ಸೌಕರ್ಯವಿಲ್ಲದೇ ರೋಗಿಗಳ ಪರದಾಟ

ಸರ್ಕಾರಿ ಆಸ್ಪತ್ರೆಗೆ ದಾಖಲಾದರೆ ಮನೆಯಿಂದ ತರಬೇಕು ಬೆಡ್‌ಶೀಟ್‌-ಶುದ್ಧ ನೀರು!

Team Udayavani, Feb 5, 2020, 12:19 PM IST

5-Febrauary-6

ಹುಮನಾಬಾದ: ಚಿಟಗುಪ್ಪ ತಾಲೂಕು ಆಸ್ಪತ್ರೆಗೆ ಚಿಕಿತ್ಸೆ ಅರಸಿ ಬರುವ ರೋಗಿಗಳಿಗೆ ಮೂಲ ಸೌಕರ್ಯಗಳು ದೊರೆಯದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ಹರಿದ ಬೆಡ್‌ನ‌ಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಣಂತಿಯರ ವಾರ್ಡ್ ನಲ್ಲಿ ಮಹಿಳೆಯರು ಮನೆಯಿಂದಲೇ ಬೆಟ್‌ ಶೀಟ್‌ ತಂದು ಬೆಡ್‌ ಮೇಲೆ ಹಾಸಿಕೊಂಡು ಮಲಗುವ ಸ್ಥಿತಿ ಇಲ್ಲಿದೆ. ಇದೊಂದೇ ಆಸ್ಪತ್ರೆ ಎಂದರೆ ತಪ್ಪಗುತ್ತದೆ.

ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಇದೇ ಸ್ಥಿತಿ ಇದೆ. ಯಾವ ಕಾರಣಕ್ಕೆ ಬೆಡ್‌ಗಳ ಮೇಲೆ ಬೇಡ್‌ಶೀಟ್‌ ಹಾಕಿಲ್ಲ ಎಂದು ಸಿಬ್ಬಂದಿಗಳನ್ನು ವಿಚಾರಿಸಿದರೆ, ಒಗೆಯುವುದಕ್ಕೆ ಕಳುಹಿಸಲಾಗಿದೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಯಾರು ಕೇಳಿದರೂ ದಿನ ನಿತ್ಯ ಹಾಕಲಾಗುತ್ತದೆ. ಇವತ್ತೆ ಇಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಸಿಬ್ಬಂದಿ ರೋಗಿಗಳಿಗೆ ಸಮಾಧಾನ ಮಾಡುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ರೋಗಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರೆ ಬೆಟ್‌ಶೀಟ್‌ ಹಾಕುತ್ತಿಲ್ಲ. ನಾವು ಮನೆಯಿಂದ ತಂದು ಹಾಕಿಕೊಂಡಿದ್ದೇವೆ ಎಂದು ಹೆಸರು ಹೇಳಲಿಚ್ಚಿಸಿದ ಬಾಣಂತಿಯರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಎರಡೂವರೆ ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಆಸ್ಪತ್ರೆಯಲ್ಲಿಯೇ ಸ್ಥಾಪಿಸಲಾಗಿದೆ. ಆದರೆ, ಇಂದಿಗೂ ಕೂಡ ಇಲ್ಲಿನ ರೋಗಿಗಳು ಅದರಲ್ಲಿ ಹನಿ ನೀರು ಕಂಡಿಲ್ಲ. ಆಸ್ಪತ್ರೆ ಸುಧಾರಣೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಲಾಗುತ್ತಿದೆ. ಆದರೆ, ರೋಗಿಗಳಿಗೆ ನ್ಯಾಯಯುತವಾಗಿ ನೀಡಬೇಕಾದ ಮೂಲ ಸೌಕರ್ಯಗಳನ್ನು ನೀಡುವಲ್ಲಿ ಇಲ್ಲಿನ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪಗಳು ಇವೆ. ಆಸ್ಪತ್ರೆಯಲ್ಲಿನ ಬಾಣಂತಿಯರು ಬಿಸಿ ನೀರು ಹಾಗೂ ಶುದ್ಧ ಕುಡಿಯುವ ನೀರು ಬೇಕು ಎಂದರೆ, ಇದರ ಬಗ್ಗೆ ತಲೆ ಕಡೆಸಿಕೊಳ್ಳದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿಷ್ಕಾಳಜಿಯಿಂದ ವರ್ತಿಸುತ್ತಾರೆ. ಇದರಿಂದ ರೋಗಿಗಳ ಆರೈಕೆಗೆ ಬಂದಿರುವ ಸಂಬಂಧಿಕರು ಆಸ್ಪತ್ರೆಯಲ್ಲಿ ಸೌಕರ್ಯಗಳನ್ನು ನೋಡಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇತ್ತೀಚೆಗೆ ಆಸ್ಪತ್ರೆಗೆ ಬಣ್ಣ ಹಚ್ಚಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ಇಲ್ಲಿನ ಅಧಿಕಾರಿಗಳು ಕೆಲ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಆದರೆ, ಆಸ್ಪತ್ರೆ ಸುಂದರ ಕಂಡರೆ ಸಾಲದು, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳು ಕೂಡ ಸುಂದರವಾಗಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರದ ಸೌಲಭ್ಯಗಳು ಉತ್ತಮವಾಗಿ ದೊರೆಯುವಂತಾಗಬೇಕು ಎಂಬ ಅನಿಸಿಕೆಗಳನ್ನು ರೋಗಿಗಳು ವ್ಯಕ್ತಪಡಿಸಿದ್ದಾರೆ.

