ಯಲ್ಲಾಲಿಂಗ ಮುತ್ಯಾನವರ ಪುಣ್ಯ ಸ್ಮರಣೋತ್ಸವ
ಪೂಜ್ಯರು ತನ್ನಲ್ಲಿಗೆ ಬರುವ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಕೊಂಡೊಯ್ದ ಪೂಜ್ಯರಾಗಿದ್ದರು
Team Udayavani, Feb 10, 2021, 6:18 PM IST
ಕಮಲನಗರ: ತಾಲ್ಲೂಕಿನ ಭವಾನಿ ಬೀಜಲಗಾಂವ ಗ್ರಾಮದಲ್ಲಿ ಮಂಗಳವಾರ ಯಲ್ಲಾಲಿಂಗ ಮುತ್ಯಾನವರ 35ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಸರಳವಾಗಿ ನಡೆಯಿತು.
ಬಳಿಕ ದತ್ತಾತ್ರೇಯ ಮಹಾರಾಜರು ಮಾತನಾಡಿ, ಪೂಜ್ಯ ಯಲ್ಲಾಲಿಂಗ ಮಹಾರಾಜರು ಅಧ್ಯಾತ್ಮಿಕ ಜೀವಿಗಳು, ಕಾಯಕ ಯೋಗಿಗಳು, ದಾಸೋಹ ನಡೆಸುತ್ತಾ ಅನೇಕ ಭಕ್ತರ ಬಳಗವನ್ನು ಹೊಂದಿರುವ ಪೂಜ್ಯರು ತನ್ನಲ್ಲಿಗೆ ಬರುವ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಕೊಂಡೊಯ್ದ ಪೂಜ್ಯರಾಗಿದ್ದರು ಎಂದರು. ಹೇಡಗಾಪುರ ಗ್ರಾಮದ ಶಿವಲಿಂಗ ಸ್ವಾಮಿಗಳು ಮಾತನಾಡಿದರು.
ಗುರು ಯೋಗಿರಾಜ ದತ್ತಾತ್ರೇಯ ಮಹಾರಾಜರ ಪಾದಪೂಜೆ, ತುಲಾಭಾರ ನೆರವೇರಿತು. ದತ್ತಾತ್ರೇಯ ಮಹಾರಾಜರಿಗೆ ಭಕ್ತಾದಿಗಳು ಸಂಗ್ರಹಿಸಿದ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಶಂಕರಲಿಂಗ ಶಿವಾಚಾರ್ಯ ಹಣೆಗಾಂವ, ಬಸವಲಿಂಗ ಶಿವಾಚಾರ್ಯ ಕೌಳಾಸ, ಸಿದ್ಧಲಿಂಗ ಸ್ವಾಮಿಗಳು ದೇವಣಿ, ಗೋವಿಂದ ಮಹಾರಾಜ ಭವಾನಿ ದಾಬಕಾ, ಶೇಷರಾವ ಮಾನಕರಿ ದೇವಣಿ, ಗ್ರಾಪಂ ಸದಸ್ಯ ವೆಂಕಟರಾವ ಡೊಂಬಾಳೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮೇತ್ರೆ, ಅವಿನಾಶ ಹಕ್ಕೆ ಇದ್ದರು.