Udayavni Special

ಆನೆಕಾಲು ಮುಕ್ತ ಸಮಾಜಕ್ಕೆ ಸಹಕರಿಸಿ

ಜಿಲ್ಲೆಯ ಆನೆಕಾಲು ರೋಗದ ಹಾಗೂ ರಾಜ್ಯದ ಚಿತ್ರಣ ಮತ್ತು ಅಂಕಿ-ಸಂಖ್ಯೆಗಳ ಮಾಹಿತಿ ನೀಡಿದರು.

Team Udayavani, Mar 5, 2021, 5:54 PM IST

ಆನೆಕಾಲು ಮುಕ್ತ ಸಮಾಜಕ್ಕೆ ಸಹಕರಿಸಿ

ಬೀದರ: ಸಾರ್ವಜನಿಕರು ತಪ್ಪದೇ ಡಿ.ಇ.ಸಿ. ಅಲ್ಬೆಂಡಾಜೋಲ್‌ ಹಾಗೂ ವ್ಯಕ್ತಿಯ ಅಳತೆಗನುಸಾರವಾಗಿ ಐವರಮೆಕ್ಟಿನ್‌ ಮಾತ್ರೆಗಳು ಸೇವನೆ ಮಾಡಿ, ಆನೇಕಾಲು ರೋಗ ಮುಕ್ತ ಸಮಾಜ ಮಾಡಬೇಕು ಎಂದು ಡಿಸಿ ರಾಮಚಂದ್ರನ್‌ ಆರ್‌. ಮನವಿ ಮಾಡಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಸಂಚಲನಾ ಸಮಿತಿ ಸಭೆಯಲ್ಲಿ ಆನೆ ಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆನೆಕಾಲು ರೋಗಿಗಳ ಪ್ರಕರಣ ಮತ್ತು ರೋಗ ಹರಡಿಸುವ ಸಕ್ರಿಯ ಪ್ರಕರಣಗಳು ಪದೇಪದೇ ಗೋಚರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಮಾ.15ರಿಂದ 31ರವರೆಗೆ ಪ್ರತಿ ವರ್ಷದಂತೆ ಊಟದ ನಂತರ ಅರ್ಹ ಫಲಾನುಭವಿಗಳಿಗೆ ಸಾಮೂಹಿಕ ಔಷ ಧ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಜೊತೆಯಲ್ಲಿ ಐವರ್‌ ಮೆಕ್ಟೀನ್‌ ಮಾತ್ರೆ ಸೇರಿಸಲಾಗಿದೆ. ಈ ಕಾರ್ಯಕ್ರಮ ಗುಣಾತ್ಮಕವಾಗಿ ಪ್ರತಿಶತ ಸಾಧನೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪೋಸ್ಟರ್‌ ಬಿಡುಗಡೆ: ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಹಾಕಲಾಗಿರುವ ಪೋಸ್ಟರ್‌, ಕರಪತ್ರ, ಬ್ಯಾನರ್‌ ಇತ್ಯಾದಿಗಳನ್ನು ವೇದಿಕೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಂ ಅವರು ಬಿಡುಗಡೆ ಮಾಡಿದರು. ಕ್ರಿಯಾ ಯೋಜನೆಯಂತೆ ಯಾವುದೇ ಅಡೆತಡೆಯಾಗದಂತೆ ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕು ಎಂದು ತಿಳಿಸಿದರು.

ಡಾ| ಅನಿಲಕುಮಾರ ತಾಳಿಕೋಟೆ ಅವರು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಹಲವಾರು ಮಾಹಿತಿ ನೀಡಿದರು. ಆನೇಕಾಲು ರೋಗವು ಪ್ರಪಂಚದಾದ್ಯಂತ ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತ ದೇಶದಲ್ಲಿ ಎಲ್ಲಾ ಕಡೆ ಈ ರೋಗ ಕಂಡು ಬಂದಿದೆ. ಕರ್ನಾಟಕದೆಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಆನೆಕಾಲು ಪೀಡಿತ ರೋಗಿಗಳಿದ್ದಾರೆ. ರಾಜ್ಯದ 6 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಬೀದರ ಕೂಡ ಒಂದಾಗಿದೆ ಎಂದು ತಿಳಿಸಿದರು.

ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಮಾತನಾಡಿ, ಆನೆ ಕಾಲು ರೋಗವು ಗೊಚ್ಚೆ (ಕಲುಷಿತ) ನೀರಿನಲ್ಲಿ ಬೆಳೆಯುವ ಕ್ಯೂಲೆಕ್ಸ್‌ ಜಾತಿಯ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ಈ ರೋಗವು ಮನುಷ್ಯರ ದೇಹದಲ್ಲಿ ಕಾಣಿಸಿಕೊಳ್ಳಲು ಕನಿಷ್ಠ 2ರಿಂದ 10 ವರ್ಷದವರೆಗೆ ಯಾವುದೇ ಅವಧಿಯಲ್ಲಿ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗವು ಮನುಷ್ಯರ ದೇಹದ ನಾಲ್ಕು ಭಾಗಗಳಲ್ಲಿ ರೋಗದ ಬಾಧೆಯನ್ನುಂಟು ಮಾಡುತ್ತದೆ. ಕಾಲುಗಳು ದಪ್ಪಾಗುವುದು, ಗಂಡಸರಲ್ಲಿ ಅಂಡವೃದ್ಧಿ ಚೇರು ಬೆಳವಣಿಗೆ, ಕೈಗಳು ಕೂಡ ದಪ್ಪಾಗುವುದು ಮತ್ತು ಮಹಿಳೆಯಲ್ಲಿ ಸ್ತನಗಳು (ದಪ್ಪಾಗುವುದು) ಬೃಹದ್ದಾಕಾರವಾಗಿ ಕಂಡು ಬರುತ್ತವೆ ಎಂದರು.

ವಿಷಯ ತಜ್ಞೆ ಜ್ಯೋತ್ಸಾ ಅವರು, ಜಿಲ್ಲೆಯ ಆನೆಕಾಲು ರೋಗದ ಹಾಗೂ ರಾಜ್ಯದ ಚಿತ್ರಣ ಮತ್ತು ಅಂಕಿ-ಸಂಖ್ಯೆಗಳ ಮಾಹಿತಿ ನೀಡಿದರು. ಡಾ| ಸಂಜೀವಕುಮಾರ ಪಾಟೀಲ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ.ವಿ.ಸ್ವಾಮಿ, ಡಾ| ಅನೀಲಕುಮಾರ ಚಿಂತಾಮಣಿ, ಡಾ| ಕೃಷ್ಣಾ ರೆಡ್ಡಿ, ಡಾ| ದೀಪಾ ಖಂಡ್ರೆ, ಡಾ| ಮಹೇಶ ತೊಂಡಾರೆ, ಸಂಗಪ್ಪ ಕಾಂಬಳೆ ಮತ್ತು ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.

ಅಧಿಕಾರಿಗಳ ಸಮ್ಮುಖದಲ್ಲಿ ಡಿಸಿ ರಾಮಚಂದ್ರನ್‌ ಆರ್‌ ಅವರು ಔಷಧ  ಸೇವನೆ ಮಾಡುವ ಮೂಲಕ ಸಾಂಕೇತಿಕವಾಗಿ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ್‌ ಪಟೇಲ್‌, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಹಾಗೂ ಇತರೆ ಅಧಿ ಕಾರಿಗಳು ಸಾಂಕೇತಿಕವಾಗಿ ಔಷಧ ಸೇವನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಟಾಪ್ ನ್ಯೂಸ್

Uttar Pradesh govt announces free vaccine for all above 18 from May 1

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತ ಲಸಿಕೆ ಅಭಿಯಾನ : ಯೋಗಿ ಆದಿತ್ಯನಾಥ್

ಪೃಥ್ವಿ ಅಂಬರ್‌ ನಿರೀಕ್ಷೆಯಲ್ಲಿ “ಲೈಫ್ ಈಸ್ ಬ್ಯೂಟಿಫುಲ್‌’

ಪೃಥ್ವಿ ಅಂಬರ್‌ ನಿರೀಕ್ಷೆಯಲ್ಲಿ “ಲೈಫ್ ಈಸ್ ಬ್ಯೂಟಿಫುಲ್‌’

ಹಳೆಯಂಗಡಿ ಸಿಡಿಲಿನ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒರ್ವ ಬಾಲಕ ಸಾವು!

