ಹುಮನಾಬಾದ್: ಕಲ್ಲು ಗಣಿಗಾರಿಕೆಯ ಭಾರೀ ಪ್ರಮಾಣದ ಸ್ಫೋಟಕದಿಂದ ಕುಸಿದು ಬಿದ್ದ ಮನೆ ಗೋಡೆ
Team Udayavani, Jun 26, 2022, 12:55 PM IST
ಹುಮನಾಬಾದ್: ಕಲ್ಲು ಗಣಿಗಾರಿಕೆಗಾಗಿ ಸ್ಪೋಟಿಸಿದ ಭಾರೀ ಪ್ರಮಾಣದ ಸ್ಫೋಟಕದಿಂದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ತಾಲೂಕಿನ ಹಳ್ಳಿಖೇಡ(ಕೆ) ವಾಡಿಯಲ್ಲಿ ನಡೆದಿದೆ.
ತಾಲೂಕಿನ ಹಳ್ಳಿಖೇಡ(ಕೆ) ವಾಡಿ ಗ್ರಾಮದ ಲಕ್ಷ್ಮಣ ಸುಭಾಷ್ ಎಂಬುವರ ಮನೆಯ ಗೋಡೆಯಲ್ಲಿ ಬಿರುಕು ಬಿಟ್ಟು ಗೋಡೆ ಕುಸಿದು ಬಿದ್ದಿದೆ. ಶನಿವಾರ ಮಧ್ಯಾಹ್ನ ಭಾರೀ ಪ್ರಮಾಣದ ಸ್ಫೋಟಕವನ್ನು ಗಣಿಗಾರಿಕೆ ಪ್ರದೇಶದಲ್ಲಿ ಸ್ಪೋಟಿಸಿದ ಹಿನ್ನೆಲೆಯಲ್ಲಿ ಮನೆ ಬಿರುಕುಬಿಟ್ಟಿದ್ದು ಸಂಜೆ ಹೊತ್ತಿಗೆ ಗೋಡೆ ಕುಸಿದು ಬಿದ್ದಿದೆ. ಘಟನೆ ಸಂದರ್ಭದಲ್ಲಿ ರುಕ್ಮಿಣಿ ಹಾಗೂ ಅವಳ ಮಕ್ಕಳು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯವಾಗಿದೆ ಎಂದು ಮನೆಯ ಮಾಲಿಕ ಲಕ್ಷ್ಮಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಚಿಟಗುಪ್ಪ ಸಿಪಿಐ ಅಮೂಲ ಕಾಳೆ, ಹುಮನಾಬಾದ್ ತಹಶೀಲ್ದಾರ ಪ್ರದೀಪಕುಮಾರ ಭೇಟಿನೀಡಿ ಭಾನುವಾರ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ಕುರಿತು ಗ್ರಾಮಸ್ಥರು ಒಂದಾಗಿ ಕಲ್ಲು ಗಣಿಗಾರಿ ಘಟಕದ ಹತ್ತಿರ ಜಮಾಗೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆದಿದೆ.
ಸರ್ಕಾರಿ ಭೂಮಿ, ಅರಣ್ಯ ಭೂಮಿ, ಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿದ್ದರು ಕೂಡ ಅಧಿಕಾರಿಗಳು ಕಾನೂನು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ ಕ್ಷೇತ್ರದ ರಾಜಕಾರಣಿಗಳ ವಿರುದ್ದ ಹಾಗೂ ಗಣಿಗಾರಿಕೆ, ಜಿಲ್ಲಾಡಳಿತ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPCC: ಮೋದಿ, ರಾಜನಾಥ್ಸಿಂಗ್ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