ಸಿಡಿ ಪ್ರಕರಣ: ಬಾಲ್ಕಿಯಲ್ಲಿ ಯುವಕನನ್ನು ವಶಕ್ಕೆ ಪಡೆದ ಎಸ್ಐಟಿ; ಸಿಡಿಗಳು ಪತ್ತೆ!
Team Udayavani, Mar 13, 2021, 1:25 PM IST
ಬೀದರ್: ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.
ಭಾಲ್ಕಿಯ ವಾಲಿ ಬಡಾವಣೆಯ ಯುವಕನನ್ನು ಎಸ್ಐಟಿ ಅಧಿಕಾರಿಗಳ ತಂಡ ಶುಕ್ರವಾರ ಮಧ್ಯರಾತ್ರಿ ವಶಕ್ಕೆ ಪಡೆದಿದ್ದು, ಯುವಕ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಗೆಳೆಯನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಿಡಿ ಪ್ರಕರಣ: ಐವರು ಟಿವಿ ಸಿಬಂದಿ ವಶಕ್ಕೆ
ಇನ್ನೂ ಯುವಕನ ಮನೆ ಮೇಲೆ ದಾಳಿ ಮಾಡಿರುವ ಎಸ್ಐಟಿ ತಂಡಕ್ಕೆ ಯುವಕನಿಗೆ ಸೇರಿದ ಲ್ಯಾಪ್ ಟಾಪ್ ಮತ್ತು ಸಿಡಿಗಳು ಪತ್ತೆಯಾಗಿವೆ ಎಂದೆನ್ನಲಾಗಿದೆ.
ಇದನ್ನೂ ಓದಿ: ಗೆದ್ದಾಗ ಜೈ ಶ್ರೀರಾಮ್ ಬದಲು ಅಲ್ಲಾಹು ಅಕ್ಬರ್ ಕೂಗಿದ್ದರೆ ಸಂಗಮೇಶ್ ಗೆ ಸಮಾಧಾನ ಆಗ್ತಿತ್ತೇ?