ಬೀದರಲ್ಲಿ ಗುರುನಾನಕರ ಜಯಂತಿ


Team Udayavani, Dec 1, 2020, 3:01 PM IST

ಬೀದರಲ್ಲಿ ಗುರುನಾನಕರ ಜಯಂತಿ

ಬೀದರ: ಸಿಖ್‌ ಬಾಂಧವರ ಆರಾಧ್ಯ ದೇವ ಗುರುನಾನಕ್‌ ಜೀ ದೇವ್‌ ಮಹಾರಾಜರ 551ನೇ ಜಯಂತಿಯನ್ನು ಸೋಮವಾರ ನಗರದ ಗುರುದ್ವಾರ ಪರಿಸರದಲ್ಲಿ ಹೆಮ್ಮಾರಿ ಕೋವಿಡ್‌-19 ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಗುರು ಗ್ರಂಥಗಳ ಭವ್ಯ ಮೆರವಣಿಗೆಯ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್‌ ಧರ್ಮಿಯರು ಸಾಕ್ಷಿಯಾದರು.

ಜಯಂತಿ ಹಿನ್ನೆಲೆಯಲ್ಲಿ ನಗರದ ಗುರುದ್ವಾರ ಪರಿಸರದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಶ್ರೀ ಗುರುನಾನಕರ ಮಂದಿರದಲ್ಲಿ ದಿನವೀಡಿ ಧಾರ್ಮಿಕ ಕೈಂಕರ್ಯಗಳು, ಗ್ರಂಥ ಪಠಣ, ಕಥೆ-ಕೀರ್ತನೆಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು. ಪ್ರತಿ ವರ್ಷ ಜಯಂತಿ ನಿಮಿತ್ತ ಸಾಯಂಕಾಲ ನಗರದ ಗುರುದ್ವಾರದಿಂದ ಅಂಬೇಡ್ಕರ ವೃತ್ತದವರೆಗೆ ವೈಭವದಿಂದ ಮೆರವಣಿಗೆ ನಡೆಯುತ್ತಿತ್ತು. ಆದರೆ, ಕೋವಿಡ್‌ನಿಂದಾಗಿ ಇದಕ್ಕೆ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ನಗರ ಜನತೆಗೆ ಈವೈಭವ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ  ಗುರುದ್ವಾರದ ಪರಿಸರದಲ್ಲೇ ಮೆರವಣಿಗೆ ನಡೆಸಿ ಭಕ್ತಿ-ಭಾವ ಮೆರೆಯಲಾಯಿತು.

ವಿಶೇಷ ಅಲಂಕೃತ ವಾಹನದಲ್ಲಿ ಗುರುನಾನಕರ ಭಾವಚಿತ್ರ ವಾಹನ ಕಣ್ಮನ ಸೆಳೆಯಿತು. ಸಿಖ್‌ ಧರ್ಮಿಯರು ಭಕ್ತಿಯಿಂದ ಭಾಗಿಯಾಗಿ ಹಾಡಿ,ಕುಣಿದು ಸಂಭ್ರಮಿಸಿದರಲ್ಲದೇ ಧಾರ್ಮಿಕ ಗ್ರಂಥ ಪಠಣ ಸಹ ನಡೆಸಿದರು. ಬಾನಂಗಳದಲ್ಲಿ ಪಟಾಕಿಗಳಬೆಳಕಿನ ಚಿತ್ತಾರ ಮೂಡಿಸಿದರೆ, ಪಾರಂಪರಿಕ ಕಲೆ ಪ್ರದರ್ಶನಗಳು ಮೈ ಜುಮ್ಮೆನಿಸಿದವು. ನೀಲಿ ಮತ್ತು ಹಳದಿ ಧ್ವಜ (ನಿಶಾನೆ ಸಾಹೇಬ್‌) ಮತ್ತು ಸಿಖರ “ಬೊಲೆ ಸೋನಿಹಾಲ್‌, ಸಶ್ರೀಯಾ ಅಕಾಲ್‌’ ಜಯ ಘೋಷಗಳು ಜನರನ್ನು ಆಕರ್ಷಿಸಿತು. ಅಲಂಕೃತ ಕುದುರೆಗಳ ಮೇಲೆ ಸಿಖ್‌ ಧರ್ಮಿಯರು ಪಾರಂಪರಿಕ ತಲವಾರ್‌ ಮತ್ತು ಚಕ್ರ ತಿರುಗಿಸುವುದು, ಕೈಯಲ್ಲಿ ತಲವಾರ್‌ ಹಿಡಿದು ಓಡುವುದು ಆಕರ್ಷಕವಾಗಿತ್ತು.

ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಬ್‌, ಪ್ರಮುಖರಾದ ಮನಪ್ರೀತ್‌ ಸಿಂಗ್‌ ಬಂಟಿ, ದರ್ಬಾರಸಿಂಗ್‌,ಪ್ರದೀಪಸಿಂಗ್‌, ದರ್ಶನಸಿಂಗ್‌, ಗುರುಪ್ರೀತಸಿಂಗ್‌ ಸೇರಿದಂತೆ ಬೆಂಗಳೂರು, ನಾಂದೇಡ, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧಡೆಯಿಂದ ಸಿಖ್‌ ಬಾಂಧವರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಡಿಡಿಎಲ್‌ಜೆ ರಂಗ ಪ್ರಯೋಗ!

ಡಿಡಿಎಲ್‌ಜೆ ರಂಗ ಪ್ರಯೋಗ!

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

4former

ದೂರದ ಕಾರ್ಖಾನೆಗೆ ಕಬ್ಬು ಸಾಗಾಟ; ಬೆಳೆಗಾರರ ಪರದಾಟ

3-college

ಈ ಶಾಲಾ ಮಕ್ಕಳಿಗೆ ಮರದ ಕೆಳಗೆ ನಿತ್ಯ ಬೋಧನೆ

19

ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!

—–18

ಗೊಂಡ ಸಮುದಾಯದಿಂದ ಸಿಎಂ ಬಳಿ ನಿಯೋಗ

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

ಮಂಗಳೂರು: ಪಬ್‌ ಮೇಲೆ ಸಿಸಿಬಿ ಪೊಲೀಸ್‌ ದಾಳಿ

Untitled-1

ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ: ಕಮಲ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.