ಬೀದರ್ ಜಿಲ್ಲೆಯಲ್ಲಿ ಭೂಕಂಪ ಸಂಭವಿಸುವುದಿಲ್ಲ : ವಿಜ್ಞಾನಿ ಡಾ। ರಮೇಶ


Team Udayavani, Sep 28, 2021, 3:05 PM IST

bidar news

ಹುಮನಾಬಾದ: ಬೀದರ್ ಜಿಲ್ಲೆಯಲ್ಲಿ ಈವರೆಗೂ ಭೂಕಂಪ ಸಂಭವಿಸಿಲ್ಲ ಮುಂದೆ ಕೂಡ ಸಂಭವಿಸುವುದು ಬಹುತೇಕ ಅನುಮಾನ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವಿಜ್ಞಾನಿ  ಡಾ। ರಮೇಶ್ ಎಲ್ ದಿಕ್ಪಾಲ್ ಹೇಳಿದರು.

ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಭೂಮಿಯಲ್ಲಿ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಮಾತನಾಡಿದು.

ಹುಣಸನಾಳ ಗ್ರಾಮದಲ್ಲಿ ಕೇಳಿ ಬಂದ ಶಬ್ದಗಳು ಭೂಕಂಪಕ್ಕೆ ಸಂಬಂಧಪಟ್ಟಿಲ್ಲ. ಅತಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಇಂತಹ ಶಬ್ದಗಳು ಕೇಳಿಬರುವುದು ಸಾಮಾನ್ಯ ಆದರೆ, ಅದು ಭೂಕಂಪ ಎಂದು ತಿಳಿದುಕೊಳ್ಳುವುದು ತಪ್ಪಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಎರಡು ತರಹದ ಕಲ್ಲುಗಳಿಂದ ಕೂಡಿದ ಭೂಮಿ ಇದಾಗಿದೆ. ಎಲ್ಲಿ ಭೂಕಂಪ ಸಂಭವಿಸುವುದಿಲ್ಲ.

ಹಿಂದೆ ನೆರೆ ಮಹಾರಾಷ್ಟ್ರದಲ್ಲಿ ಭೂಕಂಪ ಸಂಭವಿಸಿ ಅನೇಕ ಅನಾಹುತ ಸಂಭವಿಸಿದ್ದ ಸಂದರ್ಭದಲ್ಲಿ  ಕೂಡ ಬೀದರ್ ಜಿಲ್ಲೆಯಲ್ಲಿ ಭೂಕಂಪನದ ಅನುಭವ ಆಗಿಲ್ಲ. ರಾಜ್ಯದ 14 ಕಡೆಗಳಲ್ಲಿ ಭೂಕಂಪನ ಯಂತ್ರಗಳು ಅಳವಡಿಸಿದ್ದು, ರಾಜ್ಯದ ಯಾವುದೇ ಮೂಲೆಯಲ್ಲಿ ಭೂಕಂಪ ಸಂಭವಿಸಿದ ಕ್ಷಣದಲ್ಲಿ ಮಾಹಿತಿ ಲಭ್ಯವಾಗುತ್ತದೆ. ಗ್ರಾಮದಲ್ಲಿನ ಮಾಹಿತಿ ಲಭ್ಯವಾದ ನಂತರ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಯಾವುದೆ ಭೂಕಂಪದ ವರದಿಗಳು ಕಂಡು ಬಂದಿಲ್ಲ. ಗ್ರಾಮಸ್ಥರು ಯಾವುದೆ ಕಾರಣಕ್ಕೂ ಆತಂಕ ಪಡಬಾರದು. ನೆಮ್ಮದಿಯಿಂದ ಜೀವನ ನಡೆಸಬೇಕು. ಆ ಶಬ್ದಗಳಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಓಬಣ್ಣ ನಾಯಕರ ಸಮಾಧಿ ನಾಶ: ಕ್ರಮಕ್ಕೆ ಆಗ್ರಹ

