Udayavni Special

ಕ್ಲಿನಿಕ್‌ ತೆರೆಯದಿದ್ರೆ ಪರವಾನಗಿ ರದ್ದು


Team Udayavani, Mar 30, 2020, 12:41 PM IST

ಕ್ಲಿನಿಕ್‌ ತೆರೆಯದಿದ್ರೆ ಪರವಾನಗಿ ರದ್ದು

ಬೀದರ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಕ್ಲಿನಿಕ್‌ಗಳು ಮುಚ್ಚಿರುವುದಾಗಿ ತಿಳಿದು ಬಂದಿದ್ದು, ಕೂಡಲೇ ಎಲ್ಲ ಖಾಸಗಿ ಕ್ಲಿನಿಕ್‌ಗಳು ತೆರೆದು ಸಾಮಾನ್ಯ ಲಕ್ಷಣ ಕಂಡು ಬರುವ ರೋಗಿಗಳಿಗೆ ಚಿಕಿತ್ಸೆ ಒದಗಿಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್‌.ಆರ್‌.ಮಹಾದೇವ್‌ ಡಿಎಚ್‌ಒಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರರು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಕೋವಿಡ್ 19 ವೈರಾಣು ತೀವ್ರ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ವಹಿಸುವ ನಿಟ್ಟಿನಲ್ಲಿ ಜನತೆಗೆ ಈಗ ಸಕಾಲಕ್ಕೆ ಚಿಕಿತ್ಸೆ ಕೊಡಬೇಕಿದೆ. ಹೀಗೆ ತಿಳಿಸಿದಾಗ್ಯೂ ಖಾಸಗಿ ಆಸ್ಪತ್ರೆಗಳು ಮುಚ್ಚಿದಲ್ಲಿ ಅಂತಹ ಖಾಸಗಿ ಕ್ಲಿನಿಕ್‌ಗಳ ಪರವಾನಗಿ ರದ್ದುಪಡಿಸಲು ಕ್ರಮ ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.

ತಾಲೂಕು ವ್ಯಾಪ್ತಿಯಲ್ಲಿ ಇರುವ ಕಿರಾಣಿ, ತರಕಾರಿ ಅಂಗಡಿಗಳಲ್ಲಿ ದಿನಸಿ ಸಾಮಗ್ರಿಗಳನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆ ನೀಡುತ್ತಿರುವುದಾಗಿ ದೂರುಗಳು ಕೇಳಿ ಬಂದಿದ್ದು, ಅಂತಹ ಅಂಗಡಿಗಳನ್ನು ಗುರುತಿಸಿ ಅವುಗಳನ್ನು ಮುಚ್ಚಿ ಕಾನೂನು ಕ್ರಮ ವಹಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿದರು.

ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ರಸ್ತೆ ಮೇಲೆ ಮುಳ್ಳು ಮತ್ತು ಇನ್ನಿತರ ವಸ್ತುಗಳನ್ನು ಹಾಕಿ ರಸ್ತೆ ಬಂದ್‌ ಮಾಡಿರುವುದು ಜತೆಗೆ ಗ್ರಾಮಸ್ಥರು ಗುಂಪಾಗಿ ಸೇರುವುದು ಕಂಡು ಬರುತ್ತಿದೆ. ಅಧಿಕಾರಿಗಳ ವಾಹನಗಳನ್ನು ಗ್ರಾಮದೊಳಗಡೆ ಬಿಡುತ್ತಿಲ್ಲ. ಇದರಿಂದ ಕರ್ತವ್ಯನಿರತ ಅಧಿಕಾರಿಗಳಿಗೆ ತೊಂದರೆಯಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದನ್ನು ನಿರ್ಬಂಧಿ ಸಬೇಕು ಎಂದು ಎಡಿಸಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಚೆಕ್‌ ಪೋಸ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಕಾರ್ಯನಿರತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡುಬೇಕು. ಇದಕ್ಕಾಗಿ ಚೆಕ್‌ಪೋಸ್ಟ್‌ ಹತ್ತಿರ ಇರುವ ವಸತಿ ನಿಲಯಗಳು ಮತ್ತು ಅಂಗನವಾಡಿಗಳನ್ನು ಗುರುತಿಸಿ ಸಿಇಒಗೆ ಮಾಹಿತಿ ನೀಡಿ, ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದರು.

ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸಿ ಅಕ್ಷಯ್‌ ಶ್ರೀಧರ್‌, ಡಿಎಚ್‌ಒಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್‌ ನಿರ್ದೇಶಕ ಡಾ.ಶಿವಕುಮಾರ, ಡಿಯುಸಿ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟಪ್ಪಗೋಳ, ಪೌರಾಯುಕ್ತ ಬಸಪ್ಪ, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ, ಇಂದುಮತಿ ಪಾಟೀಲ, ಜಿಲ್ಲಾ ಕಣ್ಗಾವಲು ಘಟಕದ ಡಾ.ಕೃಷ್ಣಾರೆಡ್ಡಿ ಹಾಗೂ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ವಲಸೆ ಕಾರ್ಮಿಕರ ಹಿತ ಕಾಯದ ಕೇಂದ್ರ: ಖರ್ಗೆ

ವಲಸೆ ಕಾರ್ಮಿಕರ ಹಿತ ಕಾಯದ ಕೇಂದ್ರ: ಖರ್ಗೆ

ಜೂನ್ 19ರಂದು ರಾಜ್ಯಸಭೆ 18 ಸ್ಥಾನಗಳಿಗೆ ಚುನಾವಣೆ, ಸಂಜೆ ಮತಎಣಿಕೆ: ಆಯೋಗ

ಜೂನ್ 19ರಂದು ರಾಜ್ಯಸಭೆ 18 ಸ್ಥಾನಗಳಿಗೆ ಚುನಾವಣೆ, ಸಂಜೆ ಮತಎಣಿಕೆ: ಆಯೋಗ

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

ಗಡಿ ಜಿಲ್ಲೆ ಬೀದರ್ ನಲ್ಲಿ 2 ಕೋವಿಡ್ ಸೋಂಕು ದೃಢ

01-June-08

ಭಾಲ್ಕಿ: 9 ಜನ ಕಾರ್ಮಿಕರಲ್ಲಿ ಕೋವಿಡ್ ಸೋಂಕು ಪತ್ತೆ

7442 ಮಂದಿ ವರದಿ ಬಾಕಿ

7442 ಮಂದಿ ವರದಿ ಬಾಕಿ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಗೆ ಐದನೇ ಬಲಿ

31-May-23

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಸನ್ನದ್ಧರಾಗಿ: ರುದನೂರ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಅಸಮಾಧಾನ ಬಹಿರಂಗ ಚರ್ಚೆ ಬೇಡ: ಶೆಟ್ಟರ್‌

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಸರಕಾರದ ಅನುಮತಿ ಪಡೆದು ‘ಪ್ರತಿಜ್ಞಾ’ ಕಾರ್ಯಕ್ರಮ: ಡಿಕೆಶಿ

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ಮಳೆ ಅನಾಹುತ ತಡೆಗೆ ವಿಶೇಷ ತಂಡ ರಚನೆ; ಆರ್‌. ಅಶೋಕ್‌

ವಲಸೆ ಕಾರ್ಮಿಕರ ಹಿತ ಕಾಯದ ಕೇಂದ್ರ: ಖರ್ಗೆ

ವಲಸೆ ಕಾರ್ಮಿಕರ ಹಿತ ಕಾಯದ ಕೇಂದ್ರ: ಖರ್ಗೆ

ಕಾರು ಢಿಕ್ಕಿ : ಪಾದಚಾರಿ ಸಾವು

ಕಾರು ಢಿಕ್ಕಿ : ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.