ಗ್ರಾಪಂ ವ್ಯಾಪ್ತಿಯಡಿ ಬಳಕೆಯಾಗೋ ವಿದ್ಯುತ್‌ಗೆ ಬಿಲ್‌ ನೀಡಿ


Team Udayavani, Mar 7, 2020, 4:58 PM IST

7-March-22

ಹುಮನಾಬಾದ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬಳಕೆಯಾಗುವ ವಿದ್ಯುತ್‌ಗೆ ಜೆಸ್ಕಾಂ ಇಲಾಖೆ ಬಿಲ್‌ ನೀಡಬೇಕು. ಅನಧಿಕೃತ ಸಂಕರ್ಪಕಗಳಿಗೆ ಮೀಟರ್‌ ಅಳವಡಿಸುವ ಮೂಲಕ ಪಾರದರ್ಶಕತೆ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೈಜನಾಥ ಫುಲೆ ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಕಡೆಗಳಲ್ಲಿ ಕಡಿಮೆ ವಿದ್ಯುತ್‌ ಬಳಸುತ್ತಿದ್ದರೂ ಕೂಡ ಹೆಚ್ಚು ಬಿಲ್‌ ನೀಡಲಾಗುತ್ತಿದೆ ಎಂದು ಪಿಡಿಒಗಳು ಹೇಳುತ್ತಿದ್ದಾರೆ. ಅಲ್ಲದೆ, ಕುಡಿಯುವ ನೀರಿಗಾಗಿ ಕಡಿಮೆ ಮೋಟಾರ್‌ಗಳನ್ನು ಬಳಸುತ್ತಿದ್ದರೂ ಕೂಡ ಹೆಚ್ಚು ಸಂಖ್ಯೆ ತೊರಿಸಲಾಗುತ್ತಿದ್ದು, ಯಾವ ಕಾರಣಕ್ಕೆ ಹೆಚ್ಚು ಬಿಲ್‌ ಬರುತ್ತಿದೆ ಎಂದು ಮಾಹಿತಿ ಕೇಳಿದರು.

ಇದಕ್ಕೆ ಜೆಸ್ಕಾಂನ ಮೃತ್ಯುಂಜಯ ಉತ್ತರಿಸಿ, ಒಂದು ಗ್ರಾಮದಲ್ಲಿ ಎಷ್ಟು ವಿದ್ಯುತ್‌ ಪೂರೈಕೆ ಆಗುತ್ತಿದೆ ಎಂದು ಸರಾಸರಿ ಲೆಕ್ಕ ಮಾಡಿ ಬಿಲ್‌ ನೀಡಲಾಗುತ್ತದೆ. ಕುಡಿಯುವ ನೀರಿಗಾಗಿ ಬಳಸುವ ಮೋಟಾರ್‌ಗಳಿಗೆ ಸಂಪರ್ಕ ಪಡೆಯದೇ ವಿದ್ಯುತ್‌ ಬಳಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಒಟ್ಟಾರೆ 7 ಗಂಟೆಗಳ ಲೆಕ್ಕಾಚಾರ ಹಾಕಿ ಎಷ್ಟು ಯುನಿಟ್‌ ವಿದ್ಯುತ್‌ ಬಳಕೆ ಆಗುತ್ತಿದೆ ಎಂದು ತಿಳಿದು ಬಿಲ್‌ ನೀಡಲಾಗುತ್ತಿದೆ. ಎಲ್ಲ ಸಂಪರ್ಕಗಳಿಗೆ ಮೀಟರ್‌ ಅಳವಡಿಸಿಕೊಂಡರೆ ಮೀಟರ್‌ ಸೂಚಿಸುವ ಬಿಲ್‌ ನೀಡಲಾಗುತ್ತದೆ ಎಂದು ವಿವರಣೆ ನೀಡಿದರು.

ಬಡ್ಡಿ ನೀಡಬೇಡಿ: 2015ರಲ್ಲಿ ಸರ್ಕಾರ ಎಲ್ಲ ಪಂಚಾಯತಗಳ ವಿದ್ಯುತ್‌ ಬಿಲ್‌ ಮನ್ನಾ ಮಾಡಿತ್ತು. ಅಲ್ಲದೆ, ಸರ್ಕಾರ ವಿದ್ಯುತ್‌ ಬಿಲ್‌ನ ಬಡ್ಡಿ ನೀಡದಂತೆ ತಿಳಿಸಿದೆ. ಆದರೆ, ವಿದ್ಯುತ್‌ ಇಲಾಖೆ ಪ್ರತಿವರ್ಷ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಹಾಕುತ್ತಿರುವುದು ಬೆಳಕಿಗೆ ಬಂದಿದ್ದು, ವಿದ್ಯುತ್‌ ಇಲಾಖೆ ಬಡ್ಡಿ ಹಣ ಸರ್ಕಾರದಿಂದ ಪಡೆದುಕೊಳ್ಳಬೇಕು. ಯಾವ ಗ್ರಾಮ ಪಂಚಾಯತ ಅ ಧಿಕಾರಿಗಳು ಬಡ್ಡಿ ಹಣ ಬಿಟ್ಟು, ಬಳಕೆ ಮಾಡಿದ ವಿದ್ಯುತ್‌ ಬಿಲ್‌ ಮಾತ್ರ ಪಾವತಿಸಿ ಎಂದು ಸಲಹೆ ನೀಡಿದರು.

ಜಂಟಿ ಸರ್ವೇ ನಡೆಸಿ: ತಾಲೂಕಿನ ಎಲ್ಲ ಗ್ರಾಮ ಪಂಚಾಯತ ವ್ಯಾಪ್ತಿಗಳಲ್ಲಿ ಇರುವ ವಿದ್ಯುತ್‌ ಸಂಪರ್ಕ ಹಾಗೂ ಅನ ಧಿಕೃತ ಸಂಪರ್ಕ ಅಲ್ಲದೆ, ಎಲ್‌ಇಡಿ ವಿದ್ಯುತ್‌ ದೀಪಗಳ ಬಳಕೆ ಕುರಿತು ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಜೆಸ್ಕಾಂ ಸಿಬ್ಬಂದಿಗಳು ಜಂಟಿ ಸರ್ವೇ ಕಾರ್ಯ ನಡೆಸಬೇಕು. ಅನಧಿಕೃತ ಸಂಪರ್ಕಗಳನ್ನು ಅಧಿಕೃತವಾಗಿ ಮಾಡಿಕೊಂಡು ಮೀಟರ್‌ ಅಳವಡಿಸಬೇಕು. ಮೀಟರ್‌ ಸೂಚಿಸುವ ಬಿಲ್‌ ಪಾವತಿ ಮಾಡುವ ಮೂಲಕ ಎರಡು ಇಲಾಖೆಗಳು ಪಾರದರ್ಶಕತೆ ಕಾಪಾಡಬೇಕು ಎಂದು ತಿಳಿಸಿದರು.

ಎಲ್‌ಇಡಿ ಬಗ್ಗೆ ಮಾಹಿತಿ ನೀಡಿ: ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹಾಕಿರುವ ವಿದ್ಯುತ್‌ ದೀಪಗಳ ಕುರಿತು ಎಲ್ಲ ಗ್ರಾಮ ಪಂಚಾಯತ ಅ ಧಿಕಾರಿಗಳು ಜೆಸ್ಕಾಂ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಿದರೆ ವಿದ್ಯುತ್‌ ಬಿಲ್‌ ಕಡಿಮೆ ಮಾಡಲಾಗುವುದು, ಅಲ್ಲದೆ, ಎಲ್‌ ಇಡಿ ಬಳಸುವರಿಗೆ ಯುನಿಟ್‌ಗೆ ಒಂದು ರೂ. ಕಡಿಮೆ ಆಗಲಿದೆ. ಆದರೆ, ಎಲ್ಲ ಕಡೆಗಳಲ್ಲಿ ಎಲ್‌ ಇಡಿ ದೀಪಗಳನ್ನು ಬಳಸುತ್ತಿಲ್ಲ. ಕೆಲವುಗಡೆಗಳಲ್ಲಿ ಹಳೆ ಮಾದರಿಯ ದೀಪಗಳನ್ನು ಬಳಸುತ್ತಿದ್ದಾರೆ. ಪಂಚಾಯತ ಕಡೆಯಿಂದ ಹೊಸ ದೀಪ ಹಾಳಾದ ಕೂಡಲೆ ಜನರು ಖುದ್ದು ಬದಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಈ ಮಧ್ಯೆ ಮಾಣಿಕನಗರ ಪಿಡಿಒ ಹಣಮಂತ ಮಾತನಾಡಿ, ಗ್ರಾಮೀಣ ಭಾದಲ್ಲಿ ದೀಪ ಹಾಕಿಕೊಳ್ಳುವ ದಾನಿಗಳು ಇಲ್ಲ. ಯಾವಕಡೆ ಸಮಸ್ಯೆ ಇರುತ್ತದೆ ಅಲ್ಲಿ ಪಂಚಾಯತ ಕಡೆಯಿಂದನೆ ದೀಪ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

ಖಾತೆಗೆ ಬಂದಷ್ಟು ನೀಡಬೇಕೆ?: ಈ ಮಧ್ಯೆ ಉಡಬಾಳ ಪಿಡಿಒ ಮಾತನಾಡಿ, ವಿದ್ಯುತ್‌ ಇಲಾಖೆಯವರು ಕಚೇರಿಗೆ ಬಂದು ವಿದ್ಯುತ್‌ ಬಿಲ್‌ ಪಾವತಿಗಾಗಿ ಖಾತೆಗೆ ಬಂದ ಹಣ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಖಾತೆಗೆ ಬಂದ ವಿದ್ಯುತ್‌ ಅನುದಾನ ಪೂರ್ಣ ಪ್ರಮಾಣದ ಹಣ ನೀಡಬೇಕೆ ಎಂದು ಪ್ರಶ್ನಿಸಿದರು. ಕಡಿಮೆ ವಿದ್ಯುತ್‌ ಬಿಲ್‌ ಬಂದರೂ ಕೂಡ ಪೂರ್ಣ ಹಣ ಯಾವ ಕಾರಣಕ್ಕೆ ನೀಡಬೇಕು ಎಂದು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಬಿಲ್‌ ಪಾವತಿಗಾಗಿ ಬಂದ ಅನುದಾನ ನೀಡುವುದರಲ್ಲಿ ಯಾವ ಸಮಸ್ಯೆ ಇದೆ? ಹೆಚ್ಚಿನ ಹಣ ಪಾವತಿ ಆದರೆ, ಅದು ಮುಂದಿನ ಬಿಲ್‌ನಲ್ಲಿ ಕಡಿಮೆಯಾಗುತ್ತದೆ ಎಂದು ವಿವರಿಸಿದರು. ವ್ಯವಸ್ಥಾಪಕಿ ಸವಿತಾ ಮಾತನಾಡಿ, ಪ್ರತಿವರ್ಷ ವಿದ್ಯುತ್‌ ಬಿಲ್‌ ಬೇಡಿಕೆ ಹೆಚ್ಚಾಗುತ್ತಿದೆ. ಲಕ್ಷಗಳಲ್ಲಿ ಬರುತ್ತಿದ್ದ ಬೇಡಿಕೆ ಇದೀಗ ಕೋಟಿಗಳಲ್ಲಿ ಬರುತ್ತಿದ್ದು, ಕಳೆದ ಐದು
ವರ್ಷಗಳ ವಿವರಣೆ ನೀಡಿ ಎಂದು ಹೇಳಿದರು.

ಟಾಪ್ ನ್ಯೂಸ್

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Raw paan masala worth Rs 9 lakh, saree worth Rs 3 lakh seized in Bidar

Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ

ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

1-qwewqe

Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ

ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ -ಡಿಸಿಎಂ ಭೇಟಿಯಾದ ಈಶ್ವರ್

Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.