ಬಿಜೆಪಿಗೆ ಅನ್ಯರ ಸೇರ್ಪಡೆ ಅಭಿವೃದ್ಧಿ ಸಂಕೇತ
ವಿವಿಧ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.
Team Udayavani, Apr 3, 2021, 6:34 PM IST
ಬಸವಕಲ್ಯಾಣ: ಬಿಜೆಪಿ ತತ್ವ, ಸಿದ್ಧಾಂತ ಹಾಗೂ ಅದರ ದೂರದೃಷ್ಟಿ ವಿಚಾರಗಳಿಂದ ಮನಸೋತ ಇತರೆ ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಇದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹೇಳಿದರು. ವಿಧಾನಸಭಾ ಉಪ ಚುನಾವಣೆ ನಿಮಿತ್ತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಶರಣು ಸಲಗರ ಅವರಿಗೆ ಸಿಗಬೇಕೆಂಬ ಕ್ಷೇತ್ರದ ಜನತೆಯ ಬಹುನಿರೀಕ್ಷಿತ ಆಸೆ ಈಗ ಈಡೇರಿದೆ. ಉಳಿದಂತೆ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡುವ ಮಹದಾಸೆಯೂ ನಿಮ್ಮ ಮನದಲ್ಲಿ ಬೇರೂರಿದೆ. ಕ್ಷೇತ್ರದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿ ಸಿದಂತೆ ನುಡಿದಂತೆ ನಡೆಯುವ ಸಲಗರ ನಿಮ್ಮ ಮಹದಾಸೆ ಮೇಲೆ ಎಂದೂ ನೀರೆರಚುವ ಕೆಲಸ ಮಾಡುವುದಿಲ್ಲ ಎಂದರು. ವಿಶ್ವಾಸದಿಂದಲೇ ವಿಕಾಸ ಸಾಧ್ಯ. ಸದಾ ವಿಕಾಸದ ಹಾದಿಯನ್ನೇ ತುಳಿಯುವ ನಾನು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕನಸು ಕಂಡಿದ್ದೇನೆ. ಇದನ್ನು ಪೋಷಣೆ ಮಾಡುವ ಸಂಪೂರ್ಣ ಜವಾಬ್ದಾರಿ ನಿಮ್ಮದು ಎಂದರು.
ಈ ಸಂದರ್ಭದಲ್ಲಿ ಘಾಟಹಿಪ್ಪರರ್ಗಾ ಗ್ರಾಮದ ಷಣ್ಮುಖಯ್ಯ ಸ್ವಾಮಿ, ಸಂಜುಕುಮಾರ ಪಾಟೀಲ್, ತುಕಾರಾಮ ಬಿರಾದಾರ, ರಾಮಲಿಂಗ ಏಕಂಬೆ,
ಸಂಜುಕುಮಾರ ಭುರೆ, ರಾಜಕುಮಾರ ಭಂಡಾರೆ, ವಿವೇಕಾನಂದ ಮಠಪತಿ, ಕಿಟ್ಟಾ ಗ್ರಾಮದ ಚನ್ನಪ್ಪ ಪ್ರತಾಪೂರೆ, ಎಚ್.ಎಂ. ಗೌರೆ, ಗುರುರಾಜ ಪ್ರತಾಪೂರೆ, ಜಗನ್ನಾಥ ರೆಡ್ಡಿ ಹುಡೆ, ಬಾಬುರಾವ್ ನಾವದಗಿ, ಸಂಜೀವರೆಡ್ಡಿ ಕುದಬೆ, ಸೂರ್ಯಕಾಂತ್ ರೆಡ್ಡಿ ಪಾಟೀಲ್, ಶಿವಪುರ ಗ್ರಾಮದಲ್ಲಿ, ಅನಿಲ್ ಸ್ವಾಮಿ, ಸಂಜು ರಾಜೋಳೆ, ವಿದ್ಯಾಸಾಗರ ಮೂಲಗೆ ಉಳಿದಂತೆ ಕಮಲಾಕರ ಮೇಕಾಲೆ, ಬಸವರಾಜ ಏಳೂರೆ, ರಾಮಲಿಂಗ ಏಳೂರೆ, ಜಗನ್ನಾಥ ಮಾಲಿಪಾಟೀಲ್, ಮೇಘರಾಜ ನಾಗರಾಳೆ, ಸಂಜು ಸುಗುರೆ, ಮಹಾಂತಯ್ಯ ಮಠಪತಿ, ರಾಚಮ್ಮ ಮಠಪತಿ, ರವಿ ಕೊಳಕೂರ ಇದ್ದರು.