ಮಾದರಿ ಚಿತಾಗಾರ ಸಾಕಾರ

ಘೋಡವಾಡಿ ಸ್ಮಶಾನದಲ್ಲಿ ಮೂಲಸೌಲಭ್ಯ ಗ್ರಾಮ ಪಂಚಾಯತ ಕಾರ್ಯಕ್ಕೆ ಮೆಚ್ಚುಗೆ

Team Udayavani, Feb 26, 2020, 11:52 AM IST

26-February-05

ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದ ಹೊರವಲಯದಲ್ಲಿ ಪಂಚಾಯತ ವತಿಯಿಂದ ಮಾದರಿ ಚಿತಾಗಾರ ನಿರ್ಮಾಣ ಕಾರ್ಯ ನಡೆದಿದ್ದು, ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಮದಲ್ಲಿ ಮರಾಠ ಹಾಗೂ ಮುಸ್ಲಿಂ ಸಮುದಾಯದ ಜನರ ಸಂಖ್ಯೆ ಹೆಚ್ಚಿದ್ದು, ಮರಾಠ ಸಮುದಾಯದ ಸ್ಮಶಾನ ಭೂಮಿಯಲ್ಲಿ ಮೂಲಸೌಲಭ್ಯಗಳ ಅಗತ್ಯತೆಯನ್ನು ಅರಿತುಕೊಂಡ ಪಂಚಾಯತ ಅಧಿಕಾರಿ ಮಹಾದೇವ ಹಾಗೂ ಪಂಚಾಯತ ಅಧ್ಯಕ್ಷರು ಮಾದರಿ ಸ್ಮಶಾನ ಭೂಮಿ (ಚಿತಾಗಾರ) ನಿರ್ಮಾಣಕ್ಕೆ ಒಪ್ಪಿಗೆ ಪಡೆದುಕೊಂಡು ಕಾಮಗಾರಿ ನಡೆಸಿದ್ದಾರೆ.

2019-20ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 5 ಲಕ್ಷ ವೆಚ್ಚದಲ್ಲಿ ಸಧ್ಯ ಕಾಮಗಾರಿ ಮಾಡಿದ್ದು, ಇನ್ನು ಇತರೆ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಒಂದೇ ಬಾರಿಗೆ ಎರಡು ಶವ ಶಂಸ್ಕಾರ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಮಾಡಲಾಗಿದ್ದು, ಇಲ್ಲಿಗೆ ಬರುವ ಜನರಿಗೆ ನೀರಿನ ವ್ಯವಸ್ಥೆಗೆ ಟ್ಯಾಂಕ್‌ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸ್ಮಶಾನದ ಸುತ್ತಲಿನ ಪ್ರದೇಶದಲ್ಲಿ ಗಿಡ-ಮರಗಳನ್ನು ನೆಡುವ ಯೋಜನೆ ಕೂಡ ಹಾಕಿಕೊಂಡಿದ್ದಾರೆ ಎಂದು ಪಂಚಾಯತ ಸದಸ್ಯ ಭಿಮರಾವ್‌ ಕಾಳೆ ಮಾಹಿತಿ ತಿಳಿಸಿದ್ದಾರೆ.

ಇಲ್ಲಿನ ಜನರ ಬೇಡಿಕೆ ಅನುಸಾರ ಕೆಲಸ ಮಾಡಲಾಗಿದ್ದು, ಇನ್ನು ಕೆಲ ಸ್ಥಳೀಯರು ದಾನದ ರೂಪದಲ್ಲಿ ಸ್ಮಶಾನದಲ್ಲಿ ಆಸನಗಳ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲದೆ, ಸಿಸಿ ರಸ್ತೆ ನಿರ್ಮಿಸುವ ಯೋಜನೆ ಇದ್ದು, ಇನ್ನೂ ಸ್ವಲ್ಪ ಪ್ರಮಾಣದ ಕಾಮಗಾರಿಗಳು ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಇದು ಮಾದರಿ ಚಿತಾಗಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಾದೇವ ತಿಳಿಸಿದ್ದಾರೆ.

ಈ ಹಿಂದೆ ಶವ ಸಂಸ್ಕಾರಕ್ಕೆ ಸಮಸ್ಯೆ ಎದುರಿಸುತ್ತಿದ್ದ ಮರಾಠ ಸಮುದಾಯದ ಜನರು ಇದೀಗ ಪಂಚಾಯತ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯತ ವತಿಯಿಂದ ಮಾದರಿ ಕಾರ್ಯಗಳನ್ನು ಮಾಡಿದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ಮನುಷ್ಯನ ಅಂತ್ಯ ಕಾಲದ, ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಸರಿಯಾಗಿ ಪೂರ್ಣಗೊಂಡರೆ ಮಾತ್ರ ಇಹಲೋಕ ತ್ಯಜಿಸಿದವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ವಿಧಿವಿಧಾನಗಳು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

„ದುರ್ಯೋಧನ ಹೂಗಾರ

ಟಾಪ್ ನ್ಯೂಸ್

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

2drugs

ಮೂಡಿಗೆರೆ: ಒಣ ಗಾಂಜಾ ಸಹಿತ ಆರೋಪಿ ಬಂಧನ

1-fsdfds

ಹಿಂದೂಗಳು ಹಿಂದೂಗಳಾಗಿ ಉಳಿಯಲು ‘ಅಖಂಡ’ ರಾಷ್ಟ್ರ ಮಾಡಬೇಕು: ಭಾಗವತ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23students

ವಿದ್ಯಾರ್ಥಿಗಳೇ ದೇಶದ ಅಮೂಲ್ಯ ಸಂಪತ್ತು

22emergency

ತುರ್ತು ಸೇವೆಗೆ 112 ಸಹಾಯವಾಣಿ

21protest

ಹೆದ್ದಾರಿ ತಡೆದು ಪ್ರತಿಭಟನೆ

20farmer

ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತಗೂ ಪರಿಹಾರ

16sheep

ಟಗರು ಸಾಕಾಣಿಕೆಯಿಂದ ಖುಲಾಯಿಸಿದ ಅದೃಷ್ಟ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

covid 19

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ!

rashid khan

16 ಕೋಟಿ ರೂ.ಗಾಗಿ ಪಟ್ಟು ಹಿಡಿದ ರಶೀದ್ ಖಾನ್: ಇಕ್ಕಟ್ಟಲ್ಲಿ ಸಿಲುಕಿದ ಸನ್ ರೈಸರ್ಸ್ !

3clean

ದಾಂಡೇಲಿ: ಗಬ್ಬು ನಾರುತ್ತಿರುವ ಸಂಡೆ ಮಾರ್ಕೆಟ್ ಹೊರ ಆವರಣ

baba-ramdev

ಮೋದಿಯವರ ಉದ್ದೇಶ ಒಳ್ಳೆಯದು: ರೈತರಿಗೆ ಬಾಬಾ ರಾಮ್ ದೇವ್

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

ಅಂಪೈರ್‌ ನಿತಿನ್‌ ಮೆನನ್‌- ಅಶ್ವಿ‌ನ್‌ ನಡವೆ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.