ಪೊಲೀಸ್ ಸರ್ಪಗಾವಲಿನಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ
ಹೂವಿನಹಳ್ಳಿ-ಅಮಲಿಹಾಳ ಗ್ರಾಮದಲ್ಲಿ ಬೀಡುಬಿಟ್ಟ ಪೊಲೀಸರು: ಗ್ರಾಮಸ್ಥರ ಮನವೊಲಿಕೆ ಯಶಸ್ವಿ
Team Udayavani, May 29, 2022, 9:32 AM IST
ಹುಣಸಗಿ: ಹೂವಿನಹಳ್ಳಿ ಹಾಗೂ ಅಮಲಿಹಾಳ ಗ್ರಾಮದ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ಸವರ್ಣಿಯರು ಹಾಗೂ ದಲಿತರ ಮಧ್ಯೆ ಏರ್ಪಟಿದ್ದ ಕಲಹ ಶನಿವಾರ ವಿಕೋಪಕ್ಕೆ ತಿರುಗಿದ್ದು ಎರಡೂ ಗ್ರಾಮಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ.
ಅಮಲಿಹಾಳ ಗ್ರಾಮದ ಹನುಮಂತ ದೇವರ ದೇವಸ್ಥಾನದ ಪ್ರವೇಶಕ್ಕೆ ಹೂವಿನಹಳ್ಳಿ ಗ್ರಾಮದ ದಲಿತರಿಗೆ ನಿರಾಕರಣೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಲಹ ಏರ್ಪಟಿತ್ತು. ಇದಕ್ಕೆ ಸಂಬಂಧಿಸಿದಂತೆ ತಾಲೂಕು ಕೇಂದ್ರ ಸುರಪುರದಲ್ಲಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿ ಘಟನೆ ಖಂಡಿಸಿದ್ದರು. ಶುಕ್ರವಾರ ಎಸ್ಪಿ ವೇದಮೂರ್ತಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದರೂ ಶನಿವಾರ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಜಿಲ್ಲಾಡಳಿತ ಎರಡೂ ಗ್ರಾಮಗಳಲ್ಲಿ ಕಲಂ 144 ಜಾರಿ ಮಾಡಿದ್ದು ಪೊಲೀಸರ ದಂಡು ಗ್ರಾಮಗಳಲ್ಲಿ ಬೀಡುಬಿಟ್ಟಿದೆ.
ಹೂವಿನಹಳ್ಳಿ ಗ್ರಾಮದ ದಲಿತರು ಪೊಲೀಸ್ ಸರ್ಪಗಾವಲಿನಲ್ಲಿ ಶನಿವಾರ ಆಮಲಿಹಾಳ ಗ್ರಾಮದ ಹನುಮಾನ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಹೂವಿನಹಳ್ಳಿ ಗ್ರಾಮದ ದಲಿತ ಕುಂಟುಬದವರು ಆಮಲಿಹಾಳ ಗ್ರಾಮದ ಹನುಮಾನ ದೇವಸ್ಥಾನಕ್ಕೆ ಪೂಜೆ ಸಲ್ಲಿಸಬೇಕಾಗಿತ್ತು. ಇದಕ್ಕೆ ಇಲ್ಲಿನ ಗ್ರಾಮಸ್ಥರು ಪ್ರವೇಶಕ್ಕೆ ನಿರ್ಬಂಧಿ ಸಿದ್ದರು. ಹೀಗಾಗಿ ಪೊಲೀಸ್ ಠಾಣೆಗೆ ಖುದ್ದು ಅರ್ಜಿ ನೀಡಿದಾಗ ನೂರಾರು ಪೊಲೀಸರ ರಕ್ಷಣೆಯೊಂದಿಗೆ ಹನುಮಾನ ದೇವಸ್ಥಾನದೊಳಗೆ ಪ್ರವೇಶ ಮಾಡಿಕೊಡಲಾಯಿತು.
