ಸಾಂಸ್ಕೃತಿಕ ವೈಭವದ ಮೆರವಣಿಗ

Team Udayavani, Dec 31, 2017, 11:49 AM IST

ಬಸವಕಲ್ಯಾಣ: ಮೊಳಗಿದ ಕನ್ನಡಪರ ಘೋಷಣೆಗಳು, ಹಾರಾಡಿದ ಕನ್ನಡ ಧ್ವಜಗಳು, ತಳಿರು ತೋರಣಗಳಿಂದ
ಅಲಂಕೃಸಲಾದ ಎತ್ತಿನ ಬಂಡಿಗಳ್ಳಿ ಗಮನ ಸೆಳೆದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, 16 ಜಿಲ್ಲಾ ಸಮ್ಮೇಳನಾಧ್ಯಕ್ಷರ ಭಾವಚಿತ್ರಗಳು. ಮೆರವಣಿಗೆಯುದ್ದಕ್ಕೂ ನೃತ್ಯ ಮಾಡಿದಯುವಕರೊಂದಿಗೆ ಹೆಜ್ಜೆ ಹಾಕಿದ ಪೂಜ್ಯರು. ಜನಪದ ಕಲಾ ವೈಭವ ಸಾರಿದ ಕಲಾ ತಂಡಗಳು.

ತಾಲೂಕಿನ ಹುಲಸೂರಿನಲ್ಲಿ ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ, ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಶನಿವಾರ ನಡೆದ ಸಾಂಸ್ಕೃತಿ ವೈಭವದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ ಇದು. 

ಅಲಂಕೃತ ವಾಹನಗಳಲ್ಲಿ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ, ಗುರು ಬಸವಣ್ಣನವರ ಭಾವಚಿತ್ರ, ಜಗದ್ಗುರು ಬಸವಕುಮಾರ ಶಿವಯೋಗಿಗಳ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಯಲ್ಲಿ ಅಲಂಕೃತ ಸಾರೋಟಿನಲ್ಲಿ ಆಸೀನರಾಗಿದ್ದ ಸಮ್ಮೇಳನಾಧ್ಯಕ್ಷ ಎಂ.ಜಿ. ದೇಶಪಾಂಡೆ ಅವರ ಮೆರವಣಿಗೆ ವೈಭವಪೂರ್ಣವಾಗಿ ನಡೆಯಿತು.
 
ಗ್ರಾಮದ ಹಾಲಹಳ್ಳಿ ರಸ್ತೆ ಬದಿಯಲ್ಲಿ ಅನುಭವ ಮಂಟಪದಿಂದ ಧಬಾಲೆ ಗಲ್ಲಿ, ಲಕ್ಷ್ಮೀ ವೃತ್ತ, ಗಾಂಧಿ  ವೃತ್ತದ ಮೂಲಕ ಮುಖ್ಯ ಮಾರ್ಗವಾಗಿ ವೇದಿಕೆ ವರೆಗೆ ನಡೆದ ಮೆರವಣಿಗೆ ಕನ್ನಡ ನಾಡಿನ ಸಾಂಸ್ಕೃತಿಕ ವೈಭವ ಅನಾವರಣಗೊಳಿಸಿತು.

16ನೇ ಸಾಹಿತ್ಯ ಸಮ್ಮೇಳನವಾಗಿದ್ದ ರಿಂದ 16 ಎತ್ತಿನ ಬಂಡಿಗಳಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರದೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ವೇಶಭೂಷಣದಲ್ಲಿ ಶ್ರೀ ವೀರಭದ್ರೇಶ್ವರ ಶಾಲೆ ಮಕ್ಕಳು ಗಮನ ಸೆಳೆದರು. ಬಂಡಿ ಹಿಂಬದಿಯಲ್ಲಿ ಈ ಹಿಂದೆ ನಡೆದ 16 ಸಮ್ಮೇಳನದ ಸರ್ವಾಧ್ಯಕ್ಷರ ಚಿತ್ರಗಳು ಕಂಡು ಬಂದವು.

ಶಿವಮೊಗ್ಗದ ಮಹಿಳಾ ತಂಡ ದಿಂದ ವೀರಗಾಸೆ ನೃತ್ಯ, ಚಿತ್ರದುರ್ಗದ ತಂಡದ ಪೂಜಾ ಕುಣಿತ, ಕರಿಗೆ ಕುಣಿತ, ಹಣಮಂತವಾಡಿ ಡೊಳ್ಳು ಕಲಾ ತಂಡಗಳಿದ ನಡೆದ ಪ್ರಗದರ್ಶನ ಗಮನ ಸೆಳೆದವು. ಗ್ರಾಮದ ವಿವಿಧ ಶಾಲಾ
ವಿದ್ಯಾರ್ಥಿಗಳು ಸಮವಸ್ತ್ರಗಳಲ್ಲಿ ಹೆಜ್ಜೆ ಹಾಕುತ್ತ ಲೇಜಿಮ್‌, ಡೆಂಬಲ್ಸ್‌ಗಳೊಂದಿಗೆ ನೃತ್ಯ ಮಾಡುತ್ತ ಮೆರವಣಿಗೆಗೆ ಶೋಭೆ ಹೆಚ್ಚಿಸಿದರು. 

ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರ ಸಾರಥ್ಯದಲ್ಲಿ ನಡೆದ ಮೆರವಣಿಗೆಗೆ ಗ್ರಾಮದ ಅನುಭವ ಮಂಟಪದ ಬಳಿ ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಚಾಲನೆ ನೀಡಿದರು.

ಸಾಯಗಾಂವನ ಶ್ರೀ ಶಿವಾನಂದ ದೇವರು, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಗ್ರಾಪಂ ಅಧ್ಯಕ್ಷೆ ಮಂಗಲಾ ಡೋಣಗಾಂವಕರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಶಾಂತಕುಮಾರ ಹಾರಕೂಡೆ, ಬಿಕೆಡಿಬಿ ಸದಸ್ಯ ಶಿವರಾಜ ನರಶೆಟ್ಟಿ, ತಹಶೀಲ್ದಾರ ಜಗನ್ನಾಥರೆಡ್ಡಿ, ಚಂದ್ರಪ್ಪ ಹೆಬ್ಟಾಳಕರ್‌, ಡಾ| ಬಸವರಾಜ ಬಲ್ಲೂರ, ಎಂ.ಜಿ. ರಾಜೋಳೆ, ಸಂಜು ಭೈರೆ, ಕಾಶಿನಾಥ ಬೀರಗೆ, ಗೋವಿಂದರಾವ ಸೋಮವಂಶಿ, ಮಲ್ಲಾರಿ ವಾಗಮಾರೆ, ಚಂದ್ರಕಾಂತ ಧೆಟೆ, ಮಲ್ಲಪ್ಪ ಧಬಾಲೆ, ಶ್ರೀಕಾಂತ ಇಲ್ಲಾಮಲ್ಲೆ, ಶಿವಲೀಲಾ ಮಠಪತಿ, ಬಸವರಾಜ
ಡೊಂಣಗಾಂವೆ, ಭೀಮಾಶಂಕರ ಬಿರಾದಾರ, ಬಾಬುರಾವ ಗೌಂಡಗಾವೆ, ಬಾಲಾಜಿ ಅದೆಪ್ಪ, ಆಕಾಶ ಖಂಡಾಳೆ, ದೇವೇಂದ್ರ ಭೋಪಳೆ, ಬಸವಕುಮಾರ ಕೌಟೆ, ಸಂಗಮೇಶ ಭೋಪಳೆ, ಶ್ರೀದೇವಿ ನಿಡೋದೆ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸಂಘ-ಸಂಸ್ಥೆ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಗಣ್ಯರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

ಎಸಿ ಶರಣಬಸಪ್ಪ ಕೊಟಪ್ಪಗೋಳ ರಾಷ್ಟ್ರಧ್ವಜ, ತಹಶೀಲ್ದಾರ ಜಗನ್ನಾಥರೆಡ್ಡಿ ನಾಡಧ್ವಜ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪರಿಷತ್‌ ಧ್ವಜರೋಹಣ ನೆರವೇರಿದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಸವಕಲ್ಯಾಣ: ನಿಜ ಶರಣ ಅಂಬಿಗರ ಚೌಡಯ್ಯ ಪೀಠಕ್ಕೆ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಿಎಂ ಬಿಎಸ್‌ವೈ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಬಿ.ನಾರಾಯಣರಾವ್‌...

  • ಕಲಬುರಗಿ: ದೇಹ, ತಲೆ ಮಾಸಿದರೆ ಸೋಪು, ಶ್ಯಾಂಪೋ ಹಚ್ಚಿ ಬಾಹ್ಯ ಸೌಂದರ್ಯ ಹೆಚ್ಚಿಸಲು ಹೇಗೆ ಯತ್ನಿಸುತ್ತೇವೆಯೋ ಅಂತರಂಗದ ಶುದ್ಧಿಗಾಗಿ ಪುರಾಣ-ಪ್ರವಚನ ಆಲಿಸಬೇಕೆಂದು...

  • ಬೀದರ: ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಮಾನವ ಕಳ್ಳ ಸಾಗಣೆ ಹಾಗೂ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜೊತೆ ಕೈಜೋಡಿಸಬೇಕು...

  • ಬೀದರ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ರಚಿಸಿದ ಬಸವಾದಿ ಶರಣರ ವಚನಗಳ ಅರ್ಥವನ್ನು ಅರಿತು ಅದರಂತೆ ನಾವು ನಡೆದುಕೊಳ್ಳಬೇಕು ಎಂದು ಶಾಸಕ ರಹೀಂ ಖಾನ್‌...

  • ಹುಮನಾಬಾದ: ಬೀದರ ಜಿಲ್ಲೆ ಹುಮನಾಬಾದ ಪಟ್ಟಣದಲ್ಲಿ ಪ್ರತಿವರ್ಷ ನಡೆವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಮೈಸೂರು ರಾಜಮನೆತನದ ಕೊನೆಯ ಅರಸ ಜಯಚಾಮರಾಜ...

ಹೊಸ ಸೇರ್ಪಡೆ