ಹಳೆಯಂಗಡಿ ಸಿಡಿಲಿನ ಆಘಾತ: ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಬಾಲಕ ಸಾವು!

maruti-suzuki-hikes-model-prices-by-up-to-rs-22500-to-offset-rise-in-input-costs

ಮಾರುತಿ ಸುಜುಕಿಯ ಎಲ್ಲಾ ಕಾರುಗಳ ಆವೃತ್ತಿಗಳ ಬೆಲೆ ಏರಿಕೆ..!

ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು  ಸ್ವರಾಜ್ ಶೆಟ್ಟಿ

ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಸ್ವರಾಜ್ ಶೆಟ್ಟಿ

sunny leone

ಲಾಕ್ ಗೆ ಶೇಕ್ ಆಗದ ಸನ್ನಿ ಲಿಯೋನ್!

‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?

‘ಮುತ್ತುರಾಜ್’ ಆಗಿದ್ದವರು ‘ರಾಜ್ ಕುಮಾರ್’ ಆಗಿದ್ದು ಹೇಗೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desha

ಸ್ಮಾರಕಗಳು ದೇಶದ ಸಾಂಸ್ಕೃತಿಕ ಕುರುಹು

Apara

ಜಗದೋನ್ನತಿಗೆ ಪಂಚಾಚಾರ್ಯರ ಕೊಡುಗೆ ಅಪಾರ

ಬೀದರ್ : ದಕ್ಷಿಣ ಭಾರತದ ಮೊದಲ ಬಿಎಸ್ಪಿ ಶಾಸಕ ಜುಲ್ಫೇಕರ್‌ ಹಾಶ್ಮಿ ನಿಧನ

ಬೀದರ್ : ದಕ್ಷಿಣ ಭಾರತದ ಮೊದಲ ಬಿಎಸ್ಪಿ ಶಾಸಕ ಜುಲ್ಫೇಕರ್‌ ಹಾಶ್ಮಿ ನಿಧನ

Devadurga

ದೇವದುರ್ಗದಲ್ಲಿ ಶವಸಂಸ್ಕಾರಕ್ಕೂ ಸ್ಥಳಾಭಾವ!

kalyana

ಕಲ್ಯಾಣದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

ಹೊಸ ಸೇರ್ಪಡೆ

ASCkatilu kshetra

ಕಟೀಲು ಕ್ಷೇತ್ರ: ನೂತನ ಶಿಲಾಮಯ ಉತ್ಸವಕಟ್ಟೆ ಸಮರ್ಪಣೆ

Uttar Pradesh govt announces free vaccine for all above 18 from May 1

ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಉಚಿತ ಲಸಿಕೆ ಅಭಿಯಾನ : ಯೋಗಿ ಆದಿತ್ಯನಾಥ್

28th Founding Day of Borivali West Branch

ಬೊರಿವಲಿ ಪಶ್ಚಿಮ ಶಾಖೆಯ 28ನೇ ಸ್ಥಾಪನ ದಿನಾಚರಣೆ

ಪೃಥ್ವಿ ಅಂಬರ್‌ ನಿರೀಕ್ಷೆಯಲ್ಲಿ “ಲೈಫ್ ಈಸ್ ಬ್ಯೂಟಿಫುಲ್‌’

ಪೃಥ್ವಿ ಅಂಬರ್‌ ನಿರೀಕ್ಷೆಯಲ್ಲಿ “ಲೈಫ್ ಈಸ್ ಬ್ಯೂಟಿಫುಲ್‌’

programme held at mumbai

ಸಮಾಜ ಬಾಂಧವರ ಯೋಗಕ್ಷೇಮ ಸಂಘದ ಮುಖ್ಯ ಧ್ಯೇಯ: ಚಂದ್ರಹಾಸ್‌ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.