ಖಾಸಗಿ ವೈದ್ಯರಿಂದ ಕೋವಿಡ್‌ ಆರೋಗ್ಯ ಕೇಂದ್ರ ಆರಂಭ


Team Udayavani, Jul 29, 2020, 2:27 PM IST

ಖಾಸಗಿ ವೈದ್ಯರಿಂದ ಕೋವಿಡ್‌ ಆರೋಗ್ಯ ಕೇಂದ್ರ ಆರಂಭ

ಬೀದರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌-19 ಸೋಂಕು ನಿಯಂತ್ರಣ ಹಾಗೂ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ನಗರದ ಸಪ್ನಾ ಹೊಟೇಲ್‌ ನಲ್ಲಿ ವಿಶೇಷ ಕೋವಿಡ್‌ ಕಾಳಜಿ ಮತ್ತು ಆರೋಗ್ಯ ಕೇಂದ್ರವನ್ನು ಸೋಮವಾರದಿಂದ ಆರಂಭಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ, ಐಎಂಎ ಜಿಲ್ಲಾಧ್ಯಕ್ಷ ಡಾ| ವಿ.ವಿ. ನಾಗರಾಜ ತಿಳಿಸಿದ್ದಾರೆ.

ಕೇಂದ್ರದಲ್ಲಿ ಲಕ್ಷಣ ರಹಿತ ಸೋಂಕಿತರಿಗೆ ಹಾಗೂ ಸಾಮಾನ್ಯದಿಂದ ಮಧ್ಯಮ ಗತಿಯಲ್ಲಿರುವ ಕೆಮ್ಮು, ನೆಗಡಿ ಲಕ್ಷಣ ಕಾಣಿಸಿಕೊಂಡ ವಕ್ತಿಗಳಿಗೆ ಚಿಕಿತ್ಸೆ ನೀಡಲಾಗುವುದು. ಉಸಿರಾಟ ತೊಂದರೆ ಮತ್ತು ಶ್ವಾಸ ಕೋಶ ಪ್ರಮಾಣದಲ್ಲಿ ಶೇ. 90ಕ್ಕಿಂತ ಮೇಲ್ಪಟ ಸೊಂಕಿತರನ್ನುಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಂತಹ ಲಕ್ಷಣ ಹೊಂದಿರುವ ರೋಗಿಗಳಿಗಾಗಿಯೇ ಕೋವಿಡ್‌ ಕೇಂದ್ರದ 33 ಕೋಣೆಗಳ ಪೈಕಿ 11 ಕೋಣೆಗಳಲ್ಲಿ ಆಕ್ಸಿಜನ್‌, 8 ಹಾಸಿಗೆಗಳಿಗೆ ಐಸಿಯು ಘಟಕ ವ್ಯವಸ್ಥೆ ಮಾಡಲಾಗಿದೆ. ಜತೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಚಿಕಿತ್ಸೆಗೆ ದಾಖಲಾದ ರೋಗಿಗಳನ್ನು ದಿನದ 24 ಗಂಟೆ ನಿಯೋಜಿಸಲಾಗಿರುವ ವೈದ್ಯರು ಹಾಗೂ ಶ್ವಾಸಕೊಶ ಚಿಕಿತ್ಸೆಗೆ ವಿಶೇಷ ತಜ್ಞ ವೈದ್ಯರಿಂದ ತಪಾಸಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ಗಂಟೆ ಕರ್ತವ್ಯ ನಿರತ ವೈದ್ಯರು ಸೇವೆ ಲಭ್ಯ ಇರಲಿದ್ದು, ಫಿಜಿಶಿಯನ್‌ ವೈದ್ಯರು ಸಹ ಮೇಲಿಂದ ಮೇಲೆ ಸುತ್ತು ಹಾಕುತ್ತಾರೆ. ಒಟ್ಟು ನಾಲ್ವರು ಫಿಜಿಶಿಯನ್ಸ್‌ರನ್ನು ಪಾಳೆ ಪ್ರಕಾರ ಎರಡು ದಿನಕ್ಕೊಮ್ಮೆ ಬದಲಾವಣೆ ಮಾಡಲಾಗುತ್ತದೆ ಎಂದಿದ್ದಾರೆ.

ಆಯುಷ್ಮಾನ್‌ ಭಾರತ ಮತ್ತು ಕರ್ನಾಟಕ ಆರೋಗ್ಯ ಸುರಕ್ಷಾ ಯೊಜನೆ ವ್ಯಾಪ್ತಿಗೆ ಒಳಪಡುವ ರೋಗಿಗಳಿಗೆ ಸರ್ಕಾರ ನಿಗದಿ ಮಾಡಿರುವ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಜತೆಗೆ ಈ ಯೋಜನೆಗಳ ವ್ಯಾಪ್ತಿಯಲ್ಲಿ ಇರದ ಜನರಿಗೂ ಸಹ ಇದೇ ದರ ಪಡೆಯಲಾಗುವುದು. ಜಿಲ್ಲಾಧಿಕಾರಿಗಳ ಪ್ರೋತ್ಸಾಹ ಮತ್ತು ಸಹಕಾರದಿಂದ 6 ಜನ ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿಕೊಂಡು ಆರಂಭಿಸಿರುವ ವಿಶೇಷ ಕೋವಿಡ್‌ ಕೇಂದ್ರದ ಮೂಲಕ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ ರೋಗಿಗಳು ಬೇಗ ಗುಣಮುಖರಾಗಿ ಮನೆಗೆ ಹೋಗುವಂತ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಜನತೆ ಕೇಂದ್ರದ ಸದುಪಯೊಗ ಪಡೆದುಕೊಳ್ಳಬಹುದು ಎಂದು ಡಾ| ನಾಗರಾಜ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19highschool

ಬುದ್ದಿನ್ನಿಗೆ ಪ್ರೌಢಶಾಲೆ ಮಂಜೂರಿಗೆ ಆಗ್ರಹ

17crops

ತೊಗರಿಗೆ ಗೊಡ್ಡು ರೋಗ ಕಾಟ; ನಿರ್ವಹಣೆಗೆ ಸಲಹೆ

16water

ಅಚ್ಚರಿ ಮೂಡಿಸಿದ ನೀರಾವರಿ ಇಲಾಖೆ ನಡೆ

b-c-nagesh

ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಚಿವ ಬಿ.ಸಿ.ನಾಗೇಶ್

13pejavara

ಗೋವನ್ನು ಮಾತೆಯಂತೆ ಗೌರವಿಸಲು ಪೇಜಾವರ ಶ್ರೀ ಸಲಹೆ

MUST WATCH

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

ಹೊಸ ಸೇರ್ಪಡೆ

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

shivamogga news

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.