ಚಿಟಗುಪ್ಪ ಆಸ್ಪತ್ರೆಯಲ್ಲಿ ರೋಗಿಗಳ ಸೌಕರ್ಯಗಳು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಶುದ್ಧ ಕುಡಿಯುವ ಘಟಕ ಮುಂದಿನ ಕೆಲ ದಿನಗಳಲ್ಲಿ ಶುರುಮಾಡಿ ರೋಗಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಅಲ್ಲದೆ, ತಣ್ಣನೆಯ ನೀರು ಕುಡಿಸುವ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಮೋಘ ಬದಲಾವಣೆ ತರಲಾಗುವುದು.
ಡಾ| ವೀರನಾಥ ಕನಕ,
ಚಿಟಗುಪ್ಪ ಆಸ್ಪತ್ರೆ ಮುಖ್ಯಸ್ಥರು

ದುರ್ಯೋಧನ ಹೂಗಾರ

ಟಾಪ್ ನ್ಯೂಸ್

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಇಂಡಿಯಾ ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

cm-b-bommai

ವೀಕೆಂಡ್ ಕರ್ಫ್ಯೂ: ಎಲ್ಲಾ ಆಯಾಮಗಳಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಮಾಡುತ್ತೇವೆಂದ ಸಿಎಂ

amar jawan jyoti

ಶಾಶ್ವತವಾಗಿ ನಂದಲಿದೆ 50 ವರ್ಷಗಳಿಂದ ಬೆಳಗಿದ ಇಂಡಿಯಾ ಗೇಟ್ ಅಮರ್ ಜವಾನ್ ಜ್ಯೋತಿ!

Dulquer Salmaan tests Covid positive

ಮಲಯಾಳಂ ನಟ ದುಲ್ಖರ್ ಸಲ್ಮಾನ್ ಗೆ ಕೋವಿಡ್ ಸೋಂಕು ದೃಢ

thumb 3

2022 ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ಥಾನ!

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19kit

ಬೀದರ್‌: ಹೆಚ್ಚಿದ ಮನೆ ಮದ್ದು!

18home

ವಾರದಲ್ಲಿ ಮನೆ ಆರಂಭಿಸದಿದ್ದರೆ ಹಕ್ಕು ಪತ್ರ ವಾಪಸ್‌!

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕರ್ ಹೊಡೆದ ಮಕ್ಕಳು

ಹುಮನಾಬಾದ: ಊಟಕ್ಕೆ ಹಾಜರಾಗಿ ಲಸಿಕೆಗೆ ಚಕ್ಕರ್ ಹೊಡೆದ ಮಕ್ಕಳು

24unprivilage

ಕಡಿಮೆ ಸಾಧನೆಗೈದವರಿಗೆ ನೋಟಿಸ್‌

21protest

ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ದಾದಿಯರು

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

ಭಾರತ:24ಗಂಟೆಯಲ್ಲಿ 3.47ಲಕ್ಷ ಕೋವಿಡ್ ಪ್ರಕರಣ ಪತ್ತೆ, ಒಮಿಕ್ರಾನ್ ಸಂಖ್ಯೆ 9,692ಕ್ಕೆ ಏರಿಕೆ

4college

ಚಿಮನಚೋಡಕ್ಕೆ ಕಾಲೇಜು ಮಂಜೂರುಗೊಳಿಸಿ

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಇಂಡಿಯಾ ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

3unemplyoement

ನಿರುದ್ಯೋಗಿ ಯುವಕನ ಬದುಕನ್ನೇ ಬದಲಿಸಿದ ಹೈನೋದ್ಯಮ

2karave

ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆಗೆ ಜೈ ಕರವೇ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.