Udayavni Special

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷಗಳಿಗಿಂತ ವ್ಯಕ್ತಿಯ ಪ್ರಭಾವ ಮೂಲಕ ಚುನಾವಣೆ ನಡೆದಿದೆ.

Team Udayavani, Jan 19, 2021, 6:13 PM IST

ಸೈದಾಪುರ ಗ್ರಾಮ ಪಂಚಾಯತ್‌ ಅಧಿಕಾರಕ್ಕೆ ಪೈಪೋಟಿ

ಸೈದಾಪುರ: ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ನೂತನ ಸದಸ್ಯರು ಅಧ್ಯಕ್ಷ ಗದ್ದುಗೆಗಾಗಿ ತೆರೆಮರೆಯ ಕಸರತ್ತು ಪ್ರಾರಂಭಿಸಿದ್ದಾರೆ. ಒಟ್ಟು 25 ಗ್ರಾಪಂ ಸ್ಥಾನಗಳು ಇದ್ದು, ಚುನಾವಣೆಯಲ್ಲಿ ಪಟ್ಟಣದ 9 ಸದಸ್ಯರು, ಸೈದಾಪುರ ಗ್ರಾಮದ 5 ಸದಸ್ಯರು, ಬಾಲಛೆಡ್‌ 6, ಕ್ಯಾತ್ನಾಳ್‌ 2, ರಾಚನಹಳ್ಳಿ, ರಾಂಪೂರ ಮತ್ತು ಶಟ್ಟಿಹಳ್ಳಿಯಿಂದ ತಲಾ ಓರ್ವ ಸದಸ್ಯರು ಗೆಲುವು ಸಾಧಿಸಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮತ್ತು ಉಪಾಧ್ಯಕ್ಷ ಎಸ್‌ಟಿ ಮಹಿಳೆ ಮೀಸಲಾತಿ ಪ್ರಕಟವಾಗಿದೆ.

ಕಳೆದ ಅವಧಿ ಯಲ್ಲಿ ಅಧ್ಯಕ್ಷ ಸ್ಥಾನವನ್ನು ಬಾಲಛೆಡ ಗ್ರಾಮಕ್ಕೆ ಆದ್ಯತೆ ನೀಡಿರುವುದರಿಂದ ಈ ಬಾರಿ ಸೈದಾಪುರಕ್ಕೆ ಅಧಕ್ಷ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ, ಇಲ್ಲಿರುವ 14 ಸದಸ್ಯರಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಸೈದಾಪುರನ ಎಲ್ಲಾ ಸದಸ್ಯರು ಚಂದ್ರುಗೌಡನ
ಮನವೊಲಿಸಲು ಕಸರತ್ತು ನಡೆದಿದೆ. ಉಪಾಧ್ಯಕ್ಷ ಸ್ಥಾನವು ಎಸ್‌ಟಿ ಮಹಿಳೆಗೆ ಮೀಸಲಾಗಿದೆ.

ಇದರಿಂದ ಇಲ್ಲಿ 25 ಸದಸ್ಯರ ಪೈಕಿ ಓರ್ವ ಎಸ್‌ಟಿ ಮಹಿಳೆ ಇರುವುದರಿಂದ ನೇತ್ರಾವತಿ ತಿಮ್ಮಾರೆಡ್ಡಿ ದೊರೆಗೆ ಉಪಾಧ್ಯಕ್ಷ ಸ್ಥಾನ ಖಚಿತವಾಗಿದೆ.
ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಪಕ್ಷಗಳಿಗಿಂತ ವ್ಯಕ್ತಿಯ ಪ್ರಭಾವ ಮೂಲಕ ಚುನಾವಣೆ ನಡೆದಿದೆ. ಆದ್ದರಿಂದ ಇಲ್ಲಿನ ಜೆಡಿಎಸ್‌ ಯುವ ಮುಖಂಡ ಚಂದ್ರುಗೌಡ ಮಾಲಿ  ಪಾಟೀಲ್‌ ಅವರ ಪರಿಶ್ರಮದಿಂದ 9 ಸದಸ್ಯರನ್ನು ಅವಿರೋಧ ಮತ್ತು ಐವರು ಸದಸ್ಯರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಹಕರಿಸಿದ್ದಾರೆ.