ದಲಿತರು ದೇವಸ್ಥಾನದೊಳಗೆ ಹೋಗಬೇಕಾದರೆ ಪ್ರವೇಶ ಇರಲಿಲ್ಲ. ಹೀಗಾಗಿ ಮೇ 26ರಂದು ಆಮಲಿಹಾಳ ಗ್ರಾಮದಲ್ಲಿ ತಹಶೀಲ್ದಾರ್ ಹಾಗೂ ಅಧಿಕಾರಿಗಳೊಂದಿಗೆ ಶಾಂತಿ ಸಭೆ ನಡೆಸಲಾಗಿತ್ತು. ಆದರೂ ಪೊಲೀಸ್ ರಕ್ಷಣೆಯೊಂದಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಮಾಡಿಕೊಡಲಾಗಿದೆ ಎಂದು ತಹಶೀಲ್ದಾರ್ ಅಶೋಕ ಸುರಪುರಕರ್ ಹಾಗೂ ಗ್ರೇಡ್-2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ತಿಳಿಸಿದ್ದಾರೆ.
ಇದನ್ನೂ ಓದಿ:ಅಕಾಲಿಕ ಮಳೆ ರಂಬುಟಾನ್ ಕೃಷಿಗೆ ಭಾರೀ ಹೊಡೆತ; ಮಾಗುವ ಮೊದಲೇ ಮಣ್ಣುಪಾಲು
ಸಂಧಾನ ಯಶಸ್ವಿ
ಶನಿವಾರ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತಂಡ ಗ್ರಾಮಸ್ಥರ ಮನವೊಲಿಸಿ ಪೊಲೀಸ್ ಭದ್ರತೆಯಲ್ಲಿ ದಲಿತ ಜನಾಂಗದ ಸುಮಾರು 8 ಜನರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಬರುವ ಮೂಲಕ ಸ್ವಲ್ಪ ಸಮಾಧಾನದ ಘಟನೆಗೆ ನಾಂದಿ ಹಾಡಿದ್ದಾರೆ. ಆದರೆ ಎರಡೂ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು ಸಿಪಿಐ ಸುನೀಲ ಮೂಲಿಮನಿ, ಬಾಪುಗೌಡ ಪಾಟೀಲ, ದೌಲತ್ ಎನ್.ಕೆ ನೇತೃತ್ವದಲ್ಲಿ ಪಿಎಸೈ ಸುರೇಶಕುಮಾರ, ಗಜಾನಂದ ಬಿರಾದಾರ ಬಂದೋಬಸ್ತ್ ಕಲ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪದವಿ ಕಾಲೇಜು ಶುಲ್ಕ ನಿಗದಿ ಮಾಡಿದ ಕಾಲೇಜು ಶಿಕ್ಷಣ ಇಲಾಖೆ
ಅಗ್ನಿಪಥ ಯೋಜನೆ ಜಾರಿ ವಿರೋಧಿಸಿ ರಾಜಭವನ ಮುತ್ತಿಗೆಗೆ ಯುವ ಕಾಂಗ್ರೆಸ್ ಯತ್ನ
ಪೊಲೀಸ್ ಕಾನ್ಸ್ಟೇಬಲ್ : ಕನಿಷ್ಠ ಸೇವೆ 6ರಿಂದ 5 ವರ್ಷಕ್ಕೆ ಇಳಿಕೆ: ಡಿಸಿಪಿ ನಿಶಾ ಜೇಮ್ಸ್
ರಾಜ್ಯದಲ್ಲಿಂದು 816 ಕೋವಿಡ್ ಪಾಸಿಟಿವ್ : ಸಕ್ರಿಯ ಪ್ರಕರಣ 5,180
ಹೊಸಪೇಟೆ: ಏಕಾಏಕಿ ಹೊತ್ತಿ ಉರಿದ ಕಾರು ; ಪ್ರಯಾಣಿಕರು ಪಾರು