಳೆ, ಕೆಲವೆಡೆ ಹಾನಿ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

್ಗಹ್ಗ

ಕೋವಿಡ್‌ ಹೆಚ್ಚಳ ; ಮುಂಜಾಗ್ರತೆಗೆ ಸಚಿವ ಚವ್ಹಾಣ ಮನವಿ

ಜಹಹಹಗ

ಕರ್ತವ್ಯದಲ್ಲಿದ್ದ ಅಂಗರಕ್ಷಕ -ಚಾಲಕರಿಂದ ಮತದಾನ

Mane

ಶಾಸಕ ರಾಜಶೇಖರ ಮನೆ ಎದುರು ನೌಕರರ ಪ್ರತಿಭಟನೆ

Channabasav

22ಕ್ಕೆ ಭಾಲ್ಕಿಯಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಪುಣ್ಯಸ್ಮರಣೆ

ಪಕ್ಷದ ಶಿಸ್ತು ಉಲ್ಲಂಘನೆ : ಬಿಜೆಪಿಯಿಂದ ಮಾಜಿ ಶಾಸಕ ಖೂಬಾ ಉಚ್ಚಾಟನೆ

ಪಕ್ಷದ ಶಿಸ್ತು ಉಲ್ಲಂಘನೆ : ಬಿಜೆಪಿಯಿಂದ ಮಾಜಿ ಶಾಸಕ ಖೂಬಾ ಉಚ್ಚಾಟನೆ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ನೆರೆ ಬಂದರೆ ಪೇಟೆಯಲ್ಲೇ ದೋಣಿ ಪ್ರವಾಸೋದ್ಯಮ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಪೆರಂಪಳ್ಳಿ ಹದಗೆಟ್ಟ ರಸ್ತೆಯಲ್ಲಿ ಸಂಚಾರ ಕಷ್ಟ!

ಈಗಲೇ ಸಮುದ್ರವನ್ನು ಬಯಸಬೇಕು

ಈಗಲೇ ಸಮುದ್ರವನ್ನು ಬಯಸಬೇಕು

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

“ಡಿವೈಡರ್‌ ಕ್ರಾಸಿಂಗ್‌, ಸರ್ವೀಸ್‌ ರಸ್ತೆಗಾಗಿ ಹೋರಾಟ’

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್‌ಡೌನ್‌ ಸಂದರ್ಭದಲ್ಲಿ ಮೂಡಿದ ಯೋಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.