ಆದ್ದರಿಂದ ಈ ಬಾರಿಯು ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರ ಅವರನ್ನು ಅಧ್ಯಕ್ಷ ಗದ್ದುಗೆಗೆ ಏರಿಸಲು ಚಂದ್ರುಗೌಡ ಮುಂದಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಾತಿ ಲೆಕ್ಕಾಚಾರ ಪ್ರಾರಂಭ: ಸೈದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಬ್ಬಲಿಗ ಕೂಲಿ ಮತ್ತು ಕುರುಬ ಸಮಾಜದ ಮತಗಳು ಹೆಚ್ಚು ಇರುವುದರಿಂದ ಕಳೆದ ಅವಧಿ ಯಲ್ಲಿ ಕುರುಬ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಿದ್ದು. ಈ ಬಾರಿ ಕಬ್ಬಲಿಗ ಕೂಲಿ ಸಮಾಜಕ್ಕೆ ಅಧ್ಯಕ್ಷ ಸ್ಥಾನ ದೊರಕಿಸಿ ಕೊಡಲು ಸಮಾಜದ ಮತ್ತು ಕೆಲ ರಾಜಕೀಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ, ಕೆಲ ಪ್ರಭಾವಿ ರಾಜಕಾರಣಿಗಳು ಲಿಂಗಾಯತ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಈಗಾಗಲೇ ಶರಣಗೌಡ
ಕಂದಕೂರ ಅವರಿಗೆ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ

kshama

ಮಹಾನಗರದ ನೌಕರಿ ತೊರೆದು ಕೃಷಿಯಲ್ಲಿ ಖುಷಿ ಕಂಡ ಕ್ಷಮಾ

Ariz Khan

‘2008 ಬಾಟ್ಲಾ ಹೌಸ್’ ಎನ್‍ಕೌಂಟರ್ : ಉಗ್ರ ಅರಿಜ್ ಖಾನ್ ಮೇಲಿನ ಆರೋಪ ಸಾಬೀತು

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಸ್ಥಳಗಳಲ್ಲಿ ಸೇವೆ ಲಭ್ಯ

Amazon Food : ಫುಡ್ ಡೆಲಿವರಿ ಈಗ ಅಮೆಜಾನ್ ಸರದಿ! ಬೆಂಗಳೂರಿನ 62 ಪ್ರದೇಶಗಳಲ್ಲಿ ಸೇವೆ ಲಭ್ಯ

ಇದೊಂದು ಕಣ್ಣಾ ಮುಚ್ಚಾಲೆ, ಬೋಗಸ್ ಬಜೆಟ್ : ಡಿ.ಕೆ ಶಿವಕುಮಾರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೀಸಲಾತಿ ತೆಗೆಯಲು ಕೇಂದ್ರ ಹುನ್ನಾರ ಮಾಡುತ್ತಿದೆ : ಯು.ಟಿ ಖಾದರ್

Bidar

ಯುಜಿಡಿ ಅಕ್ರಮ: ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧಾರ

bidar protest

ಪಶು ವೈದ್ಯಕೀಯ ವಿವಿ ವಿಭಜನೆಗೆ ವಿರೋಧ

vanadoddi

ವಾಲದೊಡ್ಡಿಗೆ “ಜನಪದ ಲೋಕ’ ಪ್ರಶಸ್ತಿ

maski election issue

ಕಾವೇರಿದ ಪ್ರಚಾರದ ಅಬ್ಬರ; ಪರಸ್ಪರ ಮಾತಿನ ಸಮರ!

MUST WATCH

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

ಹೊಸ ಸೇರ್ಪಡೆ

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

ಮಲ್ಪೆ ಬೀಚ್‌ನಿಂದ ಸೈಂಟ್‌ಮೇರಿ ದ್ವೀಪಕ್ಕೆ ಸಮುದ್ರದಲ್ಲಿ ಮಹಿಳೆಯರ ಕಯಾಕಿಂಗ್‌ ಸಾಹಸ ಯಾನ

Constant awareness from monasteries

ಮಠಗಳಿಂದ ನಿರಂತರ ಜಾಗೃತಿ

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ : ಮಮತಾ ಬ್ಯಾನರ್ಜಿ ವ್ಯಂಗ್ಯ

kshama

ಮಹಾನಗರದ ನೌಕರಿ ತೊರೆದು ಕೃಷಿಯಲ್ಲಿ ಖುಷಿ ಕಂಡ ಕ್ಷಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.