ಈ ಕುರಿತು ಗ್ರಾಮದ ಜನರು ಅನೇಕ ಪ್ರಶ್ನೆಗಳು ಕೇಳುವ ಮೂಲಕ ವಿಜ್ಞಾನಿಗಳಿಂದ ಉತ್ತರ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು. ಯಾವುದೇ ಸಮಸ್ಯೆ ಕಂಡುಬಂದರೆ ಹೆಚ್ಚಿನ ಪರಿಶೀಲನೆಗೆ ಅಧಿಕಾರಗಳ ತಂಡ ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ ನಾಗಯ್ಯ ಹಿರೇಮಠ, ಪಶುಸಂಗೋಪನೆ ಸಹಾಯಕ ನಿದೇಶಕ ಡಾ।  ಗೋವಿಂದ, ಜಿಲ್ಲಾ ವಿಪ್ಪತ್ತು ನಿರ್ವಾಹಣಾಧಿಕಾರಿ ಸಂದೀಪ ಪಾಟೀಲ್,  ಗ್ರಾಮ ಪಂಚಾಯತ ಅಧ್ಯಕ್ಷ ದತ್ತು ಕಾಳೆ,  ಬಿಜೆಪಿ ಮುಖಂಡ ಅಭಿಮನ್ಯು ನಿರಗುಂಡೆ, ಜ್ಞಾನೇಶ್ವರ ಭೋಸ್ಲೆ, ರಂಜಿತ ಮಾನಕರೆ ಸೇರಿದಂತೆ ಅನೇಕ ಗ್ರಾಮಸ್ಥರು  ಇದ್ದರು.

ಟಾಪ್ ನ್ಯೂಸ್

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

ಇಂದು ಬಿಸಿಸಿಐ 90ನೇ ವಾರ್ಷಿಕ ಮಹಾಸಭೆ

ಇಂದು ಬಿಸಿಸಿಐ 90ನೇ ವಾರ್ಷಿಕ ಮಹಾಸಭೆ

ಮರವೂರು: ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರೀಕ್ಷೆ ಹೊಣೆ

ಮರವೂರು: ಮಾಲಿನ್ಯ ನಿಯಂತ್ರಣ ಮಂಡಳಿಗೆ ಪರೀಕ್ಷೆ ಹೊಣೆ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲ

ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌: ಸೋತರೂ ಸಿಂಧು ಉಪಾಂತ್ಯಕ್ಕೆ ಅಡ್ಡಿಯಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sa2

ಕಾಂಗ್ರೆಸ್‌ ಸೋಲಿಸಿದರೆ ಆತ್ಮಕ್ಕೆ ದ್ರೋಹ ಬಗೆದಂತೆ : ಡಾ.ಮಲ್ಲಿಕಾರ್ಜುನ ಖರ್ಗೆ

19election

ಒಳ್ಳೆಯ ಗುಣವುಳ್ಳ ವ್ಯಕ್ತಿಗೆ ಮತ ನೀಡಿ: ಬೀರನಕಲ್‌

18vote

ಅಭಿವೃದ್ದಿಗಾಗಿ ಪ್ರಕಾಶ ಖಂಡ್ರೆ ಗೆಲ್ಲಿಸಿ: ಚವ್ಹಾಣ

17protest

ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

ಬಿಟ್ಟೂ ಬಿಟ್ಟೂ ಸುರಿದ ಮಳೆಗೆ ಕೈಕೊಟ್ತು ಬೆಳೆ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಕನಿಷ್ಠ ಬೆಂಬಲ ಬೆಲೆಗೆ ಕಾನೂನು: ಹಾಗೆಂದರೇನು, ಜಾರಿ ಹೇಗೆ?

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಬದುಕಿಗೆ ಬಾಧಕವಾಗದೆ ನಿರ್ಬಂಧ ಜಾರಿಗೆ ಬರಲಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

ಪಠ್ಯ ಕಡಿತದಿಂದ ಪರೀಕ್ಷಾ ಸಿದ್ಧತೆಗೆ ಅನುಕೂಲ; ಪುನರಾವರ್ತನೆಗೆ ಎರಡು ತಿಂಗಳು ಕಾಲಾವಕಾಶ

ಬಿರ್ದ್‌ದ ಕಂಬುಲ-ವೀರ ಕಂಬಳ ತುಳು ಕನ್ನಡ ಚಲನಚಿತ್ರಗಳಿಗೆ ಮುಹೂರ್ತ

ಬಿರ್ದ್‌ದ ಕಂಬುಲ-ವೀರ ಕಂಬಳ ತುಳು ಕನ್ನಡ ಚಲನಚಿತ್ರಗಳಿಗೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.