22ಕ್ಕೆ ಭಾಲ್ಕಿಯಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಪುಣ್ಯಸ್ಮರಣೆ
ಕೋವಿಡ್ ಮಾರ್ಗಸೂಚಿಯನ್ವಯ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಿಸಲಾಗುವುದು
Team Udayavani, Apr 17, 2021, 6:29 PM IST
ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಡಾ| ಚನ್ನಬಸವ ಪಟ್ಟದ್ದೇವರ 22ನೇ ಪುಣ್ಯಸ್ಮರಣೆ ಮತ್ತು ವಚನ ಜಾತ್ರೆ-2021 ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖರು, ಭಕ್ತರು ಅಭಿಪ್ರಾಯವ್ಯಕ್ತಪಡಿಸಿ, ಡಾ| ಚನ್ನಬಸವ ಪಟ್ಟದ್ದೇವರು ಜೀವಿತಾವಧಿಯಲ್ಲಿ ಅನೇಕ ವಿಧಾಯಕ ಕಾರ್ಯಗಳ ಮೂಲಕ ಈ ಭಾಗಕ್ಕೆ ಕೊಡುಗೆ ನೀಡಿದ್ದಾರೆ. ಮಠದಿಂದ ಕಳೆದ 20
ವರ್ಷಗಳಿಂದ ಪಟ್ಟದ್ದೇವರ ಜಯಂತ್ಯುತ್ಸವ, ಪುಣ್ಯಸ್ಮರಣೆ ನೆಪದಲ್ಲಿ ಅವರ ಚಿಂತನೆ, ಆದರ್ಶ ಭಕ್ತ ಸಮೂಹಕ್ಕೆ ಪರಿಚಯಿಸುವ ಕೆಲಸ ಮಾಡಿಕೊಡಲಾಗುತ್ತಿದೆ.
ಆದರೆ, ಕಳೆದ ವರ್ಷ ಕೋವಿಡ್ ಲಾಕ್‌ಡೌನ್ ಪ್ರಯುಕ್ತ ಪಟ್ಟದ್ದೇವರ ಪುಣ್ಯಸ್ಮರಣೆ ರದ್ದುಗೊಂಡಿತು. ಪ್ರಸ್ತುತ ಪಟ್ಟದ್ದೇವರ ಸ್ಮರಣೋತ್ಸವ ರದ್ದುಪಡಿಸುವುದು ಬೇಡ. ಕೋವಿಡ್ ನಿಯಮದಂತೆ ಸರಳವಾಗಿ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಣೆ ಮಾಡುವಂತೆ ಮನವಿ ಮಾಡಿದರು.
ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಡಾ| ಚನ್ನಬಸವ ಪಟ್ಟದ್ದೇವರು ಈ ಭಾಗದ ದಿವ್ಯ ಚೇತನ. ಅಂಥವರ ಪುಣ್ಯಸ್ಮರಣೆ ಯಾವುದೇ ಕಾರಣಕ್ಕೂ ರದ್ದುಪಡಿಸುವುದಿಲ್ಲ. ಭಕ್ತರ ಅಭಿಪ್ರಾಯದಂತೆ ಕೋವಿಡ್ ಮಾರ್ಗಸೂಚಿಯನ್ವಯ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದರು. ಏ.22ರಂದು ಬೆಳಗ್ಗೆ 6 ಗಂಟೆಗೆ ಪಟ್ಟಣದಲ್ಲಿ ಪ್ರಭಾತ ಪೇರಿ ಮತ್ತು ಸಂಜೆ 7ಕ್ಕೆ ಚನ್ನಬಸವಾಶ್ರಮ ಪರಿಸರದ ಬಯಲು ಪ್ರದೇಶದಲ್ಲಿ ವೇದಿಕೆ ಕಾರ್ಯಕ್ರಮ
ನಡೆಸಲಾಗುವುದು ಎಂದು ತಿಳಿಸಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪಟ್ಟದ್ದೇವರ ಪುಣ್ಯಸ್ಮರಣೆ ಕಳೆದ 20 ವರ್ಷಗಳಿಂದ ಪಟ್ಟಣದಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಪ್ರಸ್ತುತ ವರ್ಷ ಕೋವಿಡ್ ಸೋಂಕು ಹರಡುವಿಕೆ ವೇಗದ ಗತಿಯಲ್ಲಿ ಸಾಗುತ್ತಿದ್ದು, ಆತಂಕ ಎದುರಾಗಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತೆ ವಹಿಸಿ ಸರಳವಾಗಿ ಪಟ್ಟದ್ದೇವರ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ, ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರಾಚಾರ್ಯ ಅಶೋಕ ರಾಜೋಳೆ ಮಹಾನಂದಾ ಮಾಶೆಟ್ಟೆ ಸೇರಿ ಮುಂತಾದವರು ಶ್ರೀಗಳ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.
ಈ ವೇಳೆ ಸಂತೋಷ ಬಿಜಿ ಪಾಟೀಲ್, ಸೋಮನಾಥಪ್ಪ ಅಷ್ಟೂರೆ, ಶರಣಪ್ಪ ಬಿರಾದಾರ, ಗಣಪತಿ ಬೋಚರೆ, ವಿಜಯಕುಮಾರ ಪಾಟೀಲ್, ಶಿವಪುತ್ರ ಕಲ್ಯಾಣೆ, ಸುರೇಶ ಪುರವಂತ, ಬಾಬು ಬೆಲ್ದಾಳ, ರೇಖಾಬಾಯಿ ಅಷ್ಟೂರೆ, ಡಾ| ಎಂ. ಮಕು¤ಂಬಿ ಸೇರಿದಂತೆ ಇತರರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಟ್ಲ: ಅಕ್ರಮವಾಗಿ ಮಾದಕ ವಸ್ತು ಸಾಗಾಟ; ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ ಗಳ ಬಂಧನ
ಮಳೆಗಾಲ; ಶೀತ -ಕೆಮ್ಮಿಗೆ ಈರುಳ್ಳಿಯೇ ಮದ್ದು
ಶೀಘ್ರವೇ BJP ಸೇರ್ಪಡೆ; ಕ್ಯಾ.ಅಮರೀಂದರ್ ಸಿಂಗ್ NDA ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?
ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು
ಉದಯವಾಣಿ ವರದಿಗಾರ ಸಿ.ವೈ.ಮೆಣಶಿನಕಾಯಿರಿಗೆ ಪ್ರಜಾಭೂಷಣ ಪ್ರಶಸ್ತಿ