ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ
Team Udayavani, Apr 10, 2022, 3:46 PM IST
ಭಾಲ್ಕಿ: ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಬಿರಾದಾರ್ ಕಡಲೆ ಖರೀದಿ ಕೇಂದ್ರಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರೈತರ ಬೇಡಿಕೆಯಂತೆ ಗ್ರಾಮದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಕ್ವಿಂಟಲ್‌ಗೆ 5,230 ರೂ. ದರ ನಿಗದಿ ಪಡಿಸಲಾಗಿದ್ದು, ಸುತ್ತಮುತ್ತಲಿನ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದುವರೆಗೂ ಕಡಲೆ ಖರೀದಿಗಾಗಿ 400 ರೈತರು ನೋಂದಣಿ ಮಾಡಿದ್ದಾರೆ. ಒಬ್ಬ ರೈತರಿಂದ 15 ಕ್ವಿಂಟಲ್‌ವರೆಗೂ ಖರೀದಿ ಮಾಡಲಾಗುವುದು. ಮಾರುಕಟ್ಟೆಯಲ್ಲಿ ಕಡಲೆಗೆ ಕಡಿಮೆ ಬೆಲೆ ಇದ್ದು, ಖರೀದಿ ಕೇಂದ್ರದಲ್ಲಿ ಹೆಚ್ಚುವರಿ ಬೆಲೆ ನೀಡಲಾಗುತ್ತಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಸರತಿ ಪ್ರಕಾರ ಕಡಲೆ ಖರೀದಿ ಮಾಡಿ ಆಯಾ ರೈತರ ಖಾತೆಗೆ ಹಣ ಪಾವತಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಸಲೀಂ ಮುಜಾವರ್, ರಾಜಕುಮಾರ ಮಾಲಿಪಾಟೀಲ್, ಸುವರ್ಣ ಶಿವನಾಥ ವಾಲೆ, ಕಾರ್ಯದರ್ಶಿ ಸಂಗ್ರಾಮ, ಸಿಬ್ಬಂದಿ ಮಲ್ಲಿಕಾರ್ಜುನ ಕನಶೆಟ್ಟೆ, ಪ್ರವೀಣ, ಶಿರೋಮಣಿ ಹಲಗೆ ಇದ್ದರು.