Udayavni Special

ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ

•ಹುಮನಾಬಾದ ಪುರಸಭೆ ಚುನಾವಣೆ ಕಣದಲ್ಲಿ ಗೆಲುವಿಗಾಗಿ ನಡೆದಿದೆ ಭಾರೀ ಸಂಘರ್ಷ

Team Udayavani, May 27, 2019, 7:41 AM IST

Udayavani Kannada Newspaper

ಹುಮನಾಬಾದ: ಪಟ್ಟಣದ ಪುರಸಭೆ 27 ವಾರ್ಡ್‌ ಪೈಕಿ ಈಗಾಗಲೇ 5 ವಾರ್ಡ್‌ಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಇನ್ನುಳಿದ 22 ವಾರ್ಡ್‌ಗಳಲ್ಲಿ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮಧ್ಯ ಪೈಪೋಟಿ ಏರ್ಪಟ್ಟಿದೆ. ಜಾತಿವಾರು ಮತಗಳನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಪಟ್ಟಣದ ಎಲ್ಲರ ಗಮನ ಸೆಳೆದ ವಾರ್ಡ್‌ 1ರಲ್ಲಿ ಎರಡನೇ ಬಾರಿ ಆಯ್ಕೆ ಬಯಸಿ ಸ್ಪರ್ಧಿಸಿರುವ ಜೆಡಿಎಸ್‌ ಅಭ್ಯರ್ಥಿ ಪಾರ್ವತಿಬಾಯಿ ಪಿ. ಮಾಳಗೆ, ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಾಂಗ್ರೆಸ್‌ ಪಕ್ಷದ ರೇಷ್ಮಾರೆಡ್ಡಿ ಮತ್ತು ಬಿಜೆಪಿಯ ಸೀಮಾ ಕಟ್ಟಿಮನಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ವಾರ್ಡ್‌ 2ರಿಂದ ಪ್ರಥಮ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಓಂಪ್ರಕಾಶ ಅಗಡಿ, ಜೆಡಿಎಸ್‌ನ ವೀರೇಶ ಸೀಗಿ, ಎರಡು ಬಾರಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಸಂಜಯ್‌ ದಂತಕಾಳೆ ಮರಳಿ ಯತ್ನಿಸುತ್ತಿದ್ದಾರೆ. ಇನ್ನು ಪಕ್ಷಚೇತರರಾಗಿ ಎಂ.ಡಿ.ದಸ್ತಗೀರ್‌, ಮಗ್ದುಮ್‌ ಸ್ಪರ್ಸಿದರೂ ನೇರ ತ್ರಿಕೋನ ಸ್ಪರ್ಧೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಮಧ್ಯೆ ಇದೆ.

ವಾರ್ಡ್‌ 4ರಲ್ಲಿ ಜೆಡಿಎಸ್‌ ಅಬ್ದುಲ್ ರೆಹೆಮಾನ್‌ ಗೋರೆಮಿಯ್ಯ, ಕಾಂಗ್ರೆಸ್‌ ಪಕ್ಷದ ರಾಘವೇಂದ್ರ, ಪಕ್ಷೇತರ ಅಭ್ಯರ್ಥಿ ಸೈಯದ್‌ ಯಾಸೀನಲಿ ಸ್ಪರ್ಧಿಸಿದರೂ ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ನೇರ ಪೈಪೋಟಿ ಇದೆ. ವಾರ್ಡ್‌ 10ರಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಕೃಷ್ಣ ವಿಜಯರಾವ್‌ ಮುಳೆ ಮತ್ತು ಕಾಂಗ್ರೆಸ್‌ ಪಕ್ಷದ ಮಾಜಿ ಸದಸ್ಯ ಎಸ್‌.ಎ.ಬಾಸೀತ್‌ ಕಣದಲ್ಲಿದ್ದು, ಇಬ್ಬರ ಮಧ್ಯ ತೀವ್ರ ಪೈಪೋಟಿ ಇದೆ.

ವಾರ್ಡ್‌ 14ರಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ ಪಕ್ಷದ ಪಾಷಾಬೀ ಮತ್ತು ಜೆಡಿಎಸ್‌ ಪಕ್ಷದ ಹಜರತಬೀ ಮಧ್ಯ ಭಾರೀ ಪೈಪೋಟಿ ಇದೆ. ಪುರಸಭೆಗೆ 5ಬಾರಿ ಆಯ್ಕೆಯಾಗಿ 6ನೇ ಅವಧಿಗಾಗಿ ವಾರ್ಡ್‌ 16ರಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅಹ್ಮದ್‌ ಮೈನೋದ್ದಿನ್‌(ಅಪ್ಸರ‌ಮಿಯ್ಯ) ಮತ್ತು ದ್ವಿತೀಯ ಬಾರಿ ಅಖಾಡಕ್ಕೆ ಇಳಿದಿರುವ ಜೆಡಿಎಸ್‌ ಪಕ್ಷದ ಆಜಮ್‌ ಮತೀನ್‌ ಮಧ್ಯ ತೀವ್ರ ಪೈಪೋಟಿ ಇದೆ.

ವಾರ್ಡ್‌ 22ರಿಂದ ಸ್ಪರ್ಧಿಸಿರುವ ಸತ್ಯವತಿ ಎಸ್‌.ಮಠಪತಿ, ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಉಷಾದೇವಿ ಎಸ್‌.ರೆಡ್ಡಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ವಾರ್ಡ್‌ 23ರಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿರುವ ಮುಕರಂ ಪಟೇಲ, ಪಕ್ಷೇತರ ಅಭ್ಯರ್ಥಿ ಅಮಾನಖಾನ್‌ ಮಧ್ಯ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಮೊದಲು ಎರಡು ಬಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ, ಒಂದೊಮ್ಮೆ ಅಧ್ಯಕ್ಷೆಯಾಗಿ, ಮತ್ತೂಮ್ಮೆ ಸದಸ್ಯೆಯಾಗಿ ಆಯ್ಕೆಯಾಗಿದ್ದ ಗುಜ್ಜಮ್ಮ ನಾಗರೆಡ್ಡಿ ಕನಕಟಕರ್‌ ಅವರು ಈ ಬಾರಿ 27ನೇ ವಾರ್ಡ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಸಾಧನೆಯ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಎಲ್ಲಕ್ಕೂ ಮೇ 29ಕ್ಕೆ ನಡೆಯುವ ಮತದಾನ ನಂತರ ಪ್ರಕಟವಾಗುವ ಫಲಿತಾಂಶಕ್ಕಾಗಿ ಕಾಯಬೇಕು.

•ಶಶಿಕಾಂತ ಕೆ.ಭಗೋಜಿ

ಟಾಪ್ ನ್ಯೂಸ್

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಲಾಖೀಂಪುರ್‌ ತನಿಖೆ ಅಂತ್ಯವಿಲ್ಲದ ತನಿಖೆ ಆಗದಿರಲಿ : ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಐಎಂಎಫ್ ತೊರೆಯಲಿರುವ ಗೀತಾ ಗೋಪಿನಾಥ್‌

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

The price of vegetables

“ಶತಕ’ ದಾಟಿದ ತರಕಾರಿಗಳ ಬೆಲೆ!

27

ಬಸವ ತತ್ವದ ಜಾಗತಿಕ ಪ್ರಚಾರ ಅಗತ್ಯ

21

ಕೈಗಾರಿಕೆಗಳ ತ್ಯಾಜ್ಯ ಅವೈಜ್ಷಾನಿಕ ವಿಲೇವಾರಿ

20

ರಸ್ತೆ ಸುಧಾರಣೆಗೆ ಮೊದಲ ಆದ್ಯತೆ

19

ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಸ್ಮಾರ್ಟ್‌ ಸಿಟಿ: ಜೈಲ್‌ ರೋಡ್‌ ಅಭಿವೃದ್ಧಿ ಕಾಮಗಾರಿ ಆರಂಭ

ಸ್ಮಾರ್ಟ್‌ ಸಿಟಿ: ಜೈಲ್‌ ರೋಡ್‌ ಅಭಿವೃದ್ಧಿ ಕಾಮಗಾರಿ ಆರಂಭ

ಧರ್ಮ ಅನುಸರಿಸುವುದರಿಂದ ಆತ್ಮ ಕಲ್ಯಾಣ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ

ಧರ್ಮ ಅನುಸರಿಸುವುದರಿಂದ ಆತ್ಮ ಕಲ್ಯಾಣ ಸಾಧ್ಯ: ಡಾ| ವೀರೇಂದ್ರ ಹೆಗ್ಗಡೆ

ನಮೀಬಿಯಾ ವಿಜಯ ಸಂಭ್ರಮ

ನಮೀಬಿಯಾ ವಿಜಯ ಸಂಭ್ರಮ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.