ಧರ್ಮ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಲಿ

Team Udayavani, Feb 15, 2020, 1:23 PM IST

ಹುಮನಾಬಾದ: ಮನುಷ್ಯ ಸಮಾಜ ಜೀವಿಯಾಗಿದ್ದು, ಸಮಾಜದಲ್ಲಿರುವ ನಾವುಗಳು ಧರ್ಮದ ನೀತಿ ನಿಯಮಗಳಿಗೆ ಅನುಸಾರವಾಗಿ ಬದುಕಬೇಕು ಎಂದು ಸೋಲ್ಲಾಪುರ ಸಂಸದ ಹಾಗೂ ಗೌಡಗಾಂವ ಹಿರೇಮಠ ಸಂಸ್ಥಾನ ಮಠದ ಜೈ ಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಚಿಟಗುಪ್ಪ ಪಟ್ಟಣದಲ್ಲಿ ಶುಕ್ರವಾರ ಜಗದ್ಗುರು ರೇಣುಕಾಚಾರ್ಯರ ನೂತನ ಮೂರ್ತಿ, ಹನುಮಾನ ಮೂರ್ತಿ, ನಂದಿ ಮೂರ್ತಿ, ಚೌಡೇಶ್ವರಿದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಂದಿರದ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ದೇವರ ಆಶೀರ್ವಾದ- ಅನುಗ್ರಹವಿಲ್ಲದೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ಧರ್ಮ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು. ಪ್ರತಿಯೊಬ್ಬರೂ ಬದುಕಿನ ನಿಯಮಾವಳಿಗಳು ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ತಿಳಿದುಕೊಂಡು ಕೆಲವೊಂದು ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ವಿಶ್ವದಲ್ಲಿಯೇ ಭಾರತ ಆಧ್ಯಾತ್ಮ ಹಾಗೂ ಧಾರ್ಮಿಕ ಆಚರಣೆಗೆ ಗುರುತಿಸಿಕೊಂಡಿದೆ. ಪ್ರತಿಯೊಂದು ಧರ್ಮವೂ ತನ್ನದೇಯಾದ ಇತಿಹಾಸ ಹೊಂದಿದ್ದು, ಸಾಧು-ಸಂತರು, ಶರಣರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕಾಗಿದೆ. ಚಿಟಗುಪ್ಪ ಕೂಡ ಐತಿಹಾಸಿಕ ಪಟ್ಟಣವಾಗಿದೆ. ಇದೀಗ ಇಲ್ಲಿ ನೂತನ ಮಂದಿರ ಹಾಗೂ ದೇವರ ಮೂರ್ತಿಗಳ ಸ್ಥಾಪನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಧರ್ಮ ಕ್ಷೇತ್ರವಾಗಿ ಬೆಳೆಯಲಿ ಎಂದು ಹಾರೈಸಿದರು.

ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ, ಚಿಟಗುಪ್ಪ ಅಯ್ಯಪ್ಪಸ್ವಾಮಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಹೊನ್ನಕಿರಣಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು, ನಾಗೂರನ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಸೂರ್ಯಕಾಂತ ಮಠಪತಿ, ಮಲ್ಲಿಕಾರ್ಜುನ ಪಾಟೀಲ, ವಿಶ್ವನಾಥ ಪಾಟೀಲ ಮಾಡಗೂಳ, ಪ್ರಭಾಕರ,
ದೇವಸ್ಥಾನ ಸಮಿತಿ ಅಧ್ಯಕ್ಷ ವಿಜಯಕುಮಾರ ಬೊಮಣ್ಣಿ, ಗೌರವಾಧ್ಯಕ್ಷ ಗಣೇಶ ಐನಾಪುರ, ಈರಪ್ಪ ಹೊಸಳ್ಳಿ, ರಾಜಶೇಖರ ಬಾಬುಳಗಿ, ಅಮಿತಕುಮಾರ ತೋಗಲೂರ, ಶರಣಪ್ಪ ಚನ್ನೂರ್‌, ರೇವಣಸಿದ್ದಯ್ನಾ ಮಠಪತಿ, ಈರಪಣ್ಣಾ ಕಲ್ಲೂರ್‌, ಜೀವನಬಾಬು ಹುಗ್ಗಿ,
ಅನೀಲಕುಮಾರ ಸಿರಮುಂಡಿ, ಉಮೇಶ ಸೋಲಪೂರ, ಹಣಮಂತ ನಿಪ್ಪಾಣಿ, ಮಹಾರುದ್ರಪ್ಪ ಚನ್ನೂರ, ರಾಜಶೇಖರ ಪಾಟೀಲ, ಬಸವರಾಜ ಮಡಿವಾಳ ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕುಂಬಳಕಾಯಿಯಲ್ಲಿ ಸಿಹಿಕುಂಬಳ, ಬೂದು ಕುಂಬಳ ಎಂಬ ಎರಡು ವಿಧಗಳಿವೆ. ಅದರಲ್ಲಿ ಚೀನಿಕಾಯಿ ಎಂದು ಕರೆಯಲ್ಪಡುವ ಸಿಹಿಗುಂಬಳವನ್ನು ತರಕಾರಿಯಾಗಷ್ಟೇ ಅಲ್ಲದೆ, ಮನೆ...

  • ಏಕಾದಶಿ, ಸಂಕಷ್ಟಹರ ಚತುರ್ಥಿ, ಅಂತ ದೇವರ ಹೆಸರಿನಲ್ಲಿ ಉಪವಾಸ ಮಾಡುವವರಿದ್ದಾರೆ. ಹಾಗೆ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಹಾಗೆಯೇ,...

  • ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ...

  • ಮಜೂರು - ಮಲ್ಲಾರು ಅವಳಿ ಗ್ರಾಮಗಳ ಕಾರ್ಯ ವ್ಯಾಪ್ತಿಯ ಹೈನುಗಾರರ ಬೆಳವಣಿಗೆಯ ಉದ್ದೇಶವನ್ನು ಇಟ್ಟುಕೊಂಡು ದ. ಕ. ಹಾಲು ಒಕ್ಕೂಟದ ಅಧೀನದಲ್ಲಿ 1989 ಮೇ 5ರಂದು ಮಜೂರು...

  • ